ಆ್ಯಪ್ನಗರ

ಸಿದ್ದರಾಮಯ್ಯ ಜತೆ ಯಾರ್ರೀ ಹೋಗ್ತಾರೆ? ಮೈತ್ರಿ ಬಗ್ಗೆ ದೇವೇಗೌಡರ ಪ್ರಶ್ನೆ!

ಉಪ ಚುನಾವಣೆ ಬಳಿಕ ಮತ್ತೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭ ಮತ್ತೆ ಸಿದ್ದರಾಮಯ್ಯ ಜತೆ ಮೈತ್ರಿ ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ತಪ್ಪಿಯೂ ಕಾಂಗ್ರೆಸ್‌ ಜತೆ ಹೋಗಲ್ಲ ಎಂದು ಹೇಳಿಲ್ಲ!

Vijaya Karnataka Web 2 Dec 2019, 6:59 am
ಬೆಂಗಳೂರು: ''ರಾಜ್ಯದಲ್ಲಿಮತ್ತೆ ಮೈತ್ರಿ ಸರಕಾರ ಅಧಿಕಾರಕ್ಕೆ ಬರಬೇಕಿದ್ದರೆ ಸಿದ್ದರಾಮಯ್ಯ, ನಾವು ಒಟ್ಟಿಗೆ ಸೇರಬೇಕಲ್ಲ? ನಮಗೂ ಈಗ ತಿಳುವಳಿಕೆ ಬಂದಿದೆ. ಮತ್ತೆ ಆ ತಪ್ಪು ಮಾಡುವುದಿಲ್ಲ,'' ಸೋನಿಯಾ ಗಾಂಧಿ ಒಪ್ಪಿದರೆ ಮೈತ್ರಿ ಸರಕಾರ ಸಾಧ್ಯ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮತ್ತೆ ಮೈತ್ರಿ ಸರಕಾರ ರಚನೆಯ ಮಾತುಗಳಿಗೆ ಹೊಸತೊಂದು ವರಸೆ ತೆಗೆದಿದ್ದಾರೆ.
Vijaya Karnataka Web HD Devegowda


ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಬಿಜೆಪಿಯ ಆಪರೇಷನ್‌ ಕಮಲದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದ ದೇವೇಗೌಡರ ನಡೆಯ ಬಗ್ಗೆ ವ್ಯಾಖ್ಯಾನ ಮಾಡಿದ್ದ ರಾಜಕೀಯ ಪಂಡಿತರು ರಾಜ್ಯದಲ್ಲಿ ಮತ್ತೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮುನ್ಸೂಚನೆ ಇದು ಎಂದು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ತಕ್ಕಂತೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರ 'ದಿನಕ್ಕೊಂದು ಹೇಳಿಕೆ' ಮರು ಮೈತ್ರಿ ಸಾಧ್ಯತೆಯ ಚರ್ಚೆ ಹುಟ್ಟು ಹಾಕಿತ್ತು. ಆದರೆ ದೇವೇಗೌಡರ ಈ ಹೇಳಿಕೆಯಿಂದ ಚರ್ಚೆಯ ಜಾಡು ಒಮ್ಮೆಗೇ ತಿರುವು ತೆಗೆದುಕೊಂಡಿದೆ.

ಬೆಂಗಳೂರಿನ ಯಶವಂತಪುರ ಕ್ಷೇತ್ರ ವ್ಯಾಪ್ತಿಯಲ್ಲಿಪಕ್ಷದ ಅಭ್ಯರ್ಥಿ ಜವರಾಯಿಗೌಡ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ''ಜೆಡಿಎಸ್‌ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ವರದಿ ಪ್ರಕಟಿಸುವುದನ್ನು ಇವತ್ತೆ ನಿಲ್ಲಿಸಿ. ಅಂಥ ಯಾವ ಬೆಳವಣಿಗೆಯೂ ಆಗುವುದಿಲ್ಲ. ಬಿಜೆಪಿ ಸರಕಾರ ಯಾಕೆ ಬೀಳುತ್ತದೆ? ಯಡಿಯೂರಪ್ಪ ಕೈಯಲ್ಲಿ 105 ಮಂದಿ ಶಾಸಕರಿಲ್ವಾ? ಕುಮಾರಸ್ವಾಮಿ ಸರಕಾರ ಬಂದ ದಿನದಿಂದಲೂ ಕೊಡಬಾರದ ಕಾಟ ಕೊಟ್ರಿ,'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಅಪ್ಪನಿಗೆ ಹುಟ್ಟಿದೆ ಎನ್ನುವುದಕ್ಕೆ ಸಾಕ್ಷಿ ಇದೆಯೇ'? ಎಲೆಕ್ಷನ್ ಅಖಾಡದಲ್ಲಿ ನಾಲಗೆ ಹರಿಬಿಟ್ಟ ಈಶ್ವರಪ್ಪ

''ಬಿಜೆಪಿ ಸರಕಾರ ಏಕೆ ಹೋಗಬೇಕು? ಅದಾಗಬೇಕಿದ್ದರೆ ಸಿದ್ದರಾಮಯ್ಯ ನಾವು ಒಟ್ಟಿಗೆ ಸೇರಬೇಕಲ್ಲವೇ ? ನಮಗೆ ತಿಳುವಳಿಕೆ ಬಂದಿದೆ. ಮತ್ತೆ ಆ ತಪ್ಪನ್ನು ಮಾಡುವುದಿಲ್ಲ,'' ಎಂದು ಹೇಳುವ ಮೂಲಕ ಮೈತ್ರಿ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ ತೀರ್ಪು ಪ್ರಕಟವಾದ ದಿನ ಮಾತನಾಡಿದ್ದ ದೇವೇಗೌಡರು, ಇನ್ನು ಮೂರುವರೆ ವರ್ಷ ಯಡಿಯೂರಪ್ಪ ಸೇಫ್‌ ಎಂದಿದ್ದರು. 'ಬಿಜೆಪಿ ಸರಕಾರ ಏಕೆ ಬೀಳಬೇಕು ?' ಎಂಬ ಅವರ ಪ್ರಶ್ನೆಯಿಂದ ಮೈತ್ರಿ ಸಾಧ್ಯತೆ ಸೃಷ್ಟಿಯಾದಾಗ ದೇವೇಗೌಡರು ಕಾಂಗ್ರೆಸ್‌ ಹೈಕಮಾಂಡ್‌ಗೆ ಇನ್ನಷ್ಟು ಷರತ್ತು ವಿಧಿಸಬಹುದೆಂಬ ಅನುಮಾನ ಹುಟ್ಟಿಸಿದೆ.

ಬಿಜೆಪಿ ಸರಕಾರಕ್ಕೆ ಸುಪ್ರೀಂ ಕೋರ್ಟ್ ಜಡ್ಜ್ ಗಳು ಹೆದರುವಂತ ದುಸ್ಥಿತಿ ಬಂದಿದೆ: ಎಚ್‌ಡಿಡಿ ಅಸಮಾಧಾನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ