ಆ್ಯಪ್ನಗರ

ಇಕ್ಕಟ್ಟಿನಲ್ಲಿ ರೆಬೆಲ್‌ ಸ್ಟಾರ್ಸ್‌

ಉಪಚುನಾವಣೆಗೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದು ಮೂವರು ಜೆಡಿಎಸ್‌ ರೆಬೆಲ್‌ ಸ್ಟಾರ್‌ಗಳನ್ನು ಇಕ್ಕಟ್ಟಿಗೆ ...

Vijaya Karnataka 9 Oct 2018, 5:00 am
ಬೆಂಗಳೂರು: ಉಪಚುನಾವಣೆಗೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದು ಮೂವರು ಜೆಡಿಎಸ್‌ ರೆಬೆಲ್‌ ಸ್ಟಾರ್‌ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
Vijaya Karnataka Web chaluvarayaswamy2


ಕಳೆದ ಸರಕಾರದ ಅವಧಿಯಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಜೆಡಿಎಸ್‌ನ ಮಾಜಿ ಮುಖಂಡರಾದ ಮಾಗಡಿ ಬಾಲಕೃಷ್ಣ, ನಾಗಮಂಗಲದ ಚಲುವರಾಯಸ್ವಾಮಿ ಹಾಗೂ ಶ್ರೀರಂಗಪಟ್ಟಣದ ರಮೇಶ್‌ ಬಂಡಿಸಿದ್ದೇಗೌಡ ಎರಡೂ ಕ್ಷೇತ್ರದಲ್ಲಿ ಮೈತ್ರಿ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಒತ್ತಾಸೆ ಮೇರೆಗೆ ಕಾಂಗ್ರೆಸ್‌ ಸೇರಿದ್ದ ಈ ಮೂವರು ಈಗ ಎರಡು ಕ್ಷೇತ್ರದಲ್ಲಿ ಜೆಡಿಎಸ್‌ ಪರವಾಗಿ ಕೆಲಸ ಮಾಡುವುದಕ್ಕೆ ಸಿದ್ಧ್ದರಿಲ್ಲ. ಆದರೆ ಅವರನ್ನು ಪಕ್ಷಕ್ಕೆ ಕರೆ ತಂದ ಇಬ್ಬರು ಮುಖಂಡರು ಈಗ ಮೈತ್ರಿ ಉಳಿಸಿಕೊಳ್ಳುವುದಕ್ಕೆ ವಿರತ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ರಾಜಕೀಯ ರೆಬೆಲ್‌ಸ್ಟಾರ್‌ಗಳು ಈಗ ಪರಿಸ್ಥಿತಿಯ ಬಲಿಪಶುಗಳಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ