ಆ್ಯಪ್ನಗರ

ರಾಜಭವನದತ್ತ ಪಟ್ಟಿ, ಸೋಮವಾರ ಸಂಜೆಯೊಳಗೆ ಖಾತೆ ಹಂಚಿಕೆ ಫೈನಲ್

ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಬಹುತೇಕ ಪೂರ್ಣಗೊಂಡಿದ್ದು ರಾಜ್ಯಪಾಲರ ಒಪ್ಪಿಗೆಯಷ್ಟೇ ಬಾಕಿ ಉಳಿದಿದೆ. ಖಾತೆಗಳ ಪಟ್ಟಿಯನ್ನು ಸಿಎಂ ಬಿಎಸ್‌ವೈ ರಾಜ್ಯಪಾಲರ ಒಪ್ಪಿಗೆಗಾಗಿ ರಾಜಭವನಕ್ಕೆ ಕಲುಹಿಸಿದ್ದಾರೆ. ಸೋಮವಾರ ಸಂಜೆಯ ಒಳಗಾಗಿ ಎಲ್ಲವೂ ಅಂತಿಮಗೊಳ್ಳಲಿದೆ.

Vijaya Karnataka Web 10 Feb 2020, 11:50 am
ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಅಂತಿಮಗೊಂಡಿದೆ. ಸಿಎಂ ಬಿ.ಎಸ್‌ ಯಡಿಯೂರಪ್ಪ ತಯಾರಿಸಿದ ಪಟ್ಟಿಯನ್ನು ಅಧಿಕಾರಿಗಳು ರಾಜ್ಯಪಾಲರ ಒಪ್ಪಿಗೆಗಾಗಿ ರಾಜಭವನಕ್ಕೆ ತೆಗೆದುಕೊಂಡು ಹೋಗಲಿದ್ದಾರೆ.
Vijaya Karnataka Web karnataka cabinet portfolio will announce on monday
ರಾಜಭವನದತ್ತ ಪಟ್ಟಿ, ಸೋಮವಾರ ಸಂಜೆಯೊಳಗೆ ಖಾತೆ ಹಂಚಿಕೆ ಫೈನಲ್


ನೂತನ 10 ಶಾಸಕರಿಗೆ ಯಾವ ಯಾವ ಖಾತೆಯನ್ನು ನೀಡಲಾಗಿದೆ ಎಂಬ ಪಟ್ಟಿಯನ್ನು ಬಿಎಸ್‌ವೈ ತಯಾರಿಸಿದ್ದಾರೆ. ಪ್ರಬಲ ಖಾತೆಗಾಗಿ ಬೇಡಿಕೆ ನೂತನ ಸಚಿವರು ಬೇಡಿಕೆ ಇಟ್ಟರೂ ಯಾರಿಗೆ ಯಾವ ಖಾತೆಯನ್ನು ನೀಡಲಾಗಿದೆ ಎಂಬುವುದು ಗೌಪ್ಯವಾಗಿಡಲಾಗಿದೆ.

ಇನ್ನು ಕೆಲವೇ ಕ್ಷಣಗಳಲ್ಲಿ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಲಿದ್ದು ಅವರ ಒಪ್ಪಿಗೆ ಬಳಿಕ ಸಿಎಂ ಬಿಎಸ್‌ವೈ ಖಾತೆಯ ಕುರಿತಾಗಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಬಹುತೇಕ ಸೋಮವಾರ ಸಂಜೆಯ ಒಳಗಾಗಿ ಎಲ್ಲವೂ ಅಂತಿಮಗೊಳ್ಳುವ ಸಾಧ್ಯತೆ ಇದೆ.

ಕಂದಾಯದಲ್ಲಿ ತೃಪ್ತಿಯಿದೆ, ಪೌರಾಡಳಿತ ಬಿಟ್ಟುಕೊಡಲು ಸಿದ್ಧ - ಆರ್‌. ಅಶೋಕ್

ಸಂಭಾವ್ಯ ಖಾತೆಗಳ ಪಟ್ಟಿ ಇಲ್ಲಿದೆ

ರಮೇಶ್ ಜಾರಕಿಹೊಳಿ - ಜಲಸಂಪನ್ಮೂಲ / ಇಂಧನ

ಬಿ.ಸಿ ಪಾಟೀಲ್‌ - ಆಹಾರ ಮತ್ತು ನಾಗರಿಕ ಪೂರೈಕೆ, ಬಂದೀಖಾನೆ ಅಥವಾ ಅರಣ್ಯ

ಶ್ರೀಮಂತ ಪಾಟೀಲ್‌ - ಸಕ್ಕರೆ

ನಾರಾಯಣ ಗೌಡ - ಸಣ್ಣ ನೀರಾವರಿ

ಎಸ್‌.ಟಿ ಸೋಮಶೇಖರ್ - ಸಹಕಾರ

ಆನಂದ್‌ ಸಿಂಗ್ - ಕೌಶಲ್ಯಾಭಿವೃದ್ದಿ, ಯುವಜನ ಸೇವೆ ಮತ್ತು ಕ್ರೀಡೆ

ಕೆ. ಗೋಪಾಲಯ್ಯ - ಕಾರ್ಮಿಕ

ಶಿವರಾಂ ಹೆಬ್ಬಾರ್‌- ಪೌರಾಡಳಿತ/ ತೋಟಗಾರಿಕೆ

ಕೆ. ಸುಧಾಕರ್ - ವೈದ್ಯಕೀಯ ಶಿಕ್ಷಣ

ಬೈರತಿ ಬಸವರಾಜ್ - ಹಿಂದುಳಿದ ವರ್ಗಗಳ ಕಲ್ಯಾಣ/ ನಗರಾಭಿವೃದ್ದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ