ಆ್ಯಪ್ನಗರ

ಪರಿಷತ್‌ ಕೋಲಾಹಲ: ಸದನ ಸಮಿತಿಗೆ ಬಿಜೆಪಿ ಸದಸ್ಯರ ರಾಜೀನಾಮೆಗೆ ಕಾಂಗ್ರೆಸ್‌ ಆಕ್ಷೇಪ

ವಿಧಾನ ಪರಿಷತ್‌ನಲ್ಲಿ ನಡೆದ ಘಟನೆ ಬಗ್ಗೆ ಜನರಿಗೆ ಸತ್ಯ ತಿಳಿಸಬೇಕು ಎಂಬ ಉದ್ದೇಶದಿಂದ ಸದನ ಸಮಿತಿ ರಚಿಸಲಾಗಿದೆ. ಆದರೆ ಬಿಜೆಪಿ ಸದಸ್ಯರು ಸಮಿತಿಯಿಂದ ಹೊರ ಹೋಗಿರುವುದು ಸತ್ಯ ತಿಳಿಯುವ ಮುನ್ನವೇ ಬಿಜೆಪಿ ಶಸ್ತ್ರತ್ಯಾಗ ಮಾಡಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

Vijaya Karnataka 11 Jan 2021, 9:39 pm
ಬೆಂಗಳೂರು: ರಾಜ್ಯ ವಿಧಾನ ಪರಿಷತ್ತಿನಲ್ಲಿ ಕಳೆದ ತಿಂಗಳು ನಡೆದ ಗಲಾಟೆ ಸಂಬಂಧ ತನಿಖೆಗೆ ನೇಮಿಸಲಾಗಿದ್ದ ಸದನ ಸಮಿತಿಗೆ ಬಿಜೆಪಿಯ ಎಚ್‌ ವಿಶ್ವನಾಥ್‌ ಹಾಗೂ ಎಸ್‌ವಿ ಸಂಕನೂರು ಅವರು ರಾಜೀನಾಮೆ ಸಲ್ಲಿಸಿರುವುದಕ್ಕೆ ಪ್ರತಿಪಕ್ಷ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
Vijaya Karnataka Web Karnataka Legislative Council


ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಲ್ಮನೆ ಸದಸ್ಯ ಪಿ.ಆರ್‌. ರಮೇಶ್‌, "ಬಿಜೆಪಿ ಸದಸ್ಯರ ವಾದ/ಅಭಿಪ್ರಾಯ ಏನೇ ಇದ್ದರೂ ಅದನ್ನು ಸಮಿತಿ ಮುಂದೆ ಹೇಳಲು ಅವಕಾಶವಿತ್ತು. ಆದರೆ ಸಮಿತಿ ಕಾರ್ಯನಿರ್ವಹಿಸುವ ಮುನ್ನವೇ ಸದಸ್ಯರಾದವರು ರಾಜೀನಾಮೆ ಸಲ್ಲಿಸುವುದು ಎಷ್ಟರ ಮಟ್ಟಿಗೆ ಸರಿ. ಇದು ಪ್ರಜಾಪ್ರಭುತ್ವಕ್ಕೆ ಗೌರವ ತರುವ ಲಕ್ಷಣವಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಸದನ ಸಮಿತಿಗೆ ನೇಮಕರಾಗಿದ್ದ ಇಬ್ಬರು ಬಿಜೆಪಿ ಸದಸ್ಯರು ರಾಜೀನಾಮೆ ನೀಡಿದ್ದು ಏಕೆ? ಘಟನೆ ಬಗ್ಗೆ ಜನರಿಗೆ ಸತ್ಯ ತಿಳಿಸಬೇಕು ಎಂಬ ಉದ್ದೇಶದಿಂದ ಸದನ ಸಮಿತಿ ರಚಿಸಲಾಗಿದೆ. ಆದರೆ, ಬಿಜೆಪಿ ಸದಸ್ಯರು ಸಮಿತಿಯಿಂದ ಹೊರ ಹೋಗಿರುವುದು ಸತ್ಯ ತಿಳಿಯುವ ಮುನ್ನವೇ ಬಿಜೆಪಿ ಶಸ್ತ್ರತ್ಯಾಗ ಮಾಡಿದೆ," ಎಂದು ಟೀಕಿಸಿದರು.

ಪರಿಷತ್‌ ಕೋಲಾಹಲ ತನಿಖೆಗೆ ವಿಘ್ನ! ಸಮಿತಿಗೆ ರಾಜೀನಾಮೆ ನೀಡಿದ ಹೆಚ್.ವಿಶ್ವನಾಥ್, ಎಸ್.ವಿ ಸಂಕನೂರು

"ಸದನ ಸಮಿತಿ ಬಿಟ್ಟು ಬೇರೆ ಸಮಿತಿಗಳನ್ನು ರಚಿಸಲು ಅವಕಾಶವಿಲ್ಲ, ಇದನ್ನು ನ್ಯಾಯಾಲಯ ಸಹ ಸ್ಪಷ್ಟವಾಗಿ ಹೇಳಿದೆ. ಸದನದಲ್ಲಿ ನಡೆದ ಅಹಿತಕರ ಘಟನೆ ಸರಿಯೋ, ತಪ್ಪೋ ಎಂಬುದು ಸದನದಲ್ಲೇ ತೀರ್ಮಾನ ಆಗಬೇಕು. ಬಿಜೆಪಿ ಸದಸ್ಯರು ಸದನ ಸಮಿತಿಗೆ ಗೌರವ ಕೊಡಬೇಕು,’’ ಎಂದು ಅಭಿಪ್ರಾಯಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ