ಆ್ಯಪ್ನಗರ

ಎಂಟಿಬಿ ಮನವೊಲಿಸುವ ಸಚಿವ ಡಿಕೆಶಿ ಯತ್ನ ವಿಫಲ; ಡಿಸಿಎಂ ಪರಮೇಶ್ವರ್‌ ಮರು ಯತ್ನ

ಪತನದ ಭೀತಿ ಎದುರಿಸುತ್ತಿರುವ ದೋಸ್ತಿ ಸರಕಾರ, ಶತಾಯಗತಾಯ ಅಧಿಕಾರ ಉಳಿಸಿಕೊಳ್ಳಲು ಇನ್ನಿಲ್ಲದ ಹರಸಾಹಸ ನಡೆಸುತ್ತಿದೆ. ಅತೃಪ್ತ ಶಾಸಕರನ್ನು ಸಾಮ, ದಾನ, ಭೇದ, ದಂಡಗಳ ಮೂಲಕ ಮಣಿಸಲು ಪ್ರಯತ್ನಿಸುವುದರ ಜತೆಗೆ ರಿವರ್ಸ್‌ ಆಪರೇಶನ್‌ ವದಂತಿಗಳನ್ನೂ ಹರಿಯಬಿಟ್ಟಿದೆ. ಏನೇ ಆದರೂ ಅತೃಪ್ತ ಶಾಸಕರು ಹೆಜ್ಜೆ ಹಿಂದಿಡುವುದಿಲ್ಲ ಎಂದು ಘೋಷಿಸಿದ್ದಾರೆ.

Vijaya Karnataka Web 13 Jul 2019, 10:22 am
ಬೆಂಗಳೂರು: ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಮನವೊಲಿಕೆ ಮಾಡುವ ಸಚಿವ ಡಿ.ಕೆ ಶಿವಕುಮಾರ್ ಯತ್ನ ವಿಫಲವಾಗಿದೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.
Vijaya Karnataka Web MTB Nagaraj


ಆದರೂ ಪ್ರಯತ್ನ ಕೈಬಿಡದ ಕಾಂಗ್ರೆಸ್ ಮುಖಂಡರು ಮತ್ತೊಂದು ಸುತ್ತಿನ ಸಂಧಾನಕ್ಕೆ ಮುಂದಾಗಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ರಿಜ್ವಾನ್ ಅರ್ಷದ್‌ ಮತ್ತು ಕೃಷ್ಣ ಭೈರೇಗೌಡರು ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ನಿವಾಸಕ್ಕೆ ತೆರಳಿದ್ದಾರೆ.

ಡಿಕೆ ಶಿವಕುಮಾರ್ ಜತೆಗಿನ ಭೇಟಿ ವೇಳೆ ನಾಗರಾಜ್ ಅವರು ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್‌.ಡಿ ರೇವಣ್ಣ ವಿರುದ್ಧ ತೀವ್ರ ಕಿಡಿಕಾರಿದರು. ತಾವು ಹೆಸರಿಗಷ್ಟೇ ಸಚಿವರಾಗಿದ್ದು ತಮ್ಮ ಖಾತೆಯಲ್ಲಿ ತಮಗೇ ತಿಳಿಯದಂತೆ ವ್ಯವಹಾರಗಳು ನಡೆಯುತ್ತಿವೆ ಎಂದು ನಾಗರಾಜ್ ಕಿಡಿ ಕಾರಿದ್ದಾರೆ.

ಅತೃಪ್ತ ಶಾಸಕರ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ಮುಂದೂಡಿದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರದ ನಾಯಕರು ಮತ್ತು ಅತೃಪ್ತರಿಗೆ ನಾಲ್ಕು ದಿನಗಳ ಕಾಲಾವಕಾಶ ದೊರೆತಿದೆ. ಈ ಅವಧಿಯನ್ನು ಸರಕಾರವನ್ನು ಸುರಕ್ಷಿತಗೊಳಿಸುವ ಯತ್ನಕ್ಕೆ ಮುಖಂಡರು ಕೈಹಾಕಿದ್ದಾರೆ. ಅದರ ಭಾಗವಾಗಿಯೇ ಸಚಿವರಾದ ಎಂಟಿಬಿ ನಾಗರಾಜ್ ಮತ್ತು ಡಾ. ಸುಧಾಕರ್ ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ.

ಬುಧವಾರ ಮಂಗಳ?, ಜು.17ರಂದು ಸಿಎಂ ವಿಶ್ವಾಸಮತ ಯಾಚನೆ


ನಾಲ್ಕು ದಿನಗಳ ಕಾಲಾವಕಾಶ ದೊರೆತಿರುವ ಧೈರ್ಯದಿಂದಲೇ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ವಿಶ್ವಾಸಮತ ಕೋರಲು ಅವಕಾಶ ನೀಡಿ ಎಂದು ಶುಕ್ರವಾರ ವಿಧಾನಸಭೆ ಅಧ್ಯಕ್ಷರಿಗೆ ಮನವಿ ಮಾಡಿದ್ದರು.

ವಿಶ್ವಾಸ ಮತಯಾಚನೆಯ ದಾಳ ಉರುಳಿಸಿದ ಸಿಎಂ ಕುಮಾರಸ್ವಾಮಿ

ಆಪರೇಷನ್‌, ರಿವರ್ಸ್ ಆಪರೇಷನ್‌ ಸೇರಿದಂತೆ ನಾನಾ ಬಗೆಯ ರಾಜಕೀಯ ಕಸರತ್ತುಗಳು ತೆರೆಮರೆಯಲ್ಲಿ ನಡೆಯುವಂತೆ ತೋರುತ್ತಿದೆ. ಇವಕ್ಕೆಲ್ಲ ಸಾಕ್ಷಿ ಎಂಬಂತೆ ಕಾಂಗ್ರೆಸ್, ಜೆಡಿಎಸ್‌, ಬಿಜೆಪಿ ಶಾಸಕರೆಲ್ಲ ರೆಸಾರ್ಟ್‌ಗೆ ತೆರಳಿ ಗೂಢಾಲೋಚನೆ ನಡೆಸುತ್ತಿದ್ದಾರೆ.

ದೋಸ್ತಿ ಸರಕಾರದ ಅಳಿವು-ಉಳಿವು: ರಾಜಕೀಯ ನಾಟಕದಲ್ಲಿ ಎಲ್ಲರ ಕಣ್ಣೂ ಇವರ ಮೇಲೆ


ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಎಂಟಿಬಿ:

ಸಿದ್ದರಾಮಯ್ಯನವರೇ ನಮ್ಮ ನಾಯಕರಾಗಿದ್ದು, ಅವರಿಗೆ ಕಿಮ್ಮತ್ತು ಕೊಡದ ಸಮ್ಮಿಶ್ರ ಸರಕಾರದಲ್ಲಿ ನಾವು ಇರುವುದಿಲ್ಲ ಎಂದು ಎಂಟಿಬಿ ನಾಗರಾಜ್ ಮಾಜಿ ಮುಖ್ಯಮಂತ್ರಿ ಪರ ಬ್ಯಾಟ್ ಬೀಸಿದ್ದಾರೆ.

ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿರುವ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿಮ್ಮತ್ತು ಕೊಡುತ್ತಿಲ್ಲ. ಹೀಗಾಗಿ ಬೇಸರದಿಂದ ರಾಜೀನಾಮೆ ಸಲ್ಲಿಸಿದ್ದೇನೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ