ಆ್ಯಪ್ನಗರ

ಖಾತೆ ಕಸರತ್ತು: ಅಧಿಕೃತ ಘೋಷಣೆಗೂ ಮೊದಲೇ ಅಸಮಾಧಾನ ಸ್ಫೋಟ, ಬಿಎಸ್‌ವೈ ಜೊತೆಗೆ ಸಚಿವರ ಮಾತುಕತೆ

ನೂತನ ಸಚಿವರಿಗೆ ಖಾತೆ ಹಂಚಿಕೆ ಕಸರತ್ತು ಅಂತಿಮ ಹಂತದಲ್ಲಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಈ ನಿಟ್ಟಿಲ್ಲಿ ಕೆಲವೊಂದು ಬದಲಾವಣೆಗಳು ನಡೆದಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಸಚಿವರು ಸಿಎಂ ಬಿಎಸ್‌ವೈ ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.

Vijaya Karnataka Web 21 Jan 2021, 10:43 am
ಬೆಂಗಳೂರು: ಖಾತೆ ಹಂಚಿಕೆ ಕಸರತ್ತು ಅಂತಿಮ ಹಂತದಲ್ಲಿದ್ದು ಅಧಿಕೃತ ಘೋಷಣೆ ಕೆಲವೇ ಕ್ಷಣಗಳಲ್ಲಿ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಬಲ ಖಾತೆ ನಿರೀಕ್ಷೆಯಲ್ಲಿರುವ ಸಚಿವರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
Vijaya Karnataka Web BS Yediyurappa 4


ಈಗಾಗಲೇ ಖಾತೆ ಹಂಚಿಕೆ ಮಾಡಿ ಅವರ ಪಟ್ಟಿಯನ್ನು ರಾಜ್ಯಪಾಲರಿಗೆ ಕಲುಹಿಸಲಾಗಿದೆ. ರಾಜ್ಯಪಾಲರಿಂದ ಅಂಕಿತ ಬಿದ್ದ ಬೆನ್ನಲ್ಲೇ ಸಿಎಂ ಯಡಿಯೂರಪ್ಪನವರು ಖಾತೆಯ ಪಟ್ಟಿಯನ್ನು ಘೋಷಣೆ ಮಾಡಲಿದ್ದಾರೆ.

ಏಳು ಸಚಿವರಿಗೆ ಈಗಾಗಲೇ ಖಾತೆ ಹಂಚಿಕೆ ಮಾಡಲಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಖಾತೆ ಅದಲು ಬದಲು ಮಾಡಿರುವ ಹಿನ್ನೆಲೆಯಲ್ಲಿ ಸಚಿವರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಸಚಿವ ಕೆ. ಸುಧಾಕರ್‌, ಎಂಟಿಬಿ ನಾಗರಾಜ್, ಕೆ. ಗೋಪಾಲಯ್ಯ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಮೂಲಗಳ ಪ್ರಕಾರ ಗೋಪಾಲಯ್ಯ ಅವರಿಗೆ ಬೇರೆ ಖಾತೆಯನ್ನು ನೀಡಲಾಗಿದ್ದು, ಕೆ ಸುಧಾಕರ್‌ ಅವರ ಬಳಿಯಿದ್ದ ಹೆಚ್ಚುವರಿ ಖಾತೆಯನ್ನು ಬೇರೆಯವರಿಗೆ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಸಂಭಾವ್ಯ ಖಾತೆಗಳ ವಿವರ ಹೀಗಿದೆ.

ಮುರುಗೇಶ್ ನಿರಾಣಿ- ಗಣಿ ಹಾಗೂ ಭೂವಿಜ್ಞಾನ

ಸಿಪಿ ಯೋಗೇಶ್ವರ್‌ - ಸಣ್ಣ ನೀರಾವರಿ

ಉಮೇಶ್ ಕತ್ತಿ- ಆಹಾರ ಮತ್ತು ನಾಗರೀಕ ಪೂರೈಕೆ

ಎಸ್. ಅಂಗಾರ - ಬಂದರು ಹಾಗೂ ಮೀನುಗಾರಿಕೆ

ಅರವಿಂದ್ ಲಿಂಬಾವಳಿ - ಅರಣ್ಯ

ಆರ್‌. ಶಂಕರ್‌- ಪೌರಾಡಳಿತ

ಎಂಟಿಬಿ ನಾಗರಾಜ್ - ಅಬಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ