ಆ್ಯಪ್ನಗರ

ಎಂ.ಎಂ.ಕಲ್ಬುರ್ಗಿ ಹತ್ಯೆ ಕೇಸ್ ಎಸ್‌ಐಟಿ ತನಿಖೆಗೆ ?

ಗೌರಿ ಲಂಕೇಶ್‌ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ( ಎಸ್‌ಐಟಿ ) ಎಂ.ಎಂ.ಕಲ್ಬುರ್ಗಿ ಹತ್ಯೆ ಕೇಸನ್ನು ನಡೆಸುವ ಸಾಧ್ಯತೆ ಇದೆ. ರಾಜ್ಯ ಸರಕಾರ ಈ ಕುರಿತು ಚರ್ಚೆ ನಡೆಸುತ್ತಿದ್ದು, ಇನ್ನೊಂದು ಅಥವಾ ಎರಡು ವಾರಗಳಲ್ಲಿ ಕಲ್ಬುರ್ಗಿ ಹತ್ಯೆ ತನಿಖೆಯನ್ನು ಎಸ್‌ಐಟಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

TIMESOFINDIA.COM 16 Jun 2018, 12:41 pm
ಬೆಂಗಳೂರು: ಗೌರಿ ಲಂಕೇಶ್‌ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ( ಎಸ್‌ಐಟಿ ) ಎಂ.ಎಂ.ಕಲ್ಬುರ್ಗಿ ಹತ್ಯೆ ಕೇಸನ್ನು ನಡೆಸುವ ಸಾಧ್ಯತೆ ಇದೆ. ರಾಜ್ಯ ಸರಕಾರ ಈ ಕುರಿತು ಚರ್ಚೆ ನಡೆಸುತ್ತಿದ್ದು, ಇನ್ನೊಂದು ಅಥವಾ ಎರಡು ವಾರಗಳಲ್ಲಿ ಕಲ್ಬುರ್ಗಿ ಹತ್ಯೆ ತನಿಖೆಯನ್ನು ಎಸ್‌ಐಟಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
Vijaya Karnataka Web MM Kalburgi


ಆದರೆ, ಹತ್ಯೆ ನಡೆದು ಸಾಕಷ್ಟು ಕಾಲ ಗತಿಸಿರುವುದರಿಂದ ಈಗ ಈ ಕೇಸನ್ನು ಪರಿಹರಿಸುವುದು ಸಾಧ್ಯವೇ ಎಂದು ಎಸ್‌ಐಟಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಕಲ್ಬುರ್ಗಿಯನ್ನು ಹತ್ಯೆ ಮಾಡಿದ ಪಿಸ್ತೂಲಿನಲ್ಲೇ ಗೌರಿ ಲಂಕೇಶ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಅಲ್ಲದೆ, ಗೌರಿ ಹತ್ಯೆಯ ಆರೋಪಿ ಅಮೋಲ್ ಕಾಳೆ ಕಲ್ಬುರ್ಗಿ ಹತ್ಯೆಯಾದ ದಿನ ಅವರ ಮನೆಯ ಬಾಗಿಲು ತಟ್ಟಿದ್ದ ಎಂದು ತಿಳಿದುಬಂದಿದೆ. ಆಗಸ್ಟ್ 30, 2015ರಂದು ಕಲ್ಬುರ್ಗಿ ಹತ್ಯೆಯಾಗಿದ್ದು, ಅದೇ ದಿನ ಅಮೋಲ್ ಕಾಳೆ ಅವರ ಮನೆಯ ಬಾಗಿಲು ತಟ್ಟಿದ್ದ. ಈ ಎರಡು ಸಂಗತಿಗಳನ್ನು ಬಿಟ್ಟು ಈ ಕೇಸಿನಲ್ಲಿ ಯಾವುದೇ ಸುಳಿವಿಲ್ಲ. ಜತೆಗೆ, ಪ್ರಕರಣ ನಡೆದು 3 ವರ್ಷ ಕಳೆದಿರುವುದರಿಂದ ದೂರವಾಣಿ ಕರೆಯ ದಾಖಲಾತಿಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಸಹ ಎಸ್‌ಐಟಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಅಲ್ಲದೆ, ಗೌರಿ, ಕಲ್ಬುರ್ಗಿ ಹಾಗೂ ಮಹಾರಾಷ್ಟ್ರ ಸಿಪಿಐ ನಾಯಕ ಗೋವಿಂದ್ ಪನ್ಸಾರೆಯನ್ನು ಒಂದೇ ಬಂದೂಕಿನಿಂದ ಹತ್ಯೆ ಮಾಡಿದ್ದರೂ ಸಹ ಹತ್ಯೆಯ ಬಗ್ಗೆ ಪ್ಲಾನ್ ಮಾಡಿದವರು ಬೇರೆ ಬೇರೆ ವ್ಯಕ್ತಿಗಳು ಎಂದು ಮಾಹಿತಿ ನೀಡಿದ್ದಾರೆ.

ಈ ಮೂರೂ ಹತ್ಯೆಗಳನ್ನು ನಡೆಸಿರುವುದರಲ್ಲಿ ಬಲಪಂಥೀಯ ಸಂಘಟನೆಗಳ ಕೈವಾಡವಿದೆ ಎಂಬ ಪಿಟಿಐ ವರದಿಯನ್ನು ಎಸ್‌ಐಟಿ ಅಧಿಕಾರಿಯೊಬ್ಬರು ಪ್ರಸ್ತಾಪಿಸಿದ್ದಾರೆ. ಅಲ್ಲದೆ, 60 ಸದಸ್ಯರ ಈ ಸಂಘಟನೆ ದೇಶದ 5 ರಾಜ್ಯಗಳಲ್ಲಿ ಹರಡಿದೆ ಎಂಬ ಮಾಹಿತಿ ತಿಳಿದು ಬಂದಿದ್ದರೂ ಸಹ ಸಂಘಟನೆಯ ಹೆಸರು ಮಾತ್ರ ತಿಳಿದುಬಂದಿಲ್ಲ. ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದಲ್ಲಿ ಈ ಸಂಘಟನೆ ಹರಡಿಕೊಂಡಿದ್ದು, ಆದರೆ ಉತ್ತರ ಪ್ರದೇಶದ ಸಂಪರ್ಕ ಮಾತ್ರ ತಿಳಿದುಬಂದಿಲ್ಲ ಎಂದು ಎಸ್‌ಐಟಿ ಅಧಿಕಾರಿ ಹೇಳಿದ್ದಾರೆ. ಅಲ್ಲದೆ, ಸನಾತನ ಸಂಸ್ಥೆ ಹಾಗೂ ಹಿಂದೂ ಜಾಗೃತಿ ಸಮಿತಿಯ ಸಂಘಟನೆಗಳಿಂದ ಜನರನ್ನು ಬಳಸಿಕೊಂಡಿದ್ದರೂ ಸಹ ಈ ಸಂಘಟನೆಗಳಿಗೂ ಹತ್ಯೆ ಪ್ರಕರಣಗಳಿಗೂ ನೇರವಾದ ಸಂಪರ್ಕವಿಲ್ಲ. ಜತೆಗೆ ಎರಡೂ ಸಂಘಟನೆಗಳು ಕೊಲೆ ಕೇಸುಗಳಲ್ಲಿ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ ಎಂದು ಸಹ ಎಸ್‌ಐಟಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇನ್ನು, ಹತ್ಯೆ ಪ್ರಕರಣಗಳಿಗೆ ಪ್ಲಾನ್ ಮಾಡಲು ಹಾಗೂ ಕಾರ್ಯಾಚರಣೆ ರೂಪಿಸಲು ಕನಿಷ್ಠ 6 ತಿಂಗಳಿನಿಂದ 1 ವರ್ಷದವರೆಗೆ ಸಮಯ ತೆಗೆದುಕೊಂಡಿದ್ದಾರೆ. ಜತೆಗೆ, ಮೈಸೂರಿನ ವಿಚಾರವಾದಿ ಭಗವಾನ್ ಹತ್ಯೆಗೆ ಹಲವು ದಿನಗಳಿಂದ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ನಾವು ಆರೋಪಿಗಳನ್ನು ವಶಪಡಿಸಿಕೊಂಡಿದ್ದೇವೆ. ಅಲ್ಲದೆ, ಅವರ ಬಳಿ ದೊರೆತ ಡೈರಿಯೊಂದರಲ್ಲಿ ಜ್ಙಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಸೇರಿ ಹಲವರ ಹೆಸರು ಟಾರ್ಗೆಟ್ ಲಿಸ್ಟ್‌ನಲ್ಲಿ ಇದೆ. ಗಿರೀಶ್ ಕಾರ್ನಾಡ್ ಹತ್ಯೆಗೂ ಬಹಳ ದಿನಗಳಿಂದ ಸಂಚು ರೂಪಿಸಲಾಗಿದ್ದು, ಕಾರ್ಯಾಚರಣೆ ಕೊನೆಯ ಹಂತದಲ್ಲಿತ್ತು ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ