ಆ್ಯಪ್ನಗರ

ಪಾಪ ಆರ್.ಅಶೋಕ್ ಡೆಪ್ಯುಟಿ ಸಿಎಂ ಆಗ್ಲಿಲ್ಲ- ಸದನದಲ್ಲಿ ಕಾಲೆಳೆದ್ರು ಸಿದ್ದರಾಮಯ್ಯ

ಸಚಿವ ಆರ್. ಅಶೋಕ್ ಅವರಿಗೆ ಡಿಸಿಎಂ ಸ್ಥಾನ ಕೈ ತಪ್ಪಿದ್ದು. ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ಸ್ಥಾನ ನೀಡಲು ವಿರೋಧ ವ್ಯಕ್ತವಾಗಿದ್ದ ವಿಚಾರಗಳ ಕುರಿತಾಗಿ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.

Vijaya Karnataka Web 10 Oct 2019, 7:49 pm
ಬೆಂಗಳೂರು: ಪಾಪ ಆರ್.ಅಶೋಕ್ ಅವರು ಡೆಪ್ಯುಟಿ ಸಿಎಂ ಆಗಲಿಲ್ಲ. ನೀವು ಡಿಸಿಎಂ ಆಗಬೇಕಾಗಿತ್ತು. ಹೀಗಂತ ಹೇಳಿದವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ. ಗುರುವಾರ ಸದನದಲ್ಲಿ ಸಿದ್ದರಾಮಯ್ಯ , ಕಂದಾಯ ಸಚಿವ ಆರ್. ಅಶೋಕ್ ಅವರ ಕಾಲೆಳೆದ ಪರಿ ಇದು.
Vijaya Karnataka Web session


ರಾಜ್ಯ ಸರಕಾರ ವಿರುದ್ಧ ವಾಗ್ದಾಳಿ ನಡೆಸುವುದರ ಜೊತೆಗೆ ಆರ್ ಅಶೋಕ್ ಅವರ ಕಾಲೆಳೆದ ಸಿದ್ದರಾಮಯ್ಯ, ಬಿಜೆಪಿ ಪಕ್ಷದೊಳಗಿನ ಭಿನ್ನಮತವನ್ನು ಸದನದಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಆರ್. ಅಶೋಕ್ ಡಿಸಿಎಂ ಸ್ಥಾನ ನಾನೇ ಬೇಡ ಅಂದೆ ಬಿಡಿ ಸಾರ್ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸ್ಪೀಕರ್ ಕೆ ಜೆ ಬೋಪಯ್ಯ, ನೀವು ಪ್ರತಿಪಕ್ಷ ನಾಯಕ ಸ್ಥಾನ ಪಡೆಯಲು ನಿನ್ನೆಯವರೆಗೂ ಕಾಯಬೇಕಾಯ್ತು ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

ಕರ್ನಾಟಕದ ಬಗ್ಗೆ ಮೋದಿಗೆ ಉದಾಸೀನ: ಸಿದ್ದರಾಮಯ್ಯ

ಬೋಪಯ್ಯಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಹೌದು, ನಾನು ಈಗಲಾದ್ರೂ ವಿಪಕ್ಷ ನಾಯಕನಾಗಿದ್ದೇನೆ. ನೀವು ಏನಾಗಿದ್ದೀರಿ ಅದನ್ನ ಹೇಳಿ. ಪಾಪ ನಿಮ್ಮನ್ನೇ ಸ್ಪೀಕರ್ ಮಾಡುತ್ತೇವೆ ಅಂತ ಹೇಳಿದ್ದರು. ಆದರೆ ಏನು ಮಾಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಇತ್ತ ಸಚಿವ ಸ್ಥಾನವೂ ಸಿಗ್ಲಿಲ್ಲ,ಅತ್ತ ಸ್ಪೀಕರ್ ಆಗ್ಲಿಲ್ಲ ಎಂದು ಕಿಚಾಯಿಸಿದರು.

ಸಚಿವ ಅಶೋಕ್‌ಗೆ ಡಿಸಿಎಂ ಸ್ಥಾನ, ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷದ ಸ್ಥಾನ ಕುರಿತಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಸದನದಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆ ನಡೆಯಿತು.

ಕಲಾಪ ಪ್ರಸಾರಕ್ಕೆ ಮಾಧ್ಯಮಗಳಿಗೆ ನಿರ್ಬಂಧ: ಪ್ರತಿಭಟನೆಗೆ ಕರೆ ನೀಡಿದ ಪ್ರೆಸ್ ಕ್ಲಬ್

ಆರ್. ಅಶೋಕ್ ಅವರು ಬಿಜೆಪಿಯಲ್ಲಿ ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಸ್ಥಾನ ಕೈತಪ್ಪಿತ್ತು. ಪಕ್ಷದ ಈ ನಡೆಯಿಂದ ಅಶೋಕ್ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ ಪ್ರತಿಪಕ್ಷದ ಸ್ಥಾನದ ಆಯ್ಕೆ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ತೀವ್ರ ಭಿನ್ನಮತ ತಲೆಧೋರಿತ್ತು. ಸಿದ್ದರಾಮಯ್ಯ ನಾಯಕತ್ವಕ್ಕೆ ಹಿರಿಯ ಮುಖಂಡರಿಂದ ವಿರೋಧ ವ್ಯಕ್ತವಾಗಿದ್ದರು ಕೊನೆಯ ಗಳಿಕೆಯಲ್ಲಿ ಹೈ ಕಮಾಂಡ್ ಸಿದ್ದರಾಮಯ್ಯನವರನ್ನು ಪ್ರತಿಪಕ್ಷದ ನಾಯಕನನ್ನಾಗಿ ಘೋಷಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ