ಆ್ಯಪ್ನಗರ

ಇಂದಿನ ಚುಟುಕು ಸುದ್ದಿಗಳು: ಬೆಂಗಳೂರಿನಲ್ಲಿ ರೌಡಿ ಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದಿನ ಪ್ರಮುಖ ಆಗುಹೋಗುಗಳ ಸಂಕ್ಷಿಪ್ತ ವರದಿ ಇಲ್ಲಿದೆ. ತಾಜಾ ಸುದ್ದಿಗಳಿಗಾಗಿ ಕಾದಿರಿ.

Vijaya Karnataka Web 15 Mar 2020, 2:25 pm
ಕಾವೇರಿ ನೀರು ಸುರಕ್ಷಿತ: ಕಾಲರಾದ ಭೀತಿ ಬೇಡ; ಬೆಂಗಳೂರು ಜಲ ಮಂಡಳಿ ಅಭಯ
Vijaya Karnataka Web vijayakarnataka

ಬೆಂಗಳೂರಲ್ಲಿ ಕಾಲರಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇದಕ್ಕೆ ಕಾವೇರಿ ನೀರು ಕಾರಣ ಎಂದೂ ಹೇಳಲಾಗುತ್ತಿತ್ತು. ಈ ಸಂಬಂಧ ಬೆಂಗಳೂರು ಜಲಮಂಡಳಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಿ ಸ್ಪಷ್ಟನೆ ನೀಡಿದೆ.
ಕಾವೇರಿ ನೀರು ಸುರಕ್ಷಿತ: ಕಾಲರಾದ ಭೀತಿ ಬೇಡ; ಬೆಂಗಳೂರು ಜಲ ಮಂಡಳಿ ಅಭಯ

ಕೊರೊನಾ ವೈರಸ್ ಭೀತಿ ಹಿನ್ನಲೆ, ಶಾಸಕ ಸಿ.ಎಸ್.ಪುಟ್ಟರಾಜು ಸುದ್ದಿಗೋಷ್ಟಿ
ಮಂಡ್ಯ: ಕೊರೊನಾ ವೈರಸ್ ಭೀತಿ ಹಿನ್ನಲೆ ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಸುದ್ದಿಗೋಷ್ಟಿ ನಡೆಸಿದರು. ಕೊರೊನಾ ಬಂದಿದೆ ಎಂಬ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಇದು ಸುಳ್ಳು, ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದರು.
ಮಂಡ್ಯ: ಕೊರೊನಾ ವೈರಸ್ ಭೀತಿ ಹಿನ್ನಲೆ, ಶಾಸಕ ಸಿ.ಎಸ್.ಪುಟ್ಟರಾಜು ಸುದ್ದಿಗೋಷ್ಟಿ

ಬೆಂಗಳೂರು: ರೌಡಿ ಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು
ಇಂದು ಬೆಳಗ್ಗೆ ನಗರದಲ್ಲಿ ಗುಂಡಿನ ಮೊರೆತ ಕೇಳಿಬಂದಿದೆ. ರೌಡಿ ಶೀಟರ್ ಕಿರಣ್ ಅಲಿಯಾಸ್ ತಮಾಣೆ ಕಾಲಿಗೆ, ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ಗುಂಡು ಹಾರಿಸಿದ್ದಾರೆ.
ಬೆಂಗಳೂರು: ರೌಡಿ ಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು

ಕೊರೊನಾ ಆತಂಕ: ಬಿಎಸ್‌ವೈ ಕಚೇರಿ, ನಿವಾಸದಲ್ಲಿ ಕಟ್ಟೆಚ್ಚರ

ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ನಿವಾಸ ಹಾಗೂ ಕಚೇರಿಯಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಕೊರೊನಾ ಆತಂಕದ ನಡುವೆಯೂ ಸಿಎಂ ಬಿಎಸ್‌ವೈ ಬೆಳಗಾವಿ ಹಾಗೂ ಹುಬ್ಬಳ್ಳಿ ಪ್ರವಾಸದಲ್ಲಿದ್ದಾರೆ.
ಕೊರೊನಾ ಆತಂಕ: ಬಿಎಸ್‌ವೈ ಕಚೇರಿ, ನಿವಾಸದಲ್ಲಿ ಕಟ್ಟೆಚ್ಚರ

ಕೊರೊನಾ ಭೀತಿ: ನಿಷೇಧದ ನಡುವೆ ತೆರೆದಿದ್ದ ಪಬ್‌ಗಳು
ಬೆಂಗಳೂರು:
ಕೊರೊನಾ ವೈರಸ್‌ ನಿಯಂತ್ರಿಸಲು ಪಬ್‌, ನೈಟ್‌ ಕ್ಲಬ್‌ ಸೇರಿದಂತೆ ಜನ ಗುಂಪು ಸೇರುವ ಎಲ್ಲ ಸ್ಥಳಗಳನ್ನು ಬಂದ್‌ ಮಾಡಲು ನಿರ್ದೇಶನವಿದ್ದರೂ, ನಗರದ ಬೇರೆ ಭಾಗಗಳಲ್ಲೂ ಪಬ್‌ ಮತ್ತು ಬಾರ್‌ಗಳು ಕಾರ್ಯ ನಿರ್ವಹಿಸಿವೆ. ಪ್ರಮುಖ ವಾಣಿಜ್ಯ ಚಟುವಟಿಕೆ ರಸ್ತೆಯಲ್ಲಿ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಜನಜಂಗುಳಿ, ವ್ಯಾಪಾರ ವಹಿವಾಟು ಮುಂದುವರೆದಿದೆ.
ಕೊರೊನಾ ಭೀತಿ: ನಿಷೇಧದ ನಡುವೆ ತೆರೆದಿದ್ದ ಪಬ್‌ಗಳು

ಕೊರೊನಾ ಭೀತಿ ಹಿನ್ನಲೆ, ಕೆಲವಡಿ ಲಕ್ಷ್ಮೀ ರಂಗನಾಥ ಜಾತ್ರೆ ನಿಷೇಧ
ಬಾಗಲಕೋಟೆ: ಕೊರೊನಾ ಭೀತಿ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಕೆಲವಡಿ ಲಕ್ಷ್ಮೀ ರಂಗನಾಥ ಜಾತ್ರೆಯನ್ನು ನಿಷೇಧಿಸಲಾಗಿದೆ. ಬಾದಾಮಿ ತಾಲೂಕಿನ ಕೆಲವಡಿ ಗ್ರಾಮಕ್ಕೆ ತಹಶೀಲ್ದಾರ್, ತಾ.ಪಂ ಇಓ, ಅಧಿಕಾರಿಗಳು ಭೇಟಿ ನೀಡಿ, ತಹಶೀಲ್ದಾರ್ ಎಸ್.ಎಸ್. ಇಂಗಳೆ ನೇತೃತ್ವದಲ್ಲಿ ಗ್ರಾಮದಲ್ಲಿ ಸಭೆ ನಡೆಸಿ ಜಾತ್ರಾ ಮಹೋತ್ಸವ ನಿಷೇಧಿಸುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಲಾಯಿತು. ಸೂಚನೆಯಂತೆ ಜಾತ್ರಾ ಮಹೋತ್ಸವವನ್ನು ಗ್ರಾಮಸ್ಥರು ರದ್ದು ಪಡಿಸಿದ್ದಾರೆ. ಪ್ರತಿವಷ೯ ದೇವರಿಗೆ ಮದ್ಯ ನೈವೇದ್ಯ ಮೂಲಕ ಗಮನ ಸೆಳೆಯುತ್ತಿದ್ದ ಕೆಲವಡಿ ರಂಗನಾಥ ಜಾತ್ರೆ ಈ ಬಾರಿ ಕೊರೊನಾ ಭೀತಿಯಿಂದ ನಿಷೇಧಗೊಂಡಿದೆ.
ಕೆಲವಡಿ ಜಾತ್ರೆ ನಿಷೇಧ, ನಾಕಾಬಂದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ