ಆ್ಯಪ್ನಗರ

ಕರ್ನಾಟಕದಲ್ಲಿ ವಿಸ್ತರಣೆಯಾಗುತ್ತಾ ಲಾಕ್‌ಡೌನ್! ಬಿಎಸ್‌ವೈ ಪ್ಲ್ಯಾನ್ ಏನು?

ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರ ಹಾಗೂ ತಮಿಳುನಾಡು ಸರ್ಕಾರ ಲಾಕ್‌ಡೌನ್ ಅವಧಿಯನ್ನು ಮೇ , 31 ರ ವರೆಗೆ ವಿಸ್ತರಣೆ ಮಾಡಿದೆ. ಕರ್ನಾಟಕ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬ ವಿವರ ಇಲ್ಲಿದೆ.

Vijaya Karnataka Web 17 May 2020, 4:11 pm
ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್ 3.0 ಮುಕ್ತಾಯಗೊಳ್ಳಲಿದ್ದು ರಾಜ್ಯ ಸರ್ಕಾರದ ಮುಂದಿನ ನಡೆ ಏನು ಎಂಬುವುದು ಕುತೂಹಲ ಕೆರಳಿಸಿದೆ. ಮೇ 17 ಕ್ಕೆ ಮೂರನೇ ಹಂತದ ಲಾಕ್‌ಡೌನ್ ಮುಕ್ತಾಯಗೊಳ್ಳಲಿದೆ. ಈ ನಡುವೆ ಮಹಾರಾಷ್ಟ್ರ, ತಮಿಳುನಾಡು ಸರ್ಕಾರ ಲಾಕ್‌ಡೌನ್ ಅವಧಿಯನ್ನು ಮೇ 31 ರ ವರೆಗೆ ವಿಸ್ತರಣೆ ಮಾಡಿದೆ. ಕರ್ನಾಟಕದಲ್ಲೂ ಇದೇ ರೀತಿಯ ನಿರ್ಧಾರಗಳು ಪ್ರಕಟಗೊಳ್ಳುವ ಸಾಧ್ಯತೆಗಳ ಕುರಿತಾಗಿ ಬಿಎಸ್‌ವೈ ಸರ್ಕಾರ ನಡೆ ಏನು ಎಂಬುವುದು ನಿರ್ಧಾರವಾಗಿಲ್ಲ.
Vijaya Karnataka Web bs yeddyurappa


ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್ ನಡುವೆಯೂ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಲಾಕ್‌ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಅಂತರರಾಜ್ಯ ಹಾಗೂ ಅಂತರ್‌ಜಿಲ್ಲೆಗಳ ನಡುವೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿರುವುದು ಕಂಡುಬಂದಿದೆ.

ರಾಜ್ಯದಲ್ಲಿ ಕೊರೊನಾ 54 ಹೊಸ ಪ್ರಕರಣಗಳು ಪತ್ತೆ, ಸೋಂಕಿತರ ಸಂಖ್ಯೆ 1,146 ಕ್ಕೆ ಏರಿಕೆ

ಮೇ 17 ರಂದು ಭಾನುವಾರ ಒಂದೇ ದಿನ 54 ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಮಂಡ್ಯ ಜಿಲ್ಲೆಯೊಂದರಲ್ಲೇ 22 ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಬೇಕಾದ ಅನಿವಾರ್ಯತೆಗೆ ಸರ್ಕಾರ ತಲುಪಿದೆ.

ರಾಜ್ಯದಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ 1146 ಕ್ಕೆ ತಲುಪಿದೆ. ಇದು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ನಡುವೆ ಹಸಿರು ವಲಯಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಬೆಂಗಳೂರು ನಗರ ಕೆಂಪು ವಲಯದಲ್ಲಿ ಇದ್ದರೂ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ಗರಿಗೆದರಿದ್ದು ಜನಸಂಚಾರ ಹೆಚ್ಚಾಗಿದೆ. ಕೈಗಾರಿಕೆಗಳು ಆರಂಭಗೊಂಡಿದ್ದು ವಾಹನಗಳ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿಯುತ್ತಿವೆ.

ಮಹಾರಾಷ್ಟ್ರದಲ್ಲಿ ನಿಲ್ಲದ ಕೊರೊನಾ ಅಟ್ಟಹಾಸ, ಲಾಕ್‌ಡೌನ್ ಅವಧಿ ಮೇ,31 ವರೆಗೆ ವಿಸ್ತರಣೆ

ಈ ನಡುವೆ ಸಾಮಾಜಿಕ ಅಂತರ ಪಾಲನೆ ಹಾಗೂ ಮಾಸ್ಕ್‌ ಧರಿಸುವ ಸೂಚನೆಯನ್ನು ಜನರು ಪಾಲನೆ ಮಾಡುತ್ತಿಲ್ಲ. ಇದು ಸೋಂಕು ಹರಡಲು ಅವಕಾಶ ನೀಡಬಹುದು. ಈ ನಿಟ್ಟಿನಲ್ಲಿ ಸರ್ಕಾರದ ಮುಂದಿನ ನಡೆ ಏನು ಎಂಬವುದು ಕುತೂಹಲ ಕೆರಳಿಸಿದೆ. ಕೇಂದ್ರ ಸರ್ಕಾರದ ಜೊತೆಗೆ ಬಿಎಸ್‌ವೈ ಮಾತುಕತೆ ನಡೆಸಿದ್ದು ಸಚಿವರುಗಳ ಜೊತೆಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಕೆಲವೊಂದು ರಿಯಾಯಿತಿಗಳ ಜೊತೆಗೆ ರಾಜ್ಯದಲ್ಲಿ 4.0 ಲಾಕ್‌ಡೌನ್ ಜಾರಿಗೆ ಬರುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ