ಆ್ಯಪ್ನಗರ

ಶಾಸಕ ಶ್ರೀಮಂತ್‌ ಪಾಟೀಲ್‌ ಬಗ್ಗೆ ನಿಜ ತಿಳಿದು ಹೇಳಿ: ಸ್ಪೀಕರ್‌ ಗೃಹ ಇಲಾಖೆಗೆ ಸೂಚನೆ !

ಊಟದ ವಿರಾಮದ ಬಳಿಕ ಶ್ರೀಮಂತ್‌ ಪಾಟೀಲ್‌ ಅನಾರೋಗ್ಯ ಸದನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. ಶ್ರೀಮಂತ್‌ ಪಾಟೀಲ್ ಅವರನ್ನು ಅಪಹರಣ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್‌ ಆರೋಪ ಮಾಡಿದ್ದಾರೆ. ಈ ಸಂಬಂಧ ಕುಟುಂಬದಿಂದ ಮಾಹಿತಿ ಪಡೆದು ನಾಳೆಯೊಳಗೆ ತಿಳಿಸುವಂತೆ ರಮೇಶ್‌ ಕುಮಾರ್‌ ಗೃಹ ಸಚಿವ ಎಂಬಿ ಪಾಟೀಲ್‌ಗೆ ತಿಳಿಸಿದ್ದಾರೆ.

Vijaya Karnataka Web 18 Jul 2019, 4:36 pm
ಬೆಂಗಳೂರು: ಶಾಸಕ ಶ್ರೀಮಂತ್‌ ಪಾಟೀಲ್‌ ಅವರ ಗೈರಿನ ಬಗ್ಗೆ ತನಿಖೆ ನಡೆಸಿ. ಶುಕ್ರವಾರದೊಳಗೆ ಈ ಕುರಿತು ವರದಿ ನೀಡುವಂತೆ ಸ್ಪೀಕರ್ ರಮೇಶ್‌ ಕುಮಾರ್‌ ಗೃಹ ಇಲಾಖೆಗೆ ಸೂಚಿಸಿದ್ದಾರೆ.
Vijaya Karnataka Web DKS


ಊಟದ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್‌ ರಮೇಶ್‌ ಕುಮಾರ್‌ ಅವರಲ್ಲಿ ಡಿಕೆ ಶಿವಕುಮಾರ್‌, ಶಾಸಕ ಶ್ರೀಮಂತ್‌ ಪಾಟೀಲ್‌ ಅವರನ್ನು ಬಿಜೆಪಿ ಶಾಸಕರು ಅಪಹರಣ ಮಾಡಿದ್ದಾರೆ. ಇದಕ್ಕೆ ಅನಾರೋಗ್ಯದ ನೆಪ ಹಚ್ಚಿದ್ದಾರೆ. ನಮ್ಮ ಶಾಸಕರನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದ್ದು, ಇಂತಹ ಘಟನೆ ಅಪಾಯಕಾರಿ ಎಂದು ಶಿವಕುಮಾರ್‌ ಆರೋಪಿಸಿದರು.

ಶಿವಕುಮಾರ್‌ ಆರೋಪಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್‌ ನಾಯಕರು ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಮಂತ್‌ ಪಾಟೀಲ್‌ ಅವರ ಫೋಟೋ, ಮುಂಬಯಿಗೆ ಪ್ರಯಾಣಿಸಿದ ವಿಮಾನದ ಟಿಕೆಟ್‌ ವಿವರಗಳನ್ನು ಸ್ಪೀಕರ್‌ಗೆ ನೀಡಿದರಲ್ಲದೆ, ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ವಿಶ್ವಾಸಮತ ಯಾಚನೆ ಕಲಾಪದ ತಾಜಾ ಅಪ್‌ಡೇಟ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಶ್ರೀಮಂತ್‌ ಪಾಟೀಲ್‌ ಅವರು ಗುರುವಾರ ರಾತ್ರಿ ನಮ್ಮ ಜತೆಗೇ ಇದ್ದರು. ಆ ಬಳಿಕ ಅವರನ್ನು ಬಲವಂತವಾಗಿ ಮುಂಬಯಿ ಒಯ್ಯಲಾಗಿದೆ. ಅವರ ಆರೋಗ್ಯ ಚೆನ್ನಾಗಿಯೇ ಇದೆ. ಹೃದಯದ ಸಮಸ್ಯೆ ಇರುವ ವ್ಯಕ್ತಿ ಮುಂಬಯಿಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆಯೇ ಎಂದು ಶಿವಕುಮಾರ್‌ ಪ್ರಶ್ನಿಸಿದರು.


ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್‌, ಶ್ರೀಮಂತ್‌ ಪಾಟೀಲ್‌ ಬೆಳಗಿನ ಜಾವ ಅವರ ಲೆಟರ್‌ ಹೆಡ್‌ ಇಲ್ಲದೇ ಇರುವ ಒಂದು ಹಾಳೆಯಲ್ಲಿ, ತೀವ್ರ ಎದೆ ನೋವು ಕಾಣಿಸಿಕೊಂಡ ಕಾರಣ, ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಹಾಗೂ ವೈದ್ಯರ ಅನುಮತಿಯ ಬಳಿಕವಷ್ಟೇ ಬಿಡುಗಡೆ ಸಾಧ್ಯವಾಗುತ್ತದೆ. ಹೀಗಾಗಿ ಅಧಿವೇಶನಕ್ಕೆ ಬರಲಾಗುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಪತ್ರವನ್ನು ಸದನದಲ್ಲಿ ಓದಿದರು.

ಮತ್ತೆ ಈಗಲ್‌ಟನ್ ರೆರ್ಸಾಟ್‌ಗೆ ಕಾಂಗ್ರೆಸ್ ಶಾಸಕರು ಶಿಫ್ಟ್‌?

ಆದರೆ ಲೆಟರ್‌ಹೆಡ್‌ ಇಲ್ಲದ ಪತ್ರ, ಶಿವಕುಮಾರ್‌ ಅವರ ಮಾತುಗಳಿಂದ ಈ ಪತ್ರ ಎಷ್ಟು ಸತ್ಯ ಎಂಬುದು ಅನುಮಾನ ಉಂಟು ಮಾಡುತ್ತಿದೆ. ಗೃಹ ಇಲಾಖೆ ಕೂಡಲೇ ಶ್ರೀಮಂತ್‌ ಪಾಟೀಲ್‌ ಅವರ ಕುಟುಂಬವನ್ನು ಸಂಪರ್ಕಿಸಿ, ಮಾಹಿತಿ ಪಡೆಯಿರಿ. ಈ ಕುರಿತು ಸರಿಯಾದ ಮಾಹಿತಿಯನ್ನು ಶುಕ್ರವಾರದೊಳಗಾಗಿ ನೀಡುವಂತೆ ಸೂಚಿಸಿದರು.


ಶ್ರೀಮಂತ್‌ ಪಾಟೀಲ್‌ ಅವರ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಮೇಶ್‌ ಕುಮಾರ್‌, ಇದಕ್ಕೆಲ್ಲ ಒಂದು ಶಿಸ್ತಿಲ್ಲವೇ, ಅವರಿಗೆ ನಿಜವಾಗಿಯೂ ಅನಾರೋಗ್ಯಕ್ಕೆ ಒಳಗಾಗಿದ್ದಾರೆಯೇ ಎಂದು ಕೇಳಿದರು. ಅಲ್ಲದೆ ಇದರ ಕುರಿತು ನಾನು ತನಿಖೆ ಮಾಡಲು ಆದೇಶಿಸಲಾಗದು. ಇದು ನನಗೆ ಸಂಬಂಧಿಸಿದ ವಿಚಾರವೂ ಅಲ್ಲ. ಆದರೆ ಅವರ ನೋಟ್‌ಪ್ಯಾಡ್‌ ಅಲ್ಲದ ಹಾಳೆಯಲ್ಲಿ ಅಧಿವೇಶನಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ. ಇದರ ಬಗ್ಗೆ ಮಾಹಿತಿ ಕೇಳುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ