ಆ್ಯಪ್ನಗರ

52,841 ರೂ. ಮದ್ಯದ ಬಿಲ್‌ ವೈರಲ್‌, ಬಾರ್‌ ಮಾಲೀಕನಿಗೆ ಸಂಕಷ್ಟ

ಇದೀಗ ಇಂಥಹದ್ದೇ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೆಂಗಳೂರಿನ ಡಾಲರ್ಸ್‌ ಕಾಲನಿಯ ಮದ್ಯ ಮಳಿಗೆಯ 95,347 ರೂಪಾಯಿಯ ಬಿಲ್‌ ಹಾಗೂ ಮಂಗಳೂರಿನ ಬಲ್ಮಠದ ರತ್ನಾಸ್‌ ವೈನ್‌ ಗೇಟ್‌ನ 59,952 ರೂ ಮೌಲ್ಯದ ಬಿಲ್‌ ಕೂಡ ವೈರಲ್‌ ಆಗಿದ್ದು ಮಾಲೀಕರಿಗೆ ಸಂಕಷ್ಟ ತಂದೊಡ್ಡಿದೆ.

TIMESOFINDIA.COM 5 May 2020, 2:01 pm

ಬೆಂಗಳೂರು: ಸೋಮವಾರ ದೇಶದಾದ್ಯಂತ ಸುದ್ದಿ ಮಾಡಿದವರು ಕುಡುಕರು. ಬಾರ್‌ ಓಪನ್‌ ಆಗುತ್ತಿದ್ದಂತೆ ಮದ್ಯ ಖರೀದಿಗೆ ಎಣ್ಣೆ ಪಾರ್ಟಿಗಳು ಮುಗಿಬಿದ್ದಿದ್ದರು. ಈ ವೇಳೆ ಕೆಲವರು ಖರೀದಿಸಿದ ಬಿಲ್‌ಗಳು ವಾಟ್ಸಪ್‌, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಸನ್ನದು ಮಾಲೀಕರಿಗೆ ಸಂಕಷ್ಟ ತಂದೊಡ್ಡಿದೆ.
Vijaya Karnataka Web Liquor


ಪ್ರಮುಖವಾಗಿ 52,841 ರೂಪಾಯಿಗಳ ಬಿಲ್‌ ಒಂದು ಸೋಮವಾರ ಎಲ್ಲೆಡೆ ವೈರಲ್‌ ಆಗಿತ್ತು. ಆದರೆ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಮದ್ಯ ಮಾರಾಟ ಮಾಡಿದ್ದಕ್ಕಾಗಿ ಈಗ ಬಾರ್‌ ಮಾಲೀಕನ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಅಬಕಾರಿ ಇಲಾಖೆ ಒಂದು ದಿನದಲ್ಲಿ ಒಬ್ಬರಿಗೆ 2.6 ಲೀಟರ್‌ ಭಾರತದಲ್ಲಿ ತಯಾರಾಗುವ ವಿದೇಶಿ ಮದ್ಯ ಮತ್ತು 18 ಲೀಟರ್‌ ಬಿಯರ್‌ ಮಾತ್ರ ಮಾರಾಟ ಮಾಡಬಹುದು ಎಂಬ ನಿರ್ಬಂಧ ವಿಧಿಸಿದೆ. ಆದರೆ ಈ ಬಿಲ್‌ ಪ್ರಕಾರ ಬೆಂಗಳೂರಿನ ತಾವರೆಕರೆಯ ವೆನಿಲ್ಲಾ ಸ್ಪಿರಿಟ್‌ ಜೋನ್‌ 13.5 ಲೀಟರ್‌ ಮದ್ಯ ಮತ್ತು 35 ಲೀಟರ್‌ ಬೀಯರ್‌ನ್ನು ಗ್ರಾಹಕರೊಬ್ಬರಿಗೆ ಮಾರಾಟ ಮಾಡಿತ್ತು.

ಎಲ್ಲೆಡೆ ಹೌಸ್‌ಫುಲ್‌, ಮೊದಲ ದಿನವೇ 45 ಕೋಟಿ ರೂ. ಬಾಚಿದ ‘ಮದ್ಯ ಮಾರಾಟ’!

ಬಿಲ್‌ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಮಾರಾಟ ಮಾಡಿದ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಗ್ರಾಹಕ ಯಾರು ಎಂಬುದು ತಿಳಿದು ಬಂದಿಲ್ಲ. ಗ್ರಾಹಕನ ವಿರುದ್ಧವೂ ಪ್ರಕರಣ ದಾಖಲಿಸಲು ಅವಕಾಶ ಇದೆ. ಕಾರಣ ನಿಯಮಗಳ ಪ್ರಕಾರ ಓರ್ವ ವ್ಯಕ್ತಿ 2.6 ಲೀಟರ್‌ಗಿಂತ ಹೆಚ್ಚಿನ ಮದ್ಯವನ್ನು ಒಯ್ಯುವಂತಿಲ್ಲ.

8 ಜನರ ಗ್ರಾಹಕರಿಂದ ಖರೀದಿ!

ಆದರೆ ಅಧಿಕಾರಿಗಳು ಪ್ರಶ್ನಿಸಿದಾಗ ಅಂಗಡಿ ಮಾಲೀಕ ಮಾತ್ರ ಬೇರೆಯದೇ ವಿವರಣೆ ನೀಡಿದ್ದಾನೆ. 8 ಗ್ರಾಹಕರು ಒಟ್ಟಾಗಿ ಈ ಮದ್ಯ ಖರೀದಿಸಿದ್ದರು. ಆದರೆ ಬಿಲ್‌ ನೀಡಿದ್ದು ಮಾತ್ರ ಒಬ್ಬನೇ ಎನ್ನುತ್ತಿದ್ದಾನೆ.

“ಆತನ ವಾದದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ನಂತರ ನಾವು ಅವರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲಿದ್ದೇವೆ,” ಎಂಬುದಾಗಿ ಬೆಂಗಳೂರು ದಕ್ಷಿಣ ಅಬಕಾರಿ ಅಧಿಕಾರಿ ಎ. ಗಿರಿ ‘ಟೈಮ್ಸ್‌ ಆಫ್‌ ಇಂಡಿಯಾ’ಗೆ ತಿಳಿಸಿದ್ದಾರೆ.


ಇದೀಗ ಇಂಥಹದ್ದೇ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೆಂಗಳೂರಿನ ಡಾಲರ್ಸ್‌ ಕಾಲನಿಯ ಮದ್ಯ ಮಳಿಗೆಯ 95,347 ರೂಪಾಯಿಯ ಬಿಲ್‌ ಹಾಗೂ ಮಂಗಳೂರಿನ ಬಲ್ಮಠದ ರತ್ನಾಸ್‌ ವೈನ್‌ ಗೇಟ್‌ನ 59,952 ರೂ ಮೌಲ್ಯದ ಬಿಲ್‌ ಕೂಡ ವೈರಲ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ