ಆ್ಯಪ್ನಗರ

ಐಸಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಶೇ.99.91ರಷ್ಟು ಫಲಿತಾಂಶ!

ಪ್ರಸಕ್ತ ಸಾಲಿನ ಐಸಿಎಸ್‌ಇ (10ನೇ ತರಗತಿ) ಪರೀಕ್ಷೆಯಲ್ಲಿ ಶೇ.99.91 ಹಾಗೂ ಐಎಸ್‌ಇ (12ನೇ ತರಗತಿ) ಪರೀಕ್ಷೆಯಲ್ಲಿ ಶೇ.99.06ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

Vijaya Karnataka Web 10 Jul 2020, 10:57 pm
ಬೆಂಗಳೂರು: ಪ್ರಸಕ್ತ ಸಾಲಿನ ಐಸಿಎಸ್‌ಇ (10ನೇ ತರಗತಿ) ಪರೀಕ್ಷೆಯಲ್ಲಿ ಶೇ.99.91 ಹಾಗೂ ಐಎಸ್‌ಇ (12ನೇ ತರಗತಿ) ಪರೀಕ್ಷೆಯಲ್ಲಿ ಶೇ.99.06ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Vijaya Karnataka Web ICSE result


ರಾಜ್ಯಾದ್ಯಂತ 339 ಐಸಿಎಸ್‌ಇ ಶಾಲೆಗಳು ಹಾಗೂ 41 ಐಎಸ್‌ಇ ಶಾಲೆಗಳಿಂದ ಒಟ್ಟು 21,608 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಐಸಿಎಸ್‌ಇ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 19,787 ವಿದ್ಯಾರ್ಥಿಗಳ ಪೈಕಿ, 19,770 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 17 ಮಂದಿ ಅನುತ್ತೀರ್ಣಗೊಂಡಿದ್ದಾರೆ. ಐಎಸ್‌ಇ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 1,821 ವಿದ್ಯಾರ್ಥಿಗಳ ಪೈಕಿ 1,804 ಮಂದಿ ಪಾಸಾಗಿದ್ದು, 17 ಮಂದಿ ಫೇಲಾಗಿದ್ದಾರೆ.

ಒಟ್ಟು 22 ಭಾರತೀಯ ಭಾಷೆಗಳು ಹಾಗೂ 9 ವಿದೇಶಿ ಭಾಷೆಗಳೂ ಸೇರಿದಂತೆ ಒಟ್ಟು 61 ವಿಷಯಗಳಿಗೆ ಐಸಿಎಸ್‌ಇ ಪರೀಕ್ಷೆ ನಡೆಸಲಾಗಿತ್ತು. ಅಲ್ಲದೆ, 15 ಭಾರತೀಯ ಭಾಷೆಗಳು ಹಾಗೂ 6 ವಿದೇಶಿ ಭಾಷೆಗಳನ್ನೊಳಗೊಂಡಂತೆ ಒಟ್ಟು 51 ವಿಷಯಗಳಿಗೆ ಐಎಸ್‌ಇ ಪರೀಕ್ಷೆ ನಡೆದಿತ್ತು.

10 ಮತ್ತು 12ನೇ ತರಗತಿ ರಿಸಲ್ಟ್‌ಗೆ ಸಿದ್ಧತೆ! ಈ ಆ್ಯಪ್‌ ಡೌನ್‌ಲೋಡ್‌ಗೆ ಸೂಚಿಸಿದ ಸಿಬಿಎಸ್‌ಇ!

ದೇಶಾದ್ಯಂತ ಐಸಿಎಸ್‌ಇ ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 2,07,902 ವಿದ್ಯಾರ್ಥಿಗಳ ಪೈಕಿ 2,06,525 ಮತ್ತು ಐಎಸ್‌ಇ ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 88,409 ವಿದ್ಯಾರ್ಥಿಗಳ ಪೈಕಿ 85,611 ಮಂದಿ ಪಾಸಾಗಿದ್ದಾರೆ.

ನಗರದ ಬಿಜಿಎಸ್‌ ವರ್ಲ್ಡ್ ಸ್ಕೂಲ್‌ನ ವಿದ್ಯಾರ್ಥಿಗಳು ಐಸಿಎಸ್‌ಇ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆಯುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ. ಒಟ್ಟು 29 ವಿದ್ಯಾರ್ಥಿಗಳ ಪೈಕಿ 15 ಮಂದಿ ಹೈ ಡಿಸ್ಟಿಂಕ್ಷನ್‌, 9 ಮಂದಿ ಡಿಸ್ಟಿಂಕ್ಷನ್‌ ಹಾಗೂ 5 ಮಂದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.

ಇಂಜಿನಿಯರಿಂಗ್‌, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಎಗ್ಸಾಂ ಕ್ಯಾನ್ಸಲ್- ಡೈರೆಕ್ಟ್‌ ಪಾಸ್‌!

ಬಿ.ಎಸ್‌.ಲಿಖಿತ್‌ ಗೌಡ ಎಂಬ ವಿದ್ಯಾರ್ಥಿ ಶೇ.95.20ರಷ್ಟು ಅಂಕಗಳಿಸುವ ಮೂಲಕ ಶಾಲೆಗೆ ಪ್ರಥಮರಾಗಿ ಹೊರ ಹೊಮ್ಮಿದ್ದಾರೆ. ಎಂ.ಸಿ.ಪ್ರಜ್ವಲಾ (ಶೇ.94ರಷ್ಟು), ನಿಧಿ ಸಿ.ಶೆಟ್ಟಿ (ಶೇ.93.83), ಚರಿತಾ ಎಸ್‌.ಘಾಟ್ಗೆ (ಶೇ.92.80), ಆರ್‌.ಸಿಂಚನಾ (ಶೇ.92.60)ರಷ್ಟು ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ನಗರದ ಬಹುತೇಕ ಐಸಿಎಸ್‌ಇ ಶಾಲೆಗಳು ಶೇ.90ಕ್ಕಿಂತ ಹೆಚ್ಚು ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ