ಆ್ಯಪ್ನಗರ

ಕೈ ಪಾಲಿಗೆ ಯಶವಂತಪುರ ಕಗ್ಗಂಟು; ಟಿಕೆಟ್ ಕೊಟ್ರೂ ಸ್ಪರ್ಧೆಗೆ ಹಿಂದೇಟು!

ಡಿಸೆಂಬರ್ 5 ರಂದು ನಡೆಯಲಿರುವ ಉಪಚನಾವಣೆಗೆ ಕಾಂಗ್ರೆಸ್ 14 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಆದರೆ ಯಶವಂತಪುರ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಸಿಗುತ್ತಿಲ್ಲ. ಟಿಕೆಟ್ ನೀಡಿದರೂ ಅಭ್ಯರ್ಥಿ ಆಕಾಂಕ್ಷಿಗಳು ಕಣಕ್ಕಿಳಿಯಲು ತಯಾರಿಲ್ಲ.

Vijaya Karnataka Web 17 Nov 2019, 10:34 am
ಬೆಂಗಳೂರು: ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಹಲವು ಕ್ಷೇತ್ರಗಳಲ್ಲಿ ಭಾರೀ ಲಾಬಿಗಳು ನಡೆಯುತ್ತಿದ್ದರೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕೈ ಪಾಲಿಗೆ ಅಭ್ಯರ್ಥಿಗಳ ಕೊರತೆ ಎದುರಾಗಿದೆ. ಯಶವಂತಪುರ ಕ್ಷೇತ್ರಕ್ಕೆ ಟಿಕೆಟ್ ನೀಡಿದರೂ ಸ್ಪರ್ಧೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಯಶವಂತಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ. ರಾಜಕುಮಾರ್‌ಗೆ ಪಕ್ಷ ಸ್ಪರ್ಧಿಸುವಂತೆ ಸೂಚಿಸಿದರೂ ಕಣದಿಂದ ಹಿಂದೆ ಸರಿದಿದ್ದಾರೆ.
Vijaya Karnataka Web karnataka by election congress not finalized yeshwantpur ticket
ಕೈ ಪಾಲಿಗೆ ಯಶವಂತಪುರ ಕಗ್ಗಂಟು; ಟಿಕೆಟ್ ಕೊಟ್ರೂ ಸ್ಪರ್ಧೆಗೆ ಹಿಂದೇಟು!


ಗೆಲುವಿಗಿಂತ ಸೋಲೇ ಟಾರ್ಗೆಟ್‌: ಬಿಜೆಪಿ ಅಭ್ಯರ್ಥಿಗಳೇ ವಿಪಕ್ಷಗಳ ಗುರಿ!

ಯಶವಂತಪುರ ವಿಧಾನಸಭಾ ಕ್ಷೇತ್ರ ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಅನರ್ಹ ಶಾಸಕ ಎಸ್ ಟಿ ಸೋಮಶೇಖರ್ ಪ್ರಭಾವ ಹೊಂದಿರುವ ಕ್ಷೇತ್ರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಟಿಎನ್ ಜವರಾಯಿ ಗೌಡ ವಿರುದ್ಧ ಸ್ಪರ್ಧಿಸಿದ್ದ ಎಸ್ಟಿ ಸೋಮಶೇಖರ್ 1,15,273 ಪಡೆದುಕೊಂಡು ಜಯಗಳಿಸಿದ್ದರು. ಅವರ ಎದುರಾಳಿ ಅಭ್ಯರ್ಥಿ ಜವರಾಯಿ ಗೌಡ 1,04,562 ಮತಗಳನ್ನು ಪಡೆದಿದ್ದರು. ಸದ್ಯ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಎಸ್ ಟಿ ಸೋಮಶೇಖರ್ ಅನರ್ಹ ಎಂಬ ಹಣೆಪಟ್ಟಿಯೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದಾರೆ.

ಒಂದು ಕಾಲದ ಶಿಷ್ಯವನ್ನು ಸೋಲಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತೊಡೆತಟ್ಟಿ ನಿಂತಿದ್ದು ಪಕ್ಷಕ್ಕೆ ಕೈ ಕೊಟ್ಟ ಎಸ್ ಸೋಮಶೇಖರ್‌ ಅವರನ್ನು ಸೋಲಿಸಲು ಕಾಂಗ್ರೆಸ್ ತಂತ್ರಗಾರಿಕೆ ರೂಪಿಸುತ್ತಿದೆ. ಆದರೆ ಎಸ್ ಟಿ ಸೋಮಶೇಖರ್ ಜೊತೆಗೆ ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಇದು ಕಾಂಗ್ರೆಸ್‌ಗೂ ಹಾಗೂ ಎಸ್ ಟಿ ಸೋಮಶೇಖರ್ ವಿರುದ್ಧ ಅಖಾಡಕ್ಕೆ ಇಳಿಯುವ ಅಭ್ಯರ್ಥಿಗೂ ತಲೆನೋವಾಗಿ ಪರಿಣಮಿಸಿದೆ.

ಉಪ ಚುನಾವಣೆಯ 6 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಸಿದ್ದರಾಮಯ್ಯ ಬಣಕ್ಕೆ ಮೇಲುಗೈ

ಹೀಗಾಗಿ ಯಶವಂತಪುರದಿಂದ ಕಾಂಗ್ರೆಸ್ ಅಭ್ಯರ್ಥಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎನ್ನಲಾಗುತ್ತಿದ್ದ ಎಂ. ರಾಜಕುಮಾರ್ ಕಣದಿಂದ ಹಿಂದೆ ಸರಿದಿದ್ದಾರೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಕೊರತೆ ಹಾಗೂ ಸಂಘಟನಾತ್ಮವಾಗಿ ಕಾಂಗ್ರೆಸ್ ಯಶವಂತಪುರದಲ್ಲಿ ಹಿನ್ನಡೆ ಅನುಭವಿಸುತ್ತಿರುವುದರಿಂದ ಕಣದಲ್ಲಿರಲು ಅಸಾಧ್ಯ ಎಂಬ ಕಾರಣ ನೀಡಿದ್ದಾರೆ.

ಅಭ್ಯರ್ಥಿ ಸ್ಪರ್ಧೆ ನಿರಾಕರಣೆ ಹಿನ್ನೆಲೆಯಲ್ಲಿ ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ಮುಖಂಡರು ನಿರತರಾಗಿದ್ದಾರೆ. ಎಂ ರಾಜಕುಮಾರ್ ಬದಲಿಗೆ ಪಾಳ್ಯ ನಾಗರಾಜ್ ಅವರನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನಾಂಕವಾಗಿದ್ದು ಭಾನುವಾರ ಯಶವಂತಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ