ಆ್ಯಪ್ನಗರ

ಸಚಿವರು ಕೆಲಸವನ್ನೇ ಮಾಡ್ತಿಲ್ಲ ಎಂಬ ರೇಣುಕಾಚಾರ್ಯ ಆರೋಪವನ್ನು ಒಪ್ಪುತ್ತೀರಾ? ಕಾಂಗ್ರೆಸ್ ಪ್ರಶ್ನೆ

ಸಚಿವರು ಕೆಲಸವನ್ನೇ ಮಾಡ್ತಿಲ್ಲ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಆರೋಪವನ್ನು ಒಪ್ಪುತ್ತೀರಾ? ಎಂದು ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಏನು ಹೇಳಿದೆ ಎಂಬ ವಿವರ ಇಲ್ಲಿದೆ.

Vijaya Karnataka Web 19 Jul 2022, 12:02 pm

ಹೈಲೈಟ್ಸ್‌:

  • ಸಚಿವರು ಕೆಲಸವನ್ನೇ ಮಾಡ್ತಿಲ್ಲ ಎಂಬ ರೇಣುಕಾಚಾರ್ಯ ಆರೋಪವನ್ನು ಒಪ್ಪುತ್ತೀರಾ?
  • ತಮ್ಮ ಕ್ಷೇತ್ರ ಬಿಟ್ಟು ಮಂತ್ರಿಗಿರಿಯ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದಿದ್ದ ರೇಣುಕಾಚಾರ್ಯ
  • ಬಿಜೆಪಿಗೆ ಟ್ವೀಟ್‌ ಮೂಲಕ ಪ್ರಶ್ನೆ ಮಾಡಿದ ಕರ್ನಾಟಕ ಕಾಂಗ್ರೆಸ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web MP Renukacharya
ಸಂಗ್ರಹ ಚಿತ್ರ
ಬೆಂಗಳೂರು: ಸಚಿವರು ಕೆಲಸವನ್ನೇ ಮಾಡ್ತಿಲ್ಲ ಎಂಬ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಮಾಡಿರುವ ಆರೋಪವನ್ನು ಒಪ್ಪುತ್ತೀರಾ? ಎಂದು ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.


ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ವ್ಯಾಪಾರ ಸೌಧದ 3ನೇ ಮಹಡಿಗೆ ಸೀಮಿತರಾಗಿದ್ದಾರೆ. ತಮ್ಮ ಕ್ಷೇತ್ರ ಬಿಟ್ಟು ಮಂತ್ರಿಗಿರಿಯ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಸಚಿವರು ರಾಜೀನಾಮೆ ಕೊಡಬೇಕು ಎಂದು ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಸಚಿವರ ಕಾರ್ಯವೈಖರಿ ಬಗ್ಗೆ ನನಗಂತೂ ತೃಪ್ತಿ ಇಲ್ಲ! ಸಿಡಿದೆದ್ದ ಎಂಪಿ ರೇಣುಕಾಚಾರ್ಯ

ಅವರ ಮಾತನ್ನು ಒಪ್ಪುವಿರಾ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುವಿರಾ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಬಿಜೆಪಿಗೆ ಪ್ರಶ್ನೆ ಮಾಡಿದೆ. ವಿಧಾನ ಸೌಧದ ಮೂರನೇ ಮಹಡಿಗೆ ಕೆಲವು ಸಚಿವರು ಸೀಮಿತರಾಗಿದ್ದಾರೆ. ಇಲಾಖೆಯಲ್ಲಿ ಕೆಲಸ ಮಾಡದೇ ಕೆಲವರು ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಕುರ್ಚಿಗೆ ಅಂಟಿಕೊಂಡ ಸಚಿವರಿಗೆ ಅರ್ ಎಸ್ ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಯವರು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದರು.


ಹಿಜಾಬ್ ವಿಚಾರ ವಿವಾದವಾದ ಸಂದರ್ಭದಲ್ಲೂ ಕೆಲವು ಸಚಿವರು ಬಾಯಿಬಿಡಲಿಲ್ಲ. ಹೊಂದಾಣಿಕೆಯ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಕೆಲವರು ಜೆಡಿಎಸ್ ಜೊತೆಗೆ ಕೆಲವರು ಕಾಂಗ್ರೆಸ್ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು.

ಇದನ್ನು ನಮ್ಮ ಪಕ್ಷ ಸರ್ಕಾರ ಒಪ್ಪುವುದಿಲ್ಲ. ಹೊಂದಾಣಿಕೆ ರಾಜಕಾರಣ ಬಿಜೆಪಿಯಲ್ಲಿ ನಡೆಯುವುದಿಲ್ಲ. ಬಿಜೆಪಿಯಲ್ಲಿ ಸಾಕಷ್ಟು ಕಾರ್ಯಕರ್ತರಿದ್ದಾರೆ. ಅವರಿಗೆ ನೋವುಂಟು ಮಾಡಿದ ಹಾಗಾಗುತ್ತದೆ ಎಂದು ಕಿಡಿಕಾರಿದ್ದರು.

ಕೆಲವರು ವಿಧಾನಸೌಧ ಮೂರನೇ ಮಹಡಿಗೆ ಸೀಮಿತವಾಗಿ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರವಾಗುವ ಕೆಲಸ ಮಾಡಿದ್ದಾರೆ. ಹಾಗಾಗಿ ಹಿರಿಯರು ಬುದ್ದಿವಾದ ಹೇಳಿದ್ದಾರೆ. ಕೆಲವರು ಅಗ್ರೆಸ್ಸಿವ್ ಆಗಿ ಕೆಲಸ ಮಾಡಬೇಕು. ಕೆಲವರು ಕುರ್ಚಿಗೆ ಅಂಟಿಕೊಂಡಿದ್ದಾರೆ ನಾನು ಹಿಂದೆ ಹೇಳಿದ್ದೆ.

ಕೆಲವು ಹಿರಿಯ ಸಚಿವರು ಸ್ಥಾನ ತ್ಯಾಗ ಮಾಡಬೇಕಿತ್ತು. ಆದ್ರೆ ಕೆಲವರಿಗೆ ಕುರ್ಚಿಯೇ ಮುಖ್ಯ. ನಮಗೆ ಎಲ್ಲಾ ಅರ್ಹತೆ ಇದೆ. ಸಚಿವ ಸ್ಥಾನಕ್ಕೆ ಸಮರ್ಥನಿದ್ದೇನೆ. ನಾನು ಸಚಿವನಾದಾಗ ಒಳ್ಳೆ ಕೆಲಸ ಮಾಡಿದ್ದೇನೆ.‌ಇಲಾಖೆ ಒಳ ಹೊರಗುಗಳನ್ನು ಅರಿತು ಸಚಿವರು ಕೆಲಸ ಮಾಡಬೇಕು ಎಂದು ರೇಣುಕಾಚಾರ್ಯ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ