ಆ್ಯಪ್ನಗರ

ಕುಟುಂಬಸ್ಥರಿಗೆ ಉದ್ಯೋಗ ಆರೋಪ: ಸುಳ್ಳು ಹೇಳುತ್ತಿರುವವರು ಯಾರು? ಪುಟ್ಟಣ್ಣನೋ ಎಚ್‌ಡಿಕೆಯೋ

ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಕುಟುಂಬದ ಕುರಿತಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಎಚ್‌ಡಿಕೆ ಹೇಳಿಕೆ ಸುಳ್ಳು ಎಂದು ಪುಟ್ಟಣ್ಣ ಹೇಳುತ್ತಿದ್ದಾರೆ. ಅಷ್ಟಕ್ಕೂ ಯಾರು ಹೇಳಿದ್ದು ಸುಳ್ಳು ಎಂಬುವುದು ಸದ್ಯದ ಕುತೂಹಲ.

Vijaya Karnataka Web 27 Oct 2020, 2:15 pm
ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಿಸಿದ್ದೇನೆ ಎಂಬ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಎಚ್‌ಡಿಕೆ ಆರೋಪವನ್ನು ಪುಟ್ಟಣ್ಣ ನಿರಾಕರಣೆ ಮಾಡಿದ್ದು ಕುಮಾರಸ್ವಾಮಿ ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದಿದ್ದಾರೆ.
Vijaya Karnataka Web HD kumaraswamy


ಕೆಲ ದಿನಗಳ ಹಿಂದೆ ಎಚ್‌ಡಿ ಕುಮಾರಸ್ವಾಮಿ ಅವರು ಪುಟ್ಟಣ್ಣ ಕುಟುಂಬದ 10 ರಿಮದ 12 ಜನರಿಗೆ ಕ್ಲಾಸ್‌ ಒನ್ ಉದ್ಯೋಗ ಕೊಡಿಸಿದ್ದೇನೆ ಎಂದಿದ್ದರು. ಕೇತಗಾನಹಳ್ಳಿ ತೋಟದ ಮನೆಯಲ್ಲಿ ಶಿಕ್ಷಕರ ಜೊತೆಗೆ ನಡೆದ ಸಭೆಯಲ್ಲಿ ಪುಟ್ಟಣ್ಣ ಕುರಿತಾಗಿ ಈ ಹೇಳಿಕೆಯನ್ನು ಎಚ್‌ಡಿಕೆ ನೀಡಿದ್ದರು. 1999-2000 ರಲ್ಲಿ ಎಚ್‌ಡಿಕೆ ಸಿಎಂ ಆಗಿದ್ದ ಅವಧಿಯಲ್ಲಿ ಉಪನ್ಯಾಸಕರ ನೇಮಕಾತಿ ನಡೆದಿತ್ತು.

ದೇಶಕ್ಕೆ ನರೇಂದ್ರ ಮೋದಿಯವರಂತೆ ರಾಜ್ಯಕ್ಕೆ ಬಿಎಸ್‌ವೈ! ಹಾಡಿ ಹೊಗಳಿದ ಕೆ.ಸಿ ನಾರಾಯಣ ಗೌಡ

ಈ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಕಾಂಗ್ರೆಸ್ ಈ ಕುರಿತಾಗಿ ತನಿಖೆಗೂ ಆಗ್ರಹ ಮಾಡಿತ್ತು. ಉದ್ಯೋಗ ವಿಚಾರವಾಗಿ ಹಗರಣ ನಡೆದಿದೆ ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪ ಮಾಡಿದ್ದರು.

ಆದರೆ ಎಚ್‌ಡಿಕೆ ಆರೋಪವನ್ನು ಪುಟ್ಟಣ್ಣ ನಿರಾಕರಣೆ ಮಾಡಿದ್ದಾರೆ. ನನ್ನ ಕುಟುಂಬದಲ್ಲಿ 10 ರಿಂದ 12 ಜನ ಕ್ಲಾಸ್‌ ಒನ್ ಅಧಿಕಾರಿಗಳು ಇಲ್ಲ. ಕುಮಾರಸ್ವಾಮಿ ಆರೋಪ ಸುಳ್ಳು ಎಂಬುವುದು ಅವರ ವಾದವಾಗಿದೆ. ಆದರೆ ಇಲ್ಲಿ ಯಾರು ಸುಳ್ಳು ಹೇಳಿದ್ದಾರೆ ಎಂಬುವುದು ಕುತೂಹಲ ಕೆರಳಿದೆ.

ಈ ಕುರಿತಾಗಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದು ಸುಳ್ಳೋ ಅಥವಾ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಹೇಳಿದ್ದು ಸುಳ್ಳೋ ಎಂಬುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ