ಆ್ಯಪ್ನಗರ

‘ಹಸಿರು ಶಾಲು ಹೊದ್ದು ಹಲ್ಲು‌ ಕಿರಿದರೆ ಸಾಲದು’ ! ಬಿಎಸ್‌ವೈ ವಿರುದ್ಧ ಎಚ್‌ಡಿಕೆ ಟ್ವೀಟ್ದಾಳಿ

ಕೇವಲ ಹಸಿರು ಶಾಲು ಹೊದ್ದು ಹಲ್ಲು ಕಿರಿದರೆ ಸಾಲದು ರೈತಪರವಾಗಿ ಸಿಎಂ ಬಿಎಸ್‌ವೈ ಕೆಲಸ ಮಾಡಬೇಕು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಟ್ವಿಟ್ಟರ್‌ನಲ್ಲಿ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿದ ಎಚ್‌ಡಿಕೆ ಕೇಂದ್ರದ ವಿರುದ್ಧನೂ ಹರಿಹಾಯ್ದರು.

Vijaya Karnataka Web 26 Jan 2020, 2:34 pm
ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭ ದಲ್ಲಿ ಹಸಿರು ಶಾಲು ಹೊದ್ದು ಹಲ್ಲು ಕಿರಿದರೆ ಸಾಲದು ರೈತರ ಪರವಾಗಿ ಕೆಲಸ ಮಾಡಬೇಕು ಎಂದು ಸಿಎಂ ಬಿಎಸ್‌ ಯಡಿಯೂರಪ್ಪನವರಿಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web jds leader h d kumaraswamy slams at chief minister bs yeddyurappa on twitter
‘ಹಸಿರು ಶಾಲು ಹೊದ್ದು ಹಲ್ಲು‌ ಕಿರಿದರೆ ಸಾಲದು’ ! ಬಿಎಸ್‌ವೈ ವಿರುದ್ಧ ಎಚ್‌ಡಿಕೆ ಟ್ವೀಟ್ದಾಳಿ


ಸರಣಿ ಟ್ವೀಟ್‌ಗಳ ಮೂಲಕ ಬಿಎಸ್‌ವೈ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ “ನಾನು ಸಿಎಂ ಆಗಿದ್ದಾಗ ರೈತರ ಸಾಲ‌ಮನ್ನಾ ಬಗ್ಗೆ ಬಿಜೆಪಿ‌ ಅನುದಿನವೂ ಕಿತಾಪತಿ ಮಾಡಿತು‌‌. ಸಾಲಮನ್ನಾ ಆಗಿಲ್ಲ‌ ಎಂದು ಭಾಷಣವೀರ ಮೋದಿ‌ ಕೂಡ ಹೇಳಿದ್ದರು. ಆದರೆ ಇಂದು ಕೇಂದ್ರ ಬಿಜೆಪಿ ಸರ್ಕಾರ ರೈತರ ಬೆಳೆ-ಒಡವೆ ಸಾಲದ ಬಡ್ಡಿ‌ ಮೇಲಿನ ಸಬ್ಸಿಡಿಗೆ ಮಣ್ಣು ಹಾಕಿದೆ” ಎಂದು ಟ್ವೀಟ್ದಾಳಿ ನಡೆಸಿದ್ದಾರೆ.

“ಪ್ರಮಾಣ ವಚನದಲ್ಲಿ ಹಸಿರು ಶಾಲು ಹೊದ್ದು ಹಲ್ಲು‌ ಕಿರಿದರೆ ಸಾಲದು, ಕಿಸಾನ್ ಸಮ್ಮಾನ್ ಎಂಬ ಹೆಸರಲ್ಲಿ ಪ್ರಧಾನಿ ಬೂಟಾಟಿಕೆ ಮಾಡಿದರೆ ಆಗದು. ಕೇಂದ್ರ ಸರ್ಕಾರ ಕೂಡಲೇ ರೈತರ ಬೆಳೆ-ಒಡವೆ ಸಾಲದ ಬಡ್ಡಿಯ ಮೇಲಿನ ಸಬ್ಸಿಡಿ‌ ಬಿಡುಗಡೆ ಮಾಡಬೇಕು.ಇಲ್ಲವೇ ರಾಜ್ಯವೇ ಅದನ್ನು‌ ಭರಿಸಬೇಕು. ಇಲ್ಲದಿದ್ದರೆ ಬಿಜೆಪಿ ರೈತ ವಿರೋಧಿ ಎಂಬುದನ್ನು ಒಪ್ಪಬೇಕು” ಎಂದು ತರಾಟೆಗೆ ತೆಗೆದಿಕೊಂಡಿದ್ದಾರೆ.

ಸಂಪುಟ ವಿಸ್ತರಣೆ ಸಂಕಟ: ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧಎಂದ ಮಾಧುಸ್ವಾಮಿ


“ರೈತರ ಬೆಳೆ ಮತ್ತು ಒಡವೆ ಸಾಲಗಳ ಬಡ್ಡಿಗೆ ನೀಡಬೇಕಾದ ಸಬ್ಸಿಡಿಯನ್ನು‌ ನಿಲ್ಲಿಸಿರುವ ಸರ್ಕಾರ ರೈತರನ್ನು ಲೇವಾದೇವಿದಾರರಿಗೆ ಶರಣಾಗುವಂತೆ ಮಾಡಿದೆ. ಇನ್ನೊಂದೆಡೆ ಬ್ಯಾಂಕ್‌ಗಳಲ್ಲಿರುವ ಬಡವರ ಚಿನ್ನವನ್ನು ಹರಾಜಿನ‌ ಮೂಲಕ‌ ಕೇಂದ್ರ ಸರ್ಕಾರ ಲಪಟಾಯಿಸುತ್ತಿದೆ” ಎಂದು ಆರೋಪಿಸಿದರು.


“ಭಾರತೀಯ ಪ್ರಜಾಪ್ರಭುತ್ವದ ಆತ್ಮ ಸಂವಿಧಾನ ಜಾರಿಗೆ ಬಂದ ದಿನವಿದು. ಎಲ್ಲರನ್ನೂ ಸಮಾನರೆಂದು ನೋಡುವ, ಸಮಾನ ಅವಕಾಶ ನೀಡುವ ಸಂವಿಧಾನದ ಆಶಯಗಳನ್ನೇ ಬಳಸಿಕೊಂಡು ಅಧಿಕಾರಕ್ಕೆ ಬಂದ ಶಕ್ತಿಗಳು ಇಂದು ಅದರ ಆತ್ಮಕ್ಕೇ ಕೈ ಹಾಕಿ ಕೊಲ್ಲುವ ಮಟ್ಟಕ್ಕಿಳಿದಿವೆ. ಈ ಮೂಲಕ ಶಾಶ್ವತ ಅಧಿಕಾರ ರಕ್ಷಣೆಗೆ ಮುಂದಾಗಿವೆ. ಇದರ ವಿರುದ್ಧ ಹೋರಾಡುವ ಪಣ ನಮ್ಮದಾಗಲಿ” ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ