ಆ್ಯಪ್ನಗರ

ಜೆಡಿಎಸ್‌ ಪಾಲಿನ ನಿಗಮ ಮಂಡಳಿಗೆ ನೇಮಕ

ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರು ಸೇರಿದಂತೆ ಜೆಡಿಎಸ್‌ನ 9 ಮಂದಿ ಶಾಸಕರು ಹಾಗೂ ರಾಷ್ಟ್ರೀಯ ಪದಾಧಿಕಾರಿಯೊಬ್ಬರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮಾಜಿ ಶಾಸಕರೊಬ್ಬರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ಮೈತ್ರಿ ಸರಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್‌ನಂತೆ ಜೆಡಿಎಸ್‌ ಶಾಸಕರಿಗೂ 'ಅಧಿಕಾರ ಭಾಗ್ಯ' ದೊರೆತಿದೆ. ಜತೆಗೆ ಕಾಂಗ್ರೆಸ್‌ನ ಮತ್ತಿಬ್ಬರು ಶಾಸಕರಿಗೂ ಅವಕಾಶ ಕಲ್ಪಿಸಲಾಗಿದೆ.

Vijaya Karnataka 27 Feb 2019, 5:00 am
ಬೆಂಗಳೂರು : ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರು ಸೇರಿದಂತೆ ಜೆಡಿಎಸ್‌ನ 9 ಮಂದಿ ಶಾಸಕರು ಹಾಗೂ ರಾಷ್ಟ್ರೀಯ ಪದಾಧಿಕಾರಿಯೊಬ್ಬರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮಾಜಿ ಶಾಸಕರೊಬ್ಬರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ಮೈತ್ರಿ ಸರಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್‌ನಂತೆ ಜೆಡಿಎಸ್‌ ಶಾಸಕರಿಗೂ 'ಅಧಿಕಾರ ಭಾಗ್ಯ' ದೊರೆತಿದೆ. ಜತೆಗೆ ಕಾಂಗ್ರೆಸ್‌ನ ಮತ್ತಿಬ್ಬರು ಶಾಸಕರಿಗೂ ಅವಕಾಶ ಕಲ್ಪಿಸಲಾಗಿದೆ.
Vijaya Karnataka Web jds mlas appointed to board corporation
ಜೆಡಿಎಸ್‌ ಪಾಲಿನ ನಿಗಮ ಮಂಡಳಿಗೆ ನೇಮಕ


ಕಾಂಗ್ರೆಸ್‌ ಶಾಸಕರನ್ನು ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಿ ಜೆಡಿಎಸ್‌ ಶಾಸಕರನ್ನು ನೇಮಿಸದೇ ಇರುವ ಬಗ್ಗೆ ಪಕ್ಷದೊಳಗೆ ಅಸಮಾಧಾನ ಕೇಳಿಬಂದಿತ್ತು. ಜತೆಗೆ ಶಾಸಕರ ಬದಲಿಗೆ ಪಕ್ಷದ ಹಿರಿಯ ಕಾರ್ಯಕರ್ತರನ್ನು ನಿಗಮ, ಮಂಡಳಿಗಳಿಗೆ ನೇಮಿಸಲು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಗಂಭೀರ ಚಿಂತನೆ ನಡೆಸಿದ್ದರು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಲೆಕ್ಕಾಚಾರ ಕೈಕೊಡಬಹುದೆಂಬ ಆತಂಕದಿಂದ ಶಾಸಕರಿಗೆ ಮಣೆಹಾಕಲಾಗಿದೆ.

ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಜಫ್ರುಲ್ಲಾಖಾನ್‌ ಹಾಗೂ ಮಾಜಿ ಶಾಸಕರ ಪೈಕಿ ಎನ್‌.ಎಚ್‌.ಕೋನರೆಡ್ಡಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಯಾದಗಿರಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಹಾಸನ ಜಿಲ್ಲೆಗಳ ಶಾಸಕರಿಗೆ ಆದ್ಯತೆ ನೀಡಲಾಗಿದೆ.

ರೇವಣ್ಣ ಮೇಲುಗೈ

ಕಾಂಗ್ರೆಸ್‌ನ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ನೇಮಕಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ ಈ ನಿಗಮ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ರೇವಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಡೆ ಹಿಡಿದಿದ್ದರು. ಜತೆಗೆ ಬಿಡಿಎ, ಬಿಎಂಟಿಸಿ, ರಸ್ತೆ ನಿಗಮ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಂಗ್ರೆಸ್‌ ಶಿಫಾರಸು ಮಾಡಿದ್ದ ಪಟ್ಟಿಗೆ ಸಿಎಂ ಸಹಿ ಹಾಕಿರಲಿಲ್ಲ.

ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾದ ಬಳಿಕ ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯೊಂದನ್ನು ಹೊರತುಪಡಿಸಿ ಉಳಿದ ನಿಗಮಗಳ ನೇಮಕಕ್ಕೆ ಸಹಿ ಹಾಕುವುದಾಗಿ ಸಿಎಂ ಹೇಳಿದ್ದರು. ಆದರೆ ರಸ್ತೆ ಅಭಿವೃದ್ಧಿ ನಿಗಮಕ್ಕೆ ಯಾವುದೇ ಅಧ್ಯಕ್ಷರು ನೇಮಕವಾಗದಂತೆ ತಡೆಯುವಲ್ಲಿ ರೇವಣ್ಣ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್‌ನ ಇಬ್ಬರಿಗೆ ಹುದ್ದೆ:

ಕಾಂಗ್ರೆಸ್‌ ಶಾಸಕ ವೆಂಕಟರಮಣಯ್ಯ ಅವರಿಗೆ ರಸ್ತೆ ಅಭಿವೃದ್ಧಿ ನಿಗಮದ ಬದಲಿಗೆ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನೀಡಲಾಗಿದೆ. ರೆಬೆಲ್‌ ಶಾಸಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಭೀಮಾನಾಯಕ್‌ಗೆ ತಾಂಡಾ ಅಭಿವೃದ್ಧಿ ನಿಗಮ ನೀಡಲಾಗಿದೆ.

ಎನ್‌.ಎಚ್‌.ಕೋನರೆಡ್ಡಿ :ಸಿಎಂ ರಾಜಕೀಯ ಕಾರ್ಯದರ್ಶಿ

ನಾಗನಗೌಡ ಕಂದಕೂರು: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ

ರಾಜಾವೆಂಕಟಪ್ಪ ನಾಯಕ : ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ

ಡಿ.ಸಿ.ಗೌರಿಶಂಕರ್‌:ಎಂಎಸ್‌ಐಎಲ್‌

ಬಿ.ಸತ್ಯನಾರಾಯಣ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ

ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌.: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ

ಡಾ.ಕೆ.ಅನ್ನದಾನಿ : ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ

ಕೆ.ಎಂ.ಶಿವಲಿಂಗೇಗೌಡ : ಕರ್ನಾಟಕ ಗೃಹ ಮಂಡಳಿ

ಕೆ.ಮಹದೇವ: ರಾಜ್ಯ ಕೈಗಾರಿಕಾ ಮೂಲಸೌಕಯ್ಯ ಅಭಿವೃದ್ಧಿ ನಿಗಮ

ದೇವಾನಂದ ಪೂಲಸಿಂಗ್‌ ಚವ್ಹಾಣ್‌ : ಸಿಎಂ ಸಂಸದೀಯ ಕಾರ್ಯದರ್ಶಿ (ಪ್ರಾಥಮಿಕ ಶಿಕ್ಷಣ)

ಮೊಹಮ್ಮದ್‌ ಜಫ್ರುಲ್ಲಾ ಖಾನ್‌: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಟಿ.ವೆಂಕಟರಮಣಯ್ಯ: ರಾಜ್ಯ ಅರಣ್ಯ ಕೈಗಾರಿಕಾ ನಿಗಮ

ಎಸ್‌.ಭೀಮಾನಾಯಕ್‌ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ