ಆ್ಯಪ್ನಗರ

ಕಂಬಾರರಿಗೆ ಶಿವಗಂಗಾ ಶ್ರೀ ಪ್ರಶಸ್ತಿ ಪ್ರದಾನ

ಈಗಾಗಲೇ ಮೂರು ರೀತಿಯ ಕ್ರಾಂತಿಗಳು ನಡೆದಿವೆ. 8ನೇ ಶತಮಾನದಲ್ಲಿ ಭಕ್ತಿ ಚಳವಳಿಗಳು ಮಾತನಾಡಿಸಬೇಕಾದರೆ ಅದು ಸಂಸ್ಕೃತ ಭಾಷೆಯೇ ಆಗಿರಬೇಕಿತ್ತು.

Vijaya Karnataka 12 Mar 2019, 7:53 am
ಮಾಗಡಿ: ದೇಶದಲ್ಲಿ ಮುಕ್ಕೋಟಿ ದೇವತೆಗಳು, 66 ಸಾವಿರ ಜಾತಿಗಳು, ಹನ್ನೆರಡು ಕ್ಯಾಲೆಂಡರ್‌ ಇವೆ. ಇಲ್ಲಿಯ ವ್ಯವಸ್ಥೆಯಿಂದ ದೇಶದಲ್ಲಿ ಯಾವುದೇ ರೀತಿಯ ಕ್ರಾಂತಿಗಳು ಸಹ ನಡೆಯಲಾರವು ಎಂದು ಕವಿ ಚಂದ್ರಶೇಖರ ಕಂಬಾರ ಹೇಳಿದರು.
Vijaya Karnataka Web Kambara


ಶಿವಗಂಗಾ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ''ರಾಜ್ಯದಲ್ಲಿ ಮಠಗಳ ಪಾತ್ರ ಅವಿಸ್ಮರಣಿಯವಾದದ್ದು,'' ಎಂದರು.

ಈಗಾಗಲೇ ಮೂರು ರೀತಿಯ ಕ್ರಾಂತಿಗಳು ನಡೆದಿವೆ. 8ನೇ ಶತಮಾನದಲ್ಲಿ ಭಕ್ತಿ ಚಳವಳಿಗಳು ಮಾತನಾಡಿಸಬೇಕಾದರೆ ಅದು ಸಂಸ್ಕೃತ ಭಾಷೆಯೇ ಆಗಿರಬೇಕಿತ್ತು. 12ನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಶರಣರ ಕಾಲದ ಕ್ರಾಂತಿಯಲ್ಲಿ ದೇವರನ್ನು ನಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಿಸುವುದಾಗಿತ್ತು.

ಮೂರನೇ ಕ್ರಾಂತಿ ಎಂದರೆ ಬ್ರಿಟಿಷರು ಅಕ್ಷ ರ ಕ್ರಾಂತಿಯಿಂದ ಇಂಗ್ಲಿಷ್‌ ಕಲಿಕೆಗೆ ಆದ್ಯತೆ ನೀಡಿದ್ದಾಗಿದೆ. ಈ ಮೂಲಕ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ನಡೆದವು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ