ಆ್ಯಪ್ನಗರ

ಉಪ ಚುನಾವಣಾ ಅಖಾಡ: ಸಜ್ಜಾದ 'ಕೈ'-ಸಾಮೂಹಿಕ ನಾಯಕತ್ವಕ್ಕೆ 'ಜೈ'

ಉಪಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತಯಾರಿ ಸಭೆ ನಡೆಯಿತು. ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಮಾಜಿ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಿರಿಯ ಮುಖಂಡರು ಸಭೆಯಲ್ಲಿ ಭಾಗಿಯಾದರು.

Vijaya Karnataka Web 10 Nov 2019, 2:17 pm
ಬೆಂಗಳೂರು: ಅನರ್ಹ ಶಾಸಕರಿಂದ ತೆರವಾದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಡಿಸೆಂಬರ್ 5 ರಂದು ನಡೆಯಲಿದ್ದು ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಚುನಾವಣೆ ತಂತ್ರಗಾರಿಕೆ ಕುರಿತಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು ಪ್ರಮುಖ ಮುಖಂಡರು ಭಾಗಿಯಾಗಿದ್ದಾರೆ.
Vijaya Karnataka Web karnataka by election congress meeting at kpcc
ಉಪ ಚುನಾವಣಾ ಅಖಾಡ: ಸಜ್ಜಾದ 'ಕೈ'-ಸಾಮೂಹಿಕ ನಾಯಕತ್ವಕ್ಕೆ 'ಜೈ'


ಕಳೆದೊಂದು ವರ್ಷದಿಂದ ನಿಂತ ನೀರಿನಂತಿದ್ದ ರಾಜ್ಯ ಸರಕಾರಕ್ಕೆ ಈಗ ವೇಗ ದೊರೆತಿದೆ: ನಳಿನ್‌ ಕುಮಾರ್ ಕಟೀಲ್‌

15 ವಿಧಾನಸಭಾ ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು ಉಳಿದ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರಿದಿದೆ. ಯಲ್ಲಾಪುರ - ಭೀಮಾನಾಯಕ್, ಹೀರೇಕೆರೂರು- ಬಿಎಚ್ ಬನ್ನಿಕೋಡ್, ರಾಣಿ ಬೆನ್ನೂರು - ಕೆ ಬಿ ಕೋಳಿವಾಡ್, ಚಿಕ್ಕಬಳ್ಳಾಪುರ- ಎಂ ಆಂಜನಪ್ಪ, ಕೆ.ಆರ್ ಪುರ- ಎಂ. ನಾರಾಯಣಸ್ವಾಮಿ,ಮಹಾಲಕ್ಷ್ಮೀ ಲೇಔಟ್- ಎಂ. ಶಿವರಾಜ್, ಹೊಸಕೋಟೆ- ಪದ್ಮಾವತಿ ಸುರೇಶ್, ಹುಣಸೂರು-ಎಚ್.ಪಿ ಮಂಜುನಾಥ ಹೆಸರು ಘೋಷಣೆ ಮಾಡಲಾಗಿದೆ.

ಉಪಚುನಾವಣೆ: ನವೆಂಬರ್ 11 ರಿಂದ ನೀತಿ ಸಂಹಿತೆ ಜಾರಿ

ಶಿವಾಜಿನಗರ ಸೇರಿದಂತೆ ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರಿದಿದ್ದು ಕೆಲವೊಂದು ಗೊಂದಲಗಳಿಂದ ಅಭ್ಯರ್ಥಿ ಘೋಷಣೆ ತಡವಾಗುತ್ತಿದೆ . ಶಿವಾಜಿನಗರದಿಂದ ರಿಜ್ವಾನ್ ಅರ್ಷದ್ ಪ್ರಭಲ ಆಕಾಂಕ್ಷಿಯಾಗಿದ್ದು ಕೆಲವು ಮುಖಂಡರು ರಿಜ್ವಾನ್‌ಗೆ ಟಿಕೆಟ್ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು ಪ್ರಮುಖ ಮುಖಂಡರು ಭಾಗಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಹಿರಿಯ ಮುಖಂಡ, ಎಸ್ ಆರ್ ಪಾಟೀಲ್, ಮಾಜಿ ಸಚಿವರಾದ ಡಿ.ಕೆ ಶಿವಕುಮಾರ್, ರಾಮಲಿಂಗ ರೆಡ್ಡಿ, ಕೆ.ಜೆ ಜಾರ್ಜ್, ಎಂ.ಬಿ ಪಾಟೀಲ್, ಹೆಚ್.ಎಂ. ರೇವಣ್ಣ, ರಾಜ್ಯ ಸಭಾ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಜಿ.ಸಿ ಚಂದ್ರಶೇಖರ್, ಡಾ. ಎಲ್ ಹನುಮಂತಯ್ಯ, ಮಾಜಿ ಶಾಸಕ ಆರ್.ವಿ ದೇವರಾಜ್ ಸೇರಿದಂತೆ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಸಾಮೂಹಿಕ ನಾಯಕತ್ವದ ಮಂತ್ರ
ಉಪಚುನಾವಣೆ ತಯಾರಿ ಕುರಿತಾಗಿ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸಾಮೂಹಿಕ ನಾಯಕತ್ವದ ಮೂಲಕ ಉಪಚುನಾವಣೆ ಎದುರಿಸುವ ಕುರಿತಾಗಿಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಈಗಾಗಲೇ 15 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಗಳ ನೇಮಕವಾಗಿದ್ದು ಪ್ರತಿ ಕ್ಷೇತ್ರಗಳಿಗೆ ಮುಖಂಡರು ಭೇಟಿ ನೀಡಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಬಾಕು ಉಳಿದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಹಾಗೂ ಚುನಾವಣಾ ತಂತ್ರಗಾರಿಗೆ, ಪ್ರಚಾರ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ