ಆ್ಯಪ್ನಗರ

ಬಿಎಸ್‌ವೈ ವಿಶ್ವಾಸಮತದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ

ಕಳೆದ 14 ತಿಂಗಳುಗಳ ಕಾಲ ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿ ಕರ್ತವ್ಯ ನಿರ್ವಹಿಸಿದ ಕೆ.ಆರ್ ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಆತ್ಮಸಾಕ್ಷಿಗನುಗುಣವಾಗಿ, ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸಿರುವುದಾಗಿ ಹೇಳಿದ ಅವರು, ಬಿ.ಎಸ್ ಯಡಿಯೂರಪ್ಪ ಸರಕಾರ ವಿಶ್ವಾಸ ಮತ ಯಾಚನೆ ಕಲಾಪ ನಡೆಸಿಕೊಟ್ಟ ಬಳಿಕ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

Vijaya Karnataka Web 29 Jul 2019, 12:24 pm
ಬೆಂಗಳೂರು: ಬಿ.ಎಸ್‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸದನದಲ್ಲಿ ವಿಶ್ವಾಸಮತ ಗೆದ್ದುಕೊಂಡಿದ್ದು, ಧನ ವಿನಿಯೋಗ ವಿಧೇಯಕವನ್ನೂ ಅಂಗೀಕಾರ ದೊರಕಿಸಿಕೊಟ್ಟ ಬಳಿಕ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದರು.
Vijaya Karnataka Web KR Ramesh Kumar


ಇದಕ್ಕೆ ಮುನ್ನ ಕೆಲವು ನಿಮಿಷಗಳ ಕಾಲ ವಿದಾಯ ಭಾಷಣ ಮಾಡಿದ ಸ್ಪೀಕರ್‌, 'ಸಂವಿಧಾನಕ್ಕೆ ನಿಷ್ಠನಾಗಿ ಆತ್ಮಸಾಕ್ಷಿಗನುಗುಣವಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ಕೆಲವು ಘಟನೆಗಳು, ಸಂದರ್ಭಗಳಿಗೆ ಅನುಗುಣವಾಗಿ ವಿವೇಚನೆಯಿಂದ ಹೆಜ್ಜೆಯಿಡಬೇಕಾಗುತ್ತದೆ. ನಾವು ಅಲಂಕರಿಸಿದ ಸ್ಥಾನ ದೊಡ್ಡದು. ನಾವು ಸಣ್ಣವರು. ಅಂತಹ ಅವಕಾಶ ಒದಗಿದಾಗ ಆ ಸ್ಥಾನಕ್ಕೆ ಅಪಚಾರ ಆಗದಂತೆ ಕೆಲಸ ಮಾಡಬೇಕು. ನಾನು ಈ ಸ್ಥಾನಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಿದ್ದೇನೆ' ಎಂದು ರಮೇಶ್ ಕುಮಾರ್ ತಿಳಿಸಿದರು.

ಸಾಕಷ್ಟು ಸವಾಲುಗಳು, ಅಸಮಾಧಾನಗಳು ಇದ್ದವು. ಎಲ್ಲವನ್ನೂ ನಿಭಾಯಿಸಿ ಕರ್ತವ್ಯ ನಿರ್ವಹಿಸಿದ್ದೇನೆ. ಕೆಲವು ಸಲ ಸಿಟ್ಟಿನಲ್ಲಿ ಮಾತಾಡಿರಬಹುದು. ಹಾಗಿದ್ದರೂ ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು. ನನ್ನ ಆಪ್ತ ಸಿಬ್ಬಂದಿಗಳಿಗೆ ಧನ್ಯವಾದಗಳು ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ