ಆ್ಯಪ್ನಗರ

ಖುದ್ದು ಟ್ರಾಫಿಕ್ ಕ್ಲಿಯರ್ ಮಾಡಿಸಿದ್ರು ಸಿಎಂ- ವೈರಲ್ ಆಯ್ತು ವಿಡಿಯೋ

ಉಪಚುನಾವಣೆ ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಲ್ ಆಗಿದ್ದಾರೆ. ಸ್ವತಃ ತಾವೇ ಮುಂದೆ ನಿಂತು ಟ್ರಾಫಿಕ್ ಜಾಮ್ ಕ್ಲೀಯರ್ ಮಾಡಿ ಕಾರ್ಯಕ್ರಮಕ್ಕೆ ತೆರಳಿದ ಘಟನೆ ನಡೆದಿದೆ.

Vijaya Karnataka Web 26 Sep 2019, 8:23 pm
ಬೆಂಗಳೂರು: ಉಪಚುನಾವಣೆ ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಫುಲ್ ಕೂಲ್ ಆಗಿದ್ದಾರೆ. ಅನರ್ಹ ಶಾಸಕರ ಭವಿಷ್ಯದ ಕುರಿತಾಗಿ ಟೆಂಕ್ಷನ್‌ನಲ್ಲಿದ್ದ ಸಿಎಂ ಬಿಎಸ್‌ವೈ ಸುಪ್ರೀಂ ತೀರ್ಪಿನಿಂದ ನಿರಾಳರಾಗಿದ್ದಾರೆ. ತೀರ್ಪು ಪ್ರಕಟವಾದ ಬಳಿಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂಧರ್ಭದಲ್ಲಿ ಟ್ರಾಫಿಕ್ ಜಾಮ್ ಉಂಟಾದಾಗ ಖುದ್ದು ತಾವೇ ಮುಂದೆ ನಿಂತುಕೊಂಡು ಟ್ರಾಫಿಕ್ ಕ್ಲಿಯರ್ ಮಾಡಿಸಿದ ಅಪರೂಪದ ಘಟನೆಯೂ ನಡೆಯಿತು.
Vijaya Karnataka Web bs yadiyurappa


ಉಪಚುನಾವಣೆ ರದ್ದು ಸುಪ್ರೀಂ ತೀರ್ಪು; ಯಾರು ಏನಂದ್ರು?

ಗುರುವಾರ ಸಂಜೆ ಕಾರ್ಯಕ್ರಮದ ನಿಮಿತ್ತ ಮುಖ್ಯಮಂತ್ರಿಗಳು ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಿಂದ ಬನಶಂಕರಿಗೆ ತೆರಳಬೇಕಿತ್ತು. ಇದೇ ವೇಳೆ ಅನರ್ಹ ಶಾಸಕರ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪು ಬಂದು ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದ ಕಾರಣದಿಂದಾಗಿ ಕಾರ್ಯಕ್ರಮಕ್ಕೆ ತೆರಳುವುದು ತಡವಾಗಿತ್ತು.

ಸಿಎಂ ಅನರ್ಹ ಶಾಸಕರಿಂದ ಹೊಡೆಸಿಕೊಳ್ಳುವ ಸ್ಥಿತಿಯಲ್ಲಿದ್ರು-ಎಚ್‌ಡಿಕೆ ಬಾಂಬ್

ಇನ್ನೇನು ಹೊರಡಬೇಕು ಅನ್ನುವ ಹೊತ್ತಿಗೆ ಡಾಲರ್ಸ್ ಕಾಲೋನಿ ಮುಖ್ಯರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಯಿತು. ಆದರೆ ಸಿಎಂ ಬಿಎಸ್‌ವೈ ಕೊಂಚವೂ ಸಿಡುಕು ವ್ಯಕ್ತಪಡಿಸಲಿಲ್ಲ.

ಅಲ್ಲದೆ ವಾಹನಗಳನ್ನು ತಡೆದು ನಿಲ್ಲಿಸುವಂತೆಯೂ ಪೊಲೀಸರಿಗೆ ಸೂಚಿಸಲಿಲ್ಲ. ಬದಲಾಗಿ ತಾನೇ ಖುದ್ದು ಕಾರ್ ಮುಂದೆ ನಿಂತು ಪೊಲೀಸರಿಗೆ ಸೂಚನೆಯನ್ನು ನೀಡುತ್ತಾ ಟ್ರಾಫಿಕ್ ಕ್ಲಿಯರ್ ಮಾಡಿಸಿದ್ರು.

15 ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂ ತಡೆ : ಅನರ್ಹ ಶಾಸಕರ ವಿಚಾರಣೆ ಅ. 22ಕ್ಕೆ

ಕೆಲ ಹೊತ್ತು ಕಾರ್ ಹತ್ತದೆ ನಿಂತುಕೊಂಡ ಸಿಎಂ ಬಿಎಸ್‌ವೈ ಟ್ರಾಫಿಕ್ ಜಾಮ್ ಕ್ಲಿಯರ್ ಆದ ಬಳಿಕವಷ್ಟೇ ಅವರ ಬೆಂಗಾವಲು ವಾಹನದೊಂದಿಗೆ ತೆರಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ