ಆ್ಯಪ್ನಗರ

ಕೊರೊನಾ ಸಂಕಷ್ಟ: ವಿದೇಶದಿಂದ ರಾಜ್ಯಕ್ಕೆ ಆಗಮಿಸುವವರು ಪಾಲಿಸಬೇಕಾದ ಮಾರ್ಗಸೂಚಿಗಳೇನು?

ಕೊರೊನಾ ಕಾರಣದಿಂದಾಗಿ ವಿದೇಶದಿಂದ ಭಾರತಕ್ಕೆ ಆಗಮಿಸುತ್ತಿರುವ ಅನಿವಾಸಿ ಭಾರತೀಯರು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಪ್ರತಿಯೊಬ್ಬರಿಗೆ 14 ದಿನಗಖ ಕ್ವಾರಂಟೈನ್ ಕಡ್ಡಾಯವಾಗಿದೆ.

Vijaya Karnataka Web 10 May 2020, 11:25 am
ಬೆಂಗಳೂರು: ಕೊರೊನಾ ಸಂಕಷ್ಟಕ್ಕೆ ಸಿಲುಕಿ ವಿದೇಶದಲ್ಲಿರುವ ಭಾರತೀಯರನ್ನು ಅವರ ತವರಿಗೆ ಕರೆತರಲು ಭಾರತ ಸರ್ಕಾರ ಮುಂದಾಗಿದ್ದು ಕನ್ನಡಿಗರೂ ತಮ್ಮ ಊರುಗಳಿಗೆ ಮರಳಲಿದ್ದಾರೆ. ಗಲ್ಫ್‌ ರಾಷ್ಟ್ರಗಳು, ಯುರೋಪ್‌ ಸೇರಿದಂತೆ ವಿದೇಶಗಳಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಅನಿವಾಸಿ ಭಾರತೀಯರನ್ನು ಬರಮಾಡಿಕೊಳ್ಳಲು ರಾಜ್ಯ ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿಕೊಳ್ಳುತ್ತಿದೆ.
Vijaya Karnataka Web vande bharath mission


ವಿವಿಧ ಹೊರದೇಶಗಳಲ್ಲಿರುವ ಸುಮಾರು 60 ಸಾವಿರ ಭಾರತೀಯರು ಆರಂಭಿಕ ಹಂತದಲ್ಲಿ ತಾಯ್ನಾಡಿಗೆ ತಲುಪಲಿದ್ದಾರೆ. ಈ ಪೈಕಿ 2786 ಕನ್ನಡಿಗರೂ ಒಳಗೊಂಡಿದ್ದಾರೆ. ವಿದೇಶದಿಂದ ರಾಜ್ಯಕ್ಕೆ ಆಗಮಿಸಲಿರುವವರನ್ನು ತಪಾಸಣೆ ಹಾಗೂ ಕ್ವಾರಂಟೈನ್ ಮಾಡಲು ಸೂಕ್ತ ವ್ಯವಸ್ಥೆಗಳನ್ನು ಸರ್ಕಾರ ಕೈಗೊಂಡಿದೆ.

ಕೊರೊನಾ ಸಂಕಷ್ಟ: ಹೋಟೆಲ್‌ ಬದಲಿಗೆ ಮನೆಯಲ್ಲೇ ಕ್ವಾರಂಟೈನ್ !‌

ಈಗಾಗಲೇ ಮೂರು ವಿಭಾಗಗಳಾಗಿ ವಿಭಜನೆ ಮಾಡಲಾಗಿದ್ದು ಎ ದರ್ಜೆಯ ಪ್ರಯಾಣಿಕರು ಬೆಂಗಳೂರು ನಗರದಲ್ಲಿ ಕ್ವಾರಂಟೈನ್ ಆಗಲಿದ್ದಾರೆ. ಇದಕ್ಕಾಗಿ ಹೋಟೆಲ್‌ಗಳನ್ನು ಬುಕ್ ಮಾಡಲಾಗಿದೆ. ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಉಳಿದವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದ್ದು ಅದಕ್ಕಾಗಿ ಹೋಟೆಲ್‌ಗಳನ್ನು ಈಗಾಗಲೇ ನಿಗದಿ ಮಾಡಲಾಗಿದೆ.


ಕೊರೊನಾ ಲೈವ್ ಅಪ್‌ಡೇಟ್ಸ್: ಭಾರತದಲ್ಲಿ 63 ಸಾವಿರ ಸಮೀಪಕ್ಕೆ ಸೋಂಕಿತರು!

ರಾಜ್ಯಕ್ಕೆ ಆಗಮಿಸಲಿರುವ ವಿದೇಶಿಯರು ಸರ್ಕಾರದ ಕೊರೊನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸೂಚನೆ ನೀಡಿದ್ದಾರೆ. ಬರುವಂತಹಾ ಎಲ್ಲಾ ಪ್ರಯಾಣಿಕರುನ್ನು ಆರಂಭದಲ್ಲಿ ಹಾಗೂ 14 ದಿನಗಳ ಬಳಿಕ ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತದೆ. ಪ್ರತಿಯೊಬ್ಬರಿಗೂ 14 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

ಕ್ವಾರಂಟೈನ್‌ನಲ್ಲಿರುವ ಅನಿವಾಸಿ ಭಾರತೀಯರು ಉಳಿದುಕೊಳ್ಳಲು ವಾಶ್ ರೂಂ ಅಟಾಚ್‌ ಆಗಿರುವ ಸಿಂಗಲ್ ರೂಂ ಸೌಲಭ್ಯವೂ ಇರಲಿದೆ. ವಸತಿ ಸೌಕರ್ಯಗಳ ದರವನ್ನು ಸರ್ಕಾರದೊಂದಿಗೆ ಸಮಾಲೋಚಿಸಿ ನಿಗದಿಪಡಿಸಲಾಗುತ್ತದೆ. ಈ ಎಲ್ಲಾ ಸೌಲಭ್ಯಗಳು ಕೊರೊನಾ ಮಾರ್ಗಸೂಚಿಗಳ ಪ್ರಕಾರ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.

ವಿದೇಶದಿಂದ ತಾಯ್ನಾಡಿಗೆ ಬರುವರಿಗೂ ಸಂಕಷ್ಟ

ವಿದೇಶದಲ್ಲಿರುವ ಭಾರತೀಯರು ತಮ್ಮ ತಾಯ್ನಾಡಿಗೆ ಬರುವ ತವಕದಲ್ಲಿದ್ದು ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಸಂಕಷ್ಟದಲ್ಲಿದ್ದಾರೆ. ಟ್ವಿಟ್ಟರ್‌ನಲ್ಲಿ ಪೋಷಕರೊಬ್ಬರು ಈ ಕುರಿತಾಗಿ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ. ನ್ಯೂಜೆರ್ಸಿಯಲ್ಲಿರುವ ಪುತ್ರಿ ಭಾರತಕ್ಕೆ ಆಗಮಿಸಲು ವಿಮಾನ ಪ್ರಯಾಣ ಅರ್ಜಿಯನ್ನು ಸಲ್ಲಿಸಿದ್ದು ಭಾರತೀಯ ರಾಯಭಾರಿ ಕಚೇರಿಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

ಈ ನಡುವೆ ಗಲ್ಫ್‌ ರಾಷ್ಟ್ರದಿಂದ ಕೇರಳಕ್ಕೆ ಆಗಮಿಸಿದವರ ಪೈಕಿ ಇಬ್ಬರಲ್ಲಿ ಕೊರೊನಾ ಪಾಸಿಟಿವ್‌ ಕಂಡುಬಂದಿದ್ದು ರಾಜ್ಯದಲ್ಲಿ ಇದು ಆಗದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂಬ ಮನವಿಯನ್ನು ಅನಿವಾಸಿ ಭಾರತೀಯರು ಮಾಡಿಕೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ಎಲ್ಲಾ ಪರಿಸ್ಥಿತಿಯನ್ನು ನಿಭಾಯಿಸಲು ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎನ್ನುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ