ಆ್ಯಪ್ನಗರ

ರವಿ ಕೃಷ್ಣಾರೆಡ್ಡಿ ಅವರಿಂದ ‘ಕರ್ನಾಟಕ ಜನತಾ ರಂಗ ’ಹೊಸ ಪಕ್ಷ ಸ್ಥಾಪನೆ

ಕರ್ನಾಟಕ ಜನತಾ ರಂಗ ಎಂಬ ಹೊಸ ಪಕ್ಷ ರಾಜ್ಯದಲ್ಲಿ ಸ್ಥಾಪನೆಯಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಎಲ್ಲ 28 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲು ...

Vijaya Karnataka 12 Feb 2019, 5:00 am
ಬೆಂಗಳೂರು: ಕರ್ನಾಟಕ ಜನತಾ ರಂಗ ಎಂಬ ಹೊಸ ಪಕ್ಷ ರಾಜ್ಯದಲ್ಲಿ ಸ್ಥಾಪನೆಯಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಎಲ್ಲ 28 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲು ನಿರ್ಧರಿಸಿದೆ. ಲಂಚ ಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಈ ಹೊಸ ಪಕ್ಷ ರಚನೆಯಾಗಿದೆ.
Vijaya Karnataka Web ravikrishna1


ಸುದ್ದಿಗೋಷ್ಠಿ ನಡೆಸಿದ ರವಿ ಕೃಷ್ಣಾರೆಡ್ಡಿ , ''ರಾಜ್ಯದಲ್ಲಿ ಹದಗೆಡುತ್ತಿರುವ ರಾಜಕೀಯ ಕ್ಷೇತ್ರವನ್ನು ಸ್ವಚ್ಛಗೊಳಿಸುವುದರ ಜತೆಗೆ ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ತಂದು ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಹುಡುಕಲಿದೆ. ಈಗಾಗಲೇ ಪಕ್ಷದ ಹೆಸರು ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ,'' ಎಂದು ತಿಳಿಸಿದರು.

''ಪಕ್ಷದ ಧ್ಯೇಯ ಮತ್ತು ಸಿದ್ಧಾಂತ ಒಪ್ಪಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣದಲ್ಲಿ ವಿಶ್ವಾಸ ಇರುವವರು ಪಕ್ಷದ ಜತೆ ಕೈಜೋಡಿಸಬಹುದು,''ಎಂದರು.

ಪಕ್ಷದ ಉಪಾಧ್ಯಕ್ಷ ಎಸ್‌.ಎಚ್‌. ಲಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಎನ್‌. ದೀಪಕ್‌, ಜಂಟಿ ಕಾರ‍್ಯದರ್ಶಿ ರಘುಪತಿ ಭಟ್‌, ಖಜಾಂಚಿ ಕೆ.ಬಿ. ಅರವಿಂದ್‌, ವಿಕಾಸ್‌ ಸೊಪ್ಪಿನ್‌ ಮತ್ತಿತರರು ಉಪಸ್ಥಿತರಿದ್ದರು.

ಅಭ್ಯರ್ಥಿಗಳ ಪಟ್ಟಿ

ಇದೇ ವೇಳೆ ಮೊದಲ ಹಂತದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಮಂಡ್ಯ-ಎಸ್‌.ಎಚ್‌. ಲಿಂಗೇಗೌಡ

ಧಾರವಾಡ/ಬಾಗಲಕೋಟ-ವಿಕಾಸ್‌ ಸೊಪ್ಪಿನ್‌

ತುಮಕೂರು-ಮಲ್ಲಿಕಾರ್ಜುನ್‌ ಭಟ್ಟರಹಳ್ಳಿ

ಬೆಂಗಳೂರು ಗ್ರಾಮಾಂತರ-ರಘು ಜಾಣಗೆರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ