ಆ್ಯಪ್ನಗರ

ಕರ್ನಾಟಕ ಕೊರೊನಾ ಕರ್ಫ್ಯೂ: ರಾಜ್ಯದಲ್ಲಿ 14 ದಿನಗಳ ಕಾಲ ಏನಿರುತ್ತೆ? ಏನಿರಲ್ಲ?

ಕೊರೊನಾ ಸೋಂಕು ತೀವ್ರ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆ ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇದೀಗ ನಾಳೆ ಸಂಜೆಯಿಂದ ಜಾರಿ ಬರುವಂತೆ 14 ದಿನಗಳ ಲಾಕ್‌ಡೌನ್‌ ಮಾದರಿಯ ಕೊರೊನಾ ಕರ್ಫ್ಯೂ ಹೇರಿದೆ. ಅಲ್ಲದೇ ಜನರ ಓಡಾಟಕ್ಕೆ ಸಮಯ ನಿಗದಿ ಪಡಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Vijaya Karnataka 26 Apr 2021, 3:29 pm
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಸುನಾಮಿಯಂತೆ ಅಪ್ಪಳಿಸುತ್ತಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ 14 ದಿನಗಳ ಕಠಿಣ ಕರ್ಫ್ಯೂ ಹೇರಿದೆ. ಮಂಗಳವಾರ ಸಂಜೆಯಿಂದ 14 ದಿನಗಳ ಕಾಲ ರಾಜ್ಯ ಸ್ಥಬ್ಧವಾಗಲಿದೆ. ನಿಗದಿಪಡಿಸಿದ ಸಮಯದಲ್ಲಿ ಮಾತ್ರ ಜನರಿಗೆ ಹೊರಗೆ ಹೋಗಲು ಅವಕಾಶವಿರಲಿದೆ. ಹಾಗಾದರೆ 14 ದಿನಗಳ ಕಾಲ ರಾಜ್ಯದಲ್ಲಿ ಯಾವ ಸೇವೆ ಇರುತ್ತದೆ? ಯಾವ ಸೇವೆ ಇರುವುದಿಲ್ಲ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
Vijaya Karnataka Web corona


ಯಾವ ಸೇವೆ ಇರುತ್ತದೆ? ಯಾವ ಸೇವೆ ಇರಲ್ಲ?
1. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರ ವರೆಗೆ ಅವಕಾಶ( ದಿನಸಿ ಅಂಗಡಿ, ಬೇಕರಿಗಳು, ಮೆಡಿಕಲ್‌, ತರಕಾರಿ, ಹಣ್ಣು)
2. ಸರಕಾರಿ, ಖಾಸಗಿ ಸೇರಿ ಯಾವುದೇ ಬಸ್‌ಗಳ ಓಡಾಟ ಇರುವುದಿಲ್ಲ, ಮೆಟ್ರೋ ಸೇವೆಯೂ ಇರಲ್ಲ
3.ಕೃಷಿ ಚಟುವಟಿಕೆ, ಕೈಗಾರಿಕೆಗೆ ಯಾವುದೇ ತೊಂದರೆ ಇಲ್ಲ
4.ಬ್ಯಾಂಕುಗಳ ಸೇವೆ ಎಂದಿನಂತೆ ಇರುತ್ತದೆ
5.ಹೋಟೆಲ್‌, ರೆಸ್ಟೋರೆಂಟ್‌ಗಳು ತೆರೆದಿರುತ್ತದೆ ಆದರೆ ಪಾರ್ಸೆಲ್‌ಗೆ ಮಾತ್ರ ಅವಕಾಶ
6.ಸರಕು ಸಾಗಾಟ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ
7.ಮದ್ಯದಂಗಡಿಗಳು ಬೆಳಗ್ಗೆ 6ರಿಂದ 10ರ ವರೆಗೆ ತೆರೆದಿರುತ್ತದೆ ಆದರೆ ಪಾರ್ಸೆಲ್‌ಗೆ ಮಾತ್ರ ಅವಕಾಶ
8. ಆಸ್ಪತ್ರೆಗಳು ಸಂಪೂರ್ಣವಾಗಿ ತೆರೆದಿರುತ್ತದೆ
9. ಜನರಿಗೆ ಅಗತ್ಯ ಓಡಾಟಕ್ಕೆ ಮಾತ್ರ ಅವಕಾಶ, ಬೆಳಗ್ಗೆ 6ರಿಂದ 10ರ ವರೆಗೆ ಸಮಯ ನಿಗದಿಪಡಿಸಲಾಗಿದೆ
10.ಹೊರ ರಾಜ್ಯ ಸರಕು ಸಾಗಾಣಿಕೆ ವಾಹನಗಳ ಓಡಾಟಕ್ಕೆ ಯಾವುದೇ ತೊಂದರೆ ಇಲ್ಲ
11. ಯಾವುದೇ ರೀತಿಯ ಚುನಾವಣೆ ಇರುವುದಿಲ್ಲ(ಚನಾವಣೆ ಮುಂದೂಡಿ ಆದೇಶ)
12. ಈ ಸಮಯದಲ್ಲಿ ಯಾವುದೇ ಪರೀಕ್ಷೆಗಳು ಇರುವುದಿಲ್ಲ( ಪರೀಕ್ಷೆ ಮುಂದೂಡಿ ಆದೇಶ)

ರಾಜ್ಯಾದ್ಯಂತ 14 ದಿನಗಳ ಕೋವಿಡ್ ಕರ್ಫ್ಯೂ: ಬಿಎಸ್‌ವೈ ಸರ್ಕಾರದ ಮಹತ್ವದ ಘೋಷಣೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ