ಆ್ಯಪ್ನಗರ

‘ಹಿಂದಿ ಹೇರಿಕೆ ಮಾತೇ ಇಲ್ಲ, ಕನ್ನಡವೇ ನಮ್ಮ ಭಾಷೆ, ಸಂಸ್ಕೃತಿ’: ಸಿಎಂ ಬಿಎಸ್‌ವೈ ಟ್ವೀಟಾಸ್ತ್ರ

ನರೇಂದ್ರ ಮೋದಿ ಸಾರಥ್ಯದ ಕೇಂದ್ರ ಸರ್ಕಾರ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಹೇರಿಕೆ ಮಾಡಲಿದೆ ಅನ್ನೋ ಕೂಗಿಗೆ ಶನಿವಾರ ಅಮಿತ್ ಶಾ ಕೊಟ್ಟ ಹೇಳಿಕೆ ಇಂಬುನೀಡಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಾದ್ಯಂತ ವಿರೋಧದ ಅಲೆ ಎದ್ದಿದೆ. ಇದನ್ನು ಮನಗಂಡಿರುವ ಸಿಎಂ ಯಡಿಯೂರಪ್ಪ, ವಿವಾದವನ್ನು ತಣ್ಣಗಾಗಿಸಲು ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ.

Vijaya Karnataka Web 16 Sep 2019, 5:07 pm
ಬೆಂಗಳೂರು: ದೇಶಕ್ಕೊಂದು ಅಧಿಕೃತ ಭಾಷೆ ಬೇಕು ಎನ್ನುವ ಮೂಲಕ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಭಿಪ್ರಾಯ, ಇದೀಗ ಭಾರೀ ವಾಗ್ಯುದ್ಧಕ್ಕೆ ಕಾರಣವಾಗಿದೆ. ಉತ್ತರ ಭಾರತೀಯರ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ತಿರುಗಿಬಿದ್ದಿವೆ. ಈ ಹೇಳಿಕೆಗೆ ರಾಜಕೀಯದ ರಂಗು ಕೂಡಾ ಸಿಕ್ಕಿದೆ. ಬಿಜೆಪಿ ವಿರುದ್ಧ ಪ್ರಾದೇಶಿಕ ಪಕ್ಷಗಳು ಹರಿಹಾಯುತ್ತಿವೆ. ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಅಮಿತ್ ಶಾ ನಿಲುವಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಕರ್ನಾಟಕದ ಮಟ್ಟಿಗೆ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಕನ್ನಡಕ್ಕೆ ತಮ್ಮ ಆದ್ಯತೆ ಎಂಬರ್ಥದಲ್ಲಿ ಟ್ವೀಟ್ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ.
Vijaya Karnataka Web amit sha and bsy


‘ಹಿಂದಿ ರಾಷ್ಟ್ರಭಾಷೆ’ ವಾದಕ್ಕೆ ಕಮಲ್ ಹಾಸನ್ ತಿರುಗೇಟು: ‘ಯಾವುದೇ ಶಾಗೆ ಅಧಿಕಾರವಿಲ್ಲ’ವಂತೆ!

ಸಿಎಂ ಯಡಿಯೂರಪ್ಪ ತಮ್ಮ ಟ್ವೀಟ್‌ನಲ್ಲಿ ಹೇಳಿರೋದೇನು?

‘ದೇಶದ ಎಲ್ಲ ಅಧಿಕೃತ ಭಾಷಗಳೂ ಸಮಾನ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕನ್ನಡ ನಮ್ಮ ಅಧಿಕೃತ ಆಡಳಿತ ಭಾಷೆ. ನಾವು ಯಾವುದೇ ಕಾರಣಕ್ಕೂ ಕನ್ನಡದ ಪ್ರಾಮುಖ್ಯತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳೋದಿಲ್ಲ. ಕನ್ನಡ ಭಾಷೆ ಹಾಗೂ ಕರ್ನಾಟಕದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಬದ್ಧರಾಗಿದ್ದೇವೆ.’


ಕಳೆದ ಶನಿವಾರವಷ್ಟೇ ಹಿಂದಿ ರಾಷ್ಟ್ರಭಾಷೆಯಾಗಬೇಕು ಎಂಬರ್ಥದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿಪ್ರಾಯಪಟ್ಟಿದ್ದರು. ಎಲ್ಲರೂ ತಮ್ಮ ತಮ್ಮ ರಾಜ್ಯಗಳ ಮಾತೃಭಾಷೆಯನ್ನೂ ಹೆಚ್ಚಾಗಿ ಬಳಸಿ. ಜೊತೆಯಲ್ಲೇ ರಾಜ್ಯದ ಮೂಲೆಮೂಲೆಗೂ ಹಿಂದಿ ಭಾಷೆಯನ್ನು ತಲುಪಿಸೋಣ ಎಂದು ಶಾ ಹೇಳಿದ್ದರು. ಭಾರತದಲ್ಲಿ ಎಷ್ಟೊಂದು ಭಾಷೆಗಳಿವೆ. ದೇಶದ ಎಲ್ಲ ಭಾಷೆಗಳು ಅತ್ಯಗತ್ಯ. ಆದ್ರೆ, ಜೊತೆಯಲ್ಲೇ ದೇಶಕ್ಕೊಂದು ಭಾಷೆ ಇರೋದೂ ಮುಖ್ಯ. ಆ ಭಾಷೆಯ ಮೂಲಕವೇ ಜಾಗತಿಕ ಮಟ್ಟದಲ್ಲಿ ದೇಶ ಗುರ್ತಿಸಿಕೊಳ್ಳುತ್ತೆ ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದರು.

ದೇಶಕ್ಕೊಂದೇ ಭಾಷೆ ಶಾ ಹಿಂದಿ ಸೂತ್ರಕ್ಕೆ ಬಿಜೆಪಿಯಲ್ಲೇ ಭಿನ್ನಧ್ವನಿ !

ಅಮಿತ್ ಶಾ ಹೇಳಿಕೆಗೆ ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲ ಬಿಜೆಪಿ ನಾಯಕರೂ ತಮ್ಮ ಅಸಮಾಧಾನ ಹೊರಹಾಕಿದ್ದರು. ತಮಿಳುನಾಡು, ಆಂಧ್ರ, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲೂ ಅಮಿತ್ ಶಾ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಹಿಂದಿ ರಾಷ್ಟ್ರ ಭಾಷೆ ಪ್ರಸ್ತಾಪಕ್ಕೆ ವಿರೋಧದ ಕಿಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ