ಆ್ಯಪ್ನಗರ

ಸೌಧಕ್ಕೆ ಪೊಲೀಸ್‌ ಸರ್ಪಗಾವಲು

ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧವನ್ನು ಗುರುವಾರ ಅಕ್ಷರಶಃ ಖಾಕಿ ಪಡೆಯ ಸರ್ಪಗಾವಲು ಸುತ್ತುವರಿದಿತ್ತು ಚಿಕ್ಕಬಳ್ಳಾಪುರ ಶಾಸಕ ಡಾ...

Vijaya Karnataka 12 Jul 2019, 5:00 am
ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧವನ್ನು ಗುರುವಾರ ಅಕ್ಷರಶಃ ಖಾಕಿ ಪಡೆಯ ಸರ್ಪಗಾವಲು ಸುತ್ತುವರಿದಿತ್ತು.
Vijaya Karnataka Web 0607-2-2-200 (3)


ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್‌ ರಾಜೀನಾಮೆ ಸಂದರ್ಭದಲ್ಲಿ ನಡೆದ ಹೈಡ್ರಾಮ ಹಿನ್ನೆಲೆಯಲ್ಲಿ ಶಾಸಕರಿಗೆ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್‌ ಖಡಕ್‌ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಹೆಜ್ಜೆಹೆಜ್ಜೆಗೂ ಪೊಲೀಸರು ಸುತ್ತುವರಿದಿದ್ದರು.

ವಿಧಾನಸೌಧದ ನಾಲ್ಕೂ ಗೇಟುಗಳಲ್ಲಿ ನೂರಾರು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಪ್ರವೇಶ ದ್ವಾರ ಹಾಗೂ ವಿಧಾನಸೌಧದ ಪ್ರತಿ ಮಹಡಿಯಲ್ಲೂ ಐಪಿಎಸ್‌ ಅಧಿಕಾರಿಯೊಬ್ಬರ ಕಣ್ಗಾವಲು ಇತ್ತು. ಸಿ.ಸಿ.ಟಿವಿ ಕ್ಯಾಮೆರಾಗಳ ಮೇಲೂ ಖಾಕಿ ಕಣ್ಣಿಟ್ಟಿತ್ತು. ಪೊಲೀಸ್‌ ಬಂದೋಬಸ್ತ್‌ನಿಂದಾಗಿ ಸಿಬ್ಬಂದಿ ವರ್ಗವೂ ವಿಧಾನಸೌಧ ಪ್ರವೇಶಿಸಲು ಪರದಾಡಿದರು. ಮಾಧ್ಯಮ ಪ್ರತಿನಿಧಿಗಳಿಗೆ ಮೂರು ದ್ವಾರಗಳಲ್ಲಿ ಪ್ರವೇಶ ಕಲ್ಪಿಸದ ಕಾರಣ ಒಂದು ಕಡೆಯಿಂದ ಮತ್ತೊಂದು ದ್ವಾರಕ್ಕೆ ಸುತ್ತಾಡಬೇಕಾಯಿತು. ಡಿಜಿಪಿ ಮತ್ತು ನಗರ ಪೊಲೀಸ್‌ ಆಯುಕ್ತರೇ ಭದ್ರತೆಯ ಉಸ್ತುವಾರಿ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ