ಆ್ಯಪ್ನಗರ

ಕನ್ನಿಮೋಳಿ ಖುಲಾಸೆಗೆ ಉಡುಪಿ ಶ್ರೀಕೃಷ್ಣನ ಅನುಗ್ರಹ!

2ಜಿ ತರಂಗಾಂತರ ಹಗರಣದಿಂದ ಪುತ್ರಿ ಕನ್ನಿಮೋಳಿಗೆ ತಿಹಾರ್ ಜೈಲು, ಹಗರಣದಿಂದ ಮುಕ್ತಿ ಸಿಗಲೆಂದು ತಾಯಿ ರಜತಿ ಅಮ್ಮಾಳ್ 6 ವರ್ಷಗಳ ಹಿಂದೆ ಉಡುಪಿಗೆ ಬಂದಿದ್ದರು.

Vijaya Karnataka 21 Dec 2017, 9:55 pm
ಉಡುಪಿ: 2ಜಿ ತರಂಗಾಂತರ ಹಗರಣದಿಂದ ಪುತ್ರಿ ಕನ್ನಿಮೋಳಿಗೆ ತಿಹಾರ್ ಜೈಲು, ಹಗರಣದಿಂದ ಮುಕ್ತಿ ಸಿಗಲೆಂದು ತಾಯಿ ರಜತಿ ಅಮ್ಮಾಳ್ 6 ವರ್ಷಗಳ ಹಿಂದೆ ಉಡುಪಿಗೆ ಬಂದಿದ್ದರು.
Vijaya Karnataka Web kanimozhi mother visited udupi
ಕನ್ನಿಮೋಳಿ ಖುಲಾಸೆಗೆ ಉಡುಪಿ ಶ್ರೀಕೃಷ್ಣನ ಅನುಗ್ರಹ!


ಶ್ರೀಕೃಷ್ಣ ಮುಖ್ಯಪ್ರಾಣನಿಗೆ ಪ್ರಾರ್ಥನೆ, ಹರಕೆ ಸಲ್ಲಿಸಿದ್ದರು. ಪರ್ಯಾಯ ಪೀಠದಲ್ಲಿದ್ದ ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರಿಂದ ಅಭಯವನ್ನೂ ಪಡೆದಿದ್ದರು.

2011, ಸೆ. 26ಕ್ಕೆ ಕೊಲ್ಲೂರು ಶ್ರೀಮೂಕಾಂಬಿಕೆಯ ದರ್ಶನ ಪಡೆದು, ಮಗಳಿಗೆ ತಿಹಾರ್ ಜೈಲು, ಹಗರಣದಿಂದ ಮುಕ್ತಿ ಸಿಗಲೆಂದು ಪ್ರಾರ್ಥಿಸಿ, ಸೇವೆ ಸಲ್ಲಿಸಿದ ಬಳಿಕ ಉಡುಪಿ ಶ್ರೀಕೃಷ್ಣ, ಮುಖ್ಯಪ್ರಾಣರ ದರ್ಶನಕ್ಕಾಗಿ ರಜತಿ ಅಮ್ಮಾಳ್ ಬಂದಿದ್ದರು.

ಪರ್ಯಾಯ ಪೀಠದಲ್ಲಿದ್ದ ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರಲ್ಲೂ ಪ್ರಾರ್ಥನೆ ಸಲ್ಲಿಸಿದ್ದರು. ಶ್ರೀಕೃಷ್ಣ ಮುಖ್ಯಪ್ರಾಣನ ಅನುಗ್ರಹ 48ದಿನದೊಳಗೆ ಪರಿಣಾಮ ಬೀರಲಿದ್ದು ಪುತ್ರಿ ಬಿಡುಗಡೆ, ಹಗರಣ ದೋಷಮುಕ್ತರಾದ ಬಳಿಕ ಮತ್ತೆ ಉಡುಪಿಗೆ ಬಂದು ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸಿದ್ದರು.

ರಜತಿ ಅಮ್ಮಾಳ್ ಸಲ್ಲಿಸಿದ ಸೇವೆಗಾಗಿ ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಶ್ರೀಕೃಷ್ಣನ ವಿಗ್ರಹ ಸಹಿತ ಆಶೀರ್ವಾದ ಮಾಡಿದ್ದರು. ಕನ್ನಿಮೋಳಿ ಡಿಎಂಕೆ ವರಿಷ್ಠ ಕರುಣಾನಿ ಅವರ ಮೂರನೇ ಮಡದಿಯ ಪುತ್ರಿಯಾಗಿದ್ದಾರೆ.

ರಜತಿ ಅಮ್ಮಾಳ್ ಅವರು ತನ್ನ ಪತಿ ಕರುಣಾನಿ ಅವರಿಗೂ 2ಜಿ ತರಂಗಾಂತರ ಹಗರಣದ ಕುಣಿಕೆ ಸುತ್ತಿಕೊಳ್ಳದಿರಲಿ ಎನ್ನುವ ಆಶಯ ಶ್ರೀಕ್ಷೇತ್ರ ಕೊಲ್ಲೂರು ಹಾಗೂ ಉಡುಪಿ ಭೇಟಿ ಹಿಂದಿತ್ತು. ಪತಿ ನಾಸ್ತಿಕನಾಗಿದ್ದರೂ ಪತ್ನಿ ರಜತಿ ಅಮ್ಮಾಳ್ ಹತ್ತು ಹಲವು ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ಅನುಗ್ರಹದ ಪುಣ್ಯ ಸಂಪಾದನೆಗೆ ಯತ್ನಿಸಿದ್ದರು.

ಕರುಣಾನಿ ಕುಟುಂಬದ ಮೇಲೆ 2ಜಿ ಸಹಿತ ವಿವಿಧ ಹಗರಣಗಳ ಕರಿನೆರಳು ಬಿದ್ದಿದೆ. ತಮಿಳ್ನಾಡಿನಲ್ಲಿ ಜಯಲಲಿತಾ ಸರಕಾರ ಬಂದ ಮೇಲಂತೂ ತಮ್ಮ ಕುಟುಂಬದ ಸಂಕಷ್ಟ ಹೆಚ್ಚಿದೆ ಎಂದು ಮಠಕ್ಕೆ ಭೇಟಿ ನೀಡಿದ ಬಳಿಕ ಸಂಕಷ್ಟ ತೋಡಿಕೊಂಡಿದ್ದರು. ಛಾಯಾಚಿತ್ರ ತೆಗೆಯಲು ಅವಕಾಶ ನೀಡದೆ ಗುಟ್ಟಾಗಿ ಭೇಟಿ ನೀಡಿ ತೆರಳಿದ್ದರು.

ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಉಳ್ಳವರಿಗೆ ಹಾಗೂ ಯಾವುದೇ ತಪ್ಪು ಮಾಡದವರಿಗೆ ಶ್ರೀಕೃಷ್ಣ ಮುಖ್ಯಪ್ರಾಣರ ಅನುಗ್ರಹವಿರುತ್ತದೆ. ಡಿಎಂಕೆ ನಾಯಕ ಕರುಣಾನಿ ಪುತ್ರಿ ಕನ್ನಿಮೋಳಿಗೆ ತಿಹಾರ್ ಜೈಲು, ಹಗರಣದಿಂದ ಮುಕ್ತಿ ದೊರೆತ ಹಿನ್ನೆಲೆಯಲ್ಲಿ ರಜತಿ ಅಮ್ಮಾಳ್ ಪುತ್ರಿ ಜತೆ ಉಡುಪಿಗೆ ಬರುವ ನಿರೀಕ್ಷೆಯಿದೆ ಎಂದು ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ