ಆ್ಯಪ್ನಗರ

ನನ್ನ ಪತ್ನಿಯನ್ನು ಯಾರೂ ಸಂಪರ್ಕಿಸಿಲ್ಲ : ಹೆಬ್ಬಾರ್‌

ಬಿಜೆಪಿಗೆ ಬೆಂಬಲಿಸುವಂತೆ ಕೋರಿ ನನ್ನ ಪತ್ನಿಗೆ ಯಾರೂ ಕರೆ ಮಾಡಿಲ್ಲ...

Vijaya Karnataka 21 May 2018, 5:00 am
ಬೆಂಗಳೂರು : ಬಿಜೆಪಿಗೆ ಬೆಂಬಲಿಸುವಂತೆ ಕೋರಿ ನನ್ನ ಪತ್ನಿಗೆ ಯಾರೂ ಕರೆ ಮಾಡಿಲ್ಲ. ಈ ಸಂಬಂಧ ಬಿಡುಗಡೆಯಾದ ಆಡಿಯೊ ಟೇಪ್‌ ನಕಲಿ ಎಂದು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶಿವರಾಮ ಹೆಬ್ಬಾರ್‌ ಸ್ಪಷ್ಟಪಡಿಸಿದ್ದಾರೆ.
Vijaya Karnataka Web Yallapur-mundgod-sivram hebbar(congeresh)


ಬಿಎಸ್‌ವೈ ಪುತ್ರ ವಿಜಯೇಂದ್ರ ಹಾಗೂ ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರು ಹೆಬ್ಬಾರ್‌ ಪತ್ನಿಯನ್ನು ಸಂಪರ್ಕಿಸಿ ಆಮಿಷವೊಡ್ಡಿದ್ದರು ಎನ್ನಲಾದ ಧ್ವನಿಮುದ್ರಿಕೆ ಪ್ರತಿ ಪ್ರದೇಶ ಕಾಂಗ್ರೆಸ್‌ನ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಲ್ಲಿ ಶನಿವಾರ ಹರಿದಾಡಿತ್ತು. ಈ ಸಂಬಂಧ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಹೆಬ್ಬಾರ್‌, ''ಬಿಜೆಪಿಯವರು ನನ್ನ ಪತ್ನಿಯೊಂದಿಗೆ ನಡೆಸಿದ್ದಾರೆ ಎನ್ನಲಾದ ಆಡಿಯೊ ವಿಚಾರವು ಸದನದಲ್ಲಿದ್ದ ನನಗೆ ತಡವಾಗಿ ಗೊತ್ತಾಯಿತು. ಈ ರೆಕಾರ್ಡಿಂಗ್‌ನಲ್ಲಿರುವುದು ನನ್ನ ಪತ್ನಿಯ ಧ್ವನಿಯೂ ಅಲ್ಲ. ರಾಜಕೀಯ ಕಾರಣಕ್ಕಾಗಿ ಕೆಲವರು ಇಂತಹ ಫೇಕ್‌ ಆಡಿಯೊ ಬಿಡುಗಡೆ ಮಾಡಿರಬಹುದು. ಇದನ್ನು ನಾನು ಖಂಡಿಸುತ್ತೇನೆ,'' ಎಂದು ಸಮಜಾಯಿಷಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ