ಆ್ಯಪ್ನಗರ

ಬಿಎಸ್‌ವೈಯಿಂದ ಮತ್ತೆ ಸಂಪುಟ ವಿಸ್ತರಣೆಯ ಮುನ್ಸೂಚನೆ, ಆಕಾಂಕ್ಷಿಗಳಲ್ಲಿ ಶುರುವಾದ ಪೈಪೋಟಿ

ಮತ್ತೆ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿರುವ ಬೆನ್ನಲ್ಲೇ ಸಚಿವಾಕಾಂಕ್ಷಿಗಳಲ್ಲಿ ಪೈಪೋಟಿ ಶುರುವಾಗಿದೆ. ಉಮೇಶ್ ಕತ್ತಿ ಸೇರಿದಂತೆ ಹಲವರು ಸಂಪುಟ ಸೇರುವ ತವಕದಲ್ಲಿದ್ದು ಲಾಬಿ ಜೋರಾಗಿದೆ.

Vijaya Karnataka Web 26 Feb 2020, 12:34 pm
ಬೆಂಗಳೂರು: ಎರಡನೇ ಹಂತದ ಸಂಪುಟ ವಿಸ್ತರಣೆಯ ಮುನ್ಸೂಚನೆಯನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನೀಡಿರುವ ಬೆನ್ನಲ್ಲೇ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ನಡುವೆ ಪೈಪೋಟಿ ಶುರುವಾಗಿದೆ.
Vijaya Karnataka Web karnataka cabinet expansion soon says bs yeddyurappa
ಬಿಎಸ್‌ವೈಯಿಂದ ಮತ್ತೆ ಸಂಪುಟ ವಿಸ್ತರಣೆಯ ಮುನ್ಸೂಚನೆ, ಆಕಾಂಕ್ಷಿಗಳಲ್ಲಿ ಶುರುವಾದ ಪೈಪೋಟಿ


ದೆಹಲಿಯಲ್ಲಿ ಮಂಗಳವಾರ ಮಾತನಾಡಿದ್ದ ಬಿಎಸ್‌ವೈ, ಮತ್ತೆ ಮೂವರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಲಾಗುವುದು ಎಂದಿದ್ದರು. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗುವ ಶಾಸಕ ಉಮೇಶ್ ಕತ್ತಿ ಸೇರಿದಂತೆ ಒಟ್ಟು ಮೂವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

ಬಿಎಸ್‌ವೈ ಹೇಳಿಕೆಯ ಬೆನ್ನಲ್ಲೇ ಸಚಿವಾಕಾಂಕ್ಷಿಗಳಲ್ಲಿ ಪೈಪೋಟಿ ಶುರುವಾಗಿದೆ. ಸಚಿವ ಸ್ಥಾನಕ್ಕಾಗಿ ಉಮೇಶ್ ಕತ್ತಿ, ಮಹೇಶ್ ಕುಮಟಳ್ಳಿ, ನೆಹರೂ ಓಲೆಕಾರ್‌, ರೇಣುಕಾಚಾರ್ಯ, ಸಿ.ಪಿ ಯೋಗೇಶ್ವರ್, ರಾಜೂಗೌಡ ಸೇರಿದಂತೆ ಹಲವರು ಪ್ರಯತ್ನ ಪಡುತ್ತಿದ್ದಾರೆ.

ಸಂಪುಟ ವಿಸ್ತರಣೆ: ಬಿಎಸ್‌ವೈಗೆ ತಲೆನೋವಾದ ‘ಕಲ್ಯಾಣ ಕಿಚ್ಚು’

ಈಗಾಗಲೇ ನೂತನ ಹತ್ತು ಸಚಿವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದ್ದು ಇನ್ನು ಆರು ಸ್ಥಾನಗಳು ಬಾಕಿ ಉಳಿದಿವೆ. ಇದೀಗ ಮತ್ತೆ ಮೂವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲು ಸಿಎಂ ಮುಂದಾಗಿದ್ದಾರೆ.

ಮೊದಲ ಹಂತದ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ 10 ಪ್ಲಸ್ 3 ಸೂತ್ರದಡಿಯಲ್ಲಿ ವಿಸ್ತರಣೆ ಮಾಡಲು ಬಿಎಸ್‌ವೈ ಮುಂದಾಗಿದ್ದರು. 10 ನೂತನ ಶಾಸಕರಿಗೆ ಹಾಗೂ ಮೂರು ಮೂಲ ಬಿಜೆಪಿಗರಿಗೆ ಎಂಬುವುದು ಯಡಿಯೂರಪ್ಪ ಯೋಜನೆಯಾಗಿತ್ತು. ಆದರೆ ಸಚಿವಾಕಾಂಕ್ಷಿಗಳ ಪಟ್ಟಿ ಹೆಚ್ಚಾದ ಕಾರಣಕ್ಕಾಗಿ ಈ ಯೋಜನೆಯನ್ನು ಸಿಎಂ ಕೈ ಬಿಟ್ಟಿದ್ದರು.

ಇದೀಗ ಸಚಿವಾಕಾಂಕ್ಷಿಗಳಿಂದ ಒತ್ತಡ ಮತ್ತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಮುಂದಾಗಿದ್ದಾರೆ. ಆದರೆ ಈ ಮೂರು ಸ್ಥಾನಗಳು ಯಾರಿಗೆ ಎಂಬುವುದು ಕುತೂಹಲ ಕೆರಳಿಸಿದೆ. ಗೂಟದ ಕಾರಿಗಾಗಿ ಈಗಾಗಲೇ ಲಾಬಿ ಶುರುವಾಗಿದ್ದು ಬಿಎಸ್‌ವೈಗೆ ಹೊಸತೊಂದು ತಲೆನೋವು ತಂದುಕೊಡುವುದರಲ್ಲಿ ಸಂಶಯವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ