ಆ್ಯಪ್ನಗರ

ಕುಮಾರಸ್ವಾಮಿಗೆ ಕಾಡ್ತಿದೆ ‘ಆಪರೇಷನ್’ ಭಯ! ಪಕ್ಷ ಬಿಡಲು ಸಜ್ಜಾದವರು ಯಾರು ?

ಜೆಡಿಎಸ್ ಪಕ್ಷಕ್ಕೆ ಮತ್ತೆ ಆಪರೇಷನ್ ಭಯ ಕಾಡುತ್ತಿದ್ದು ಪಕ್ಷ ಬಿಟ್ಟು ಹೋಗುವ ಶಾಸಕರನ್ನು ತಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕೆಲವು ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಅಸಮಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

Vijaya Karnataka Web 18 Dec 2019, 5:15 pm
ಬೆಂಗಳೂರು: ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರಕಾರ ಪತನದ ಬೆನ್ನಲ್ಲೇ ಮತ್ತಷ್ಟು 'ಆಪರೇಷನ್' ನಡೆಯುವ ಭಯ ಜೆಡಿಎಸ್‌ಗೆ ಕಾಡುತ್ತಿದೆ. ಮೂವರು ಶಾಸಕರನ್ನು ಕಳೆದುಕೊಂಡ ಜೆಡಿಎಸ್‌ಗೆ ಮತ್ತಷ್ಟು ಶಾಸಕರು ಪಕ್ಷದಿಂದ ಹೊರಗೆ ಕಾಲಿಡುವ ಆತಂಕವಿದೆ.
Vijaya Karnataka Web karnataka jds party internal fight h d kumaraswamy in tension
ಕುಮಾರಸ್ವಾಮಿಗೆ ಕಾಡ್ತಿದೆ ‘ಆಪರೇಷನ್’ ಭಯ! ಪಕ್ಷ ಬಿಡಲು ಸಜ್ಜಾದವರು ಯಾರು ?


ಈಗಾಗಲೇ ಮಂಡ್ಯ ಕೆ. ಆರ್ ಪೇಟೆ ಶಾಸಕ ನಾರಾಯಣ ಗೌಡ ಹಾಗೂ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ಪಕ್ಷ ತೊರೆದು ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹುಣಸೂರು ಮಾಜಿ ಶಾಸಕ ಎಚ್. ವಿಶ್ವನಾಥ್ ಬಿಜೆಪಿ ಸೇರ್ಪಡೆಗೊಂಡರೂ ಉಪಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.

ಈ ನಡುವೆ ಮತ್ತಷ್ಟು ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ ಹಾಗೂ ಜೆ.ಟಿ ದೇವೇಗೌಡ ಪಕ್ಷದಿಂದ ಜಿಗಿಯೋ ಸೂಚನೆ ನೀಡಿದ್ದಾರೆ.

ಜಿ.ಟಿ ದೇವೇಗೌಡರು ಅಧಿಕೃತವಾಗಿ ಜೆಡಿಎಸ್ ತೊರೆಯದೇ ಇದ್ದರೂ ಪಕ್ಷದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದಾರೆ. ಇವರ ಜೊತೆಗೆ ಮತ್ತೆ ಕೆಲವು ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಜೆಡಿಎಸ್ ಹಿರಿಯ ಮುಖಂಡರಾದ ಬಸವರಾಜ್ ಹೊರಟ್ಟಿ ಕೂಡಾ ಅಸಮಾಧಾನವನ್ನು ಹೊರಹಾಕುತ್ತಿದ್ದು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದಾರೆ.

ಡಿಸಿಎಂ ಹುದ್ದೆ ಬೇಕೋ ಬೇಡ್ವೋ ; ಅಶ್ವಥ್ ನಾರಾಯಣ್ v/s ರೇಣುಕಾಚಾರ್ಯ ಫೈಟ್

ಶಾಸಕರು ಹಾಗೂ ಮುಖಂಡರ ಬಂಡಾಯವನ್ನು ಶಮನ ಮಾಡುವ ನಿಟ್ಟಿನಲ್ಲಿ ಸ್ವತಃ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಇದ್ಯಾವುದು ಯಶಸ್ಸು ಕಂಡಿಲ್ಲ.

ಪಕ್ಷ ಬಿಡೋರಣ್ಣ ಹಿಡಿದಿಟ್ಟುಕೊಳ್ಳಲು ಸಾಧ್ಯವೇ ? ಮಾಜಿ ಸಿಎಂ ಎಚ್‌ಡಿಕೆ ಪ್ರಶ್ನೆ

ಪಕ್ಷದೊಳಗೆ ಆಂತರಿಕ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಪಕ್ಷ ಬಿಟ್ಟು ಹೋಗುವವರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಕೈ ಕೊಟ್ಟು ಹೋಗುವವರನ್ನು ತಡೆಯಲು ಅಸಾಧ್ಯ. ಆದರೆ ನಮ್ಮ ಶಾಸಕರು ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಗಿಯದ ‘ಸಂಪುಟ ಸಂಕಟ’ - ಬಿಎಸ್‌ವೈ ಪಾಲಿಗಿದು ಬಿಸಿ ತುಪ್ಪ !

ಯಾವ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ನಂಬಿದ್ದೇನೆ. ಆದರೆ ಯಾರನ್ನು ಹಿಡಿದಿಟ್ಟುಕೊಳ್ಳಲು ಅಸಾಧ್ಯ. ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗೆ ಹೋಗಿ ನೀವೇ ನಮ್ಮ ಗುರು ಎಂದು ಕೆಲವರು ಹೇಳಿದ್ದರು. ಆದರೆ ಅವರೇ ಕೈ ಕೊಟ್ಟು ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಆಪ್ತಬಳಗದಲ್ಲಿ ಗುರುತಿಸಿಕೊಂಡು ಪಕ್ಷ ತೊರೆದು ಗೆದ್ದ ಬಿಜೆಪಿ ಶಾಸಕರಿಗೆ ಟಾಂಗ್ ನೀಡಿದರು.

ಇದೇ ವೇಳೆ ನನಗೆ ಅಧಿಕಾರ ಬೇಡ. ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮನ್ನೇ ಸಿಎಂ ಆಗಿ ಮಾಡುತ್ತೇನೆ. ಆದರೆ ಪಕ್ಷಕ್ಕೆ ಡ್ಯಾಮೇಜ್ ಮಾಡಬೇಡಿ ಎಂದು ಭಿನ್ನಮತೀಯರಿಗೆ ಎಚ್‌ಡಿಕೆ ವಿನಂತಿ ಮಾಡಿದ್ದಾರೆ.

ಯಡಿಯೂರಪ್ಪ, ಸಿದ್ದರಾಮಯ್ಯ ಮನೆಗೆ ನಾನು ಜಾಸ್ತಿ ಹೋಗ್ತಾ ಇದ್ದೀನಿ - ಹೊರಟ್ಟಿ

ನಾನು ಮೊದಲಿನಿಂದಲೂ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಮನೆಗೆ ಹೆಚ್ಚು ಹೋಗುತ್ತಿಲ್ಲ. ಬದಲಾಗಿ ಬಿಎಸ್‌ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರ ಮನೆಗೆ ಹೆಚ್ಚಾಗಿ ಹೋಗುತ್ತೇನೆ. ಅಭಿವೃದ್ಧಿ ಕೆಲಸದ ಜತೆಗೆ ರಾಜಕೀಯವನ್ನು ಮಾತನಾಡುತ್ತೇವೆ. ಆದರೆ ನಾನು ಬೇರೆ ಯೋಚನೆ ಮಾಡಿಲ್ಲ, ಪಕ್ಷದಲ್ಲೇ ಇರುತ್ತೇನೆ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಶಾಸಕರು ಯಾರು ಎಲ್ಲಿಗೆ ಬೇಕಾದರೂ ಹೋಗಲಿ, ನಾನು ಏನೂ ಮಾಡೋದಕ್ಕೆ ಆಗುತ್ತದೆ ಎಂಬ ಹೆಚ್ ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಾಪ ಕುಮಾರಸ್ವಾಮಿ ಅವರು ಬೇಜಾರಾಗಿದ್ದಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಹೀಗೆಲ್ಲಾ ಮಾತನಾಡಬಾರದು. ಜೆಡಿಎಸ್ ಪಕ್ಷಕ್ಕೆ 2 ಸೀಟು ಬಂದ ಪರಿಸ್ಥಿತಿಯೂ ಇದೆ. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಎಲ್ಲರನ್ನು ಕರೆದು ಮಾತನಾಡಬೇಕು ಹಾಗೂ ಧೈರ್ಯ ತುಂಬಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ