ಆ್ಯಪ್ನಗರ

ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆ

ರಾಜ್ಯದಲ್ಲಿ ಜೂನ್‌ 26ರಿಂದ ಮೂರು ದಿನ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ. ಕರಾವಳಿ ಜತೆಗೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವೆಡೆ ಜೋರು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯ ಕರಾವಳಿ ಭಾಗದಲ್ಲಿ ಮಾತ್ರ ಮುಂಗಾರು ಚುರುಕಾಗಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗುತ್ತಿರುವ ಮುಂಗಾರು ಅಲ್ಲಲ್ಲಿ ಮಳೆ ಸುರಿಸುತ್ತಿದೆ. ಆದರೆ ಜೂ.26 ರಂದು ಕರಾವಳಿಯಲ್ಲಿ ಉತ್ತಮ ಮಳೆಯಾಗಲಿದೆ.

Vijaya Karnataka 24 Jun 2018, 7:57 am
ಬೆಂಗಳೂರು : ರಾಜ್ಯದಲ್ಲಿ ಜೂನ್‌ 26ರಿಂದ ಮೂರು ದಿನ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ನಿರೀಕ್ಷೆ ಇದೆ.
Vijaya Karnataka Web rain


ಕರಾವಳಿ ಜತೆಗೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವೆಡೆ ಜೋರು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯ ಕರಾವಳಿ ಭಾಗದಲ್ಲಿ ಮಾತ್ರ ಮುಂಗಾರು ಚುರುಕಾಗಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗುತ್ತಿರುವ ಮುಂಗಾರು ಅಲ್ಲಲ್ಲಿ ಮಳೆ ಸುರಿಸುತ್ತಿದೆ. ಆದರೆ ಜೂ.26 ರಂದು ಕರಾವಳಿಯಲ್ಲಿ ಉತ್ತಮ ಮಳೆಯಾಗಲಿದೆ.

ಶೇ.34 ಅಧಿಕ ಮಳೆ

ಮುಂಗಾರು ದುರ್ಬಲಗೊಂಡಿದ್ದರೂ ವಾಡಿಕೆಗಿಂತ ಶೇ.34 ರಷ್ಟು ಅಧಿಕ ಮಳೆ ಬಂದಿದೆ. ಜೂ.1ರಿಂದ ಜೂ.23ರವರೆಗೆ ವಾಡಿಕೆಯಂತೆ ರಾಜ್ಯದಲ್ಲಿ 138 ಮಿ.ಮೀ. ಮಳೆ ದಾಖಲಾಗುತ್ತದೆ. ಈ ವರ್ಷ 185 ಮಿ.ಮೀ. ಮಳೆ ದಾಖಲಾಗಿದೆ. ಅಂದರೆ, ವಾಡಿಕೆಗಿಂತ ಶೇ.34 ರಷ್ಟು ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಮೊದಲಿಗೇನೋ ಭಾರಿ ಮಳೆ ಸುರಿಯಿತು. ಆದರೆ, ಈಗ ಅಲ್ಲಿನ ಬಹುತೇಕ ಜಿಲ್ಲೆಗಳಲ್ಲಿ ದುರ್ಬಲವಾಗುತ್ತಿದೆ. ಉತ್ತರ ಒಳನಾಡಿನಲ್ಲೂ ಇದೇ ಪರಿಸ್ಥಿತಿ ಇದೆ. ಆದರೆ ಕರಾವಳಿಯಲ್ಲಿ ಹಿಂದಿನಂತೆಯೇ ಭಾರಿ ಮಳೆ ಬರುತ್ತಿದೆ.

ಈ ಜಿಲ್ಲೆಗಳಲ್ಲಿ ಮಳೆ ಕೊರತೆ

ಒಟ್ಟಾರೆಯಾಗಿ ನೋಡಿದರೆ ಪ್ರಮಾಣ ಹೆಚ್ಚಿದೆ. ಆದರೂ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿದೆ. ದಕ್ಷಿಣ ಒಳನಾಡಿನ ಮಂಡ್ಯ, ಆನೇಕಲ್‌, ಯಳಂದೂರು, ಮಾಲೂರು, ಹೊಸಕೋಟೆ, ಕೋಲಾರದ ಕೆಲ ಪ್ರದೇಶಗಳು, ಉತ್ತರ ಒಳನಾಡಿನ ಬಳ್ಳಾರಿ, ರೋಣ, ಹಾವೇರಿ, ದೇವದುರ್ಗ, ರಾಯಚೂರು ಸೇರಿದಂತೆ ಒಟ್ಟು 11 ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಈ ಜಿಲ್ಲೆಗಳಲ್ಲಿ ಭಾರಿ ಮಳೆ?

ಬೆಳಗಾವಿ, ಬೀದರ್‌, ಕಲಬುರ್ಗಿ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲೂ ಜೋರಾದ ಮಳೆ ಸುರಿಯಲಿದೆ. ಜೂ.27 ಹಾಗೂ 28 ರಂದೂ ಇದೇ ರೀತಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ