ಆ್ಯಪ್ನಗರ

ಮಂತ್ರಿ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸಿ.ಟಿ ರವಿ ಅಂತಿಮ ನಿಲುವೇನು?

ಬಿಎಸ್‌ವೈ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಭಾರಿ ಅಸಮಾಧಾನ ವ್ಯಕ್ತವಾಗಿದ್ದು, ಸಿ.ಟಿ ರವಿ, ಆರ್‌ ಅಶೋಕ್‌, ಶ್ರೀರಾಮುಲು ಮತ್ತಿತರರು ಬಹಿರಂಗವಾಗೇ ಅಸಮಾಧಾನ ತೋಡಿಕೊಂಡಿದ್ದಾರೆ.

Vijaya Karnataka Web 27 Aug 2019, 9:46 am
ಬೆಂಗಳೂರು: ಜನಸಂಪರ್ಕ ವಿಚಾರದಲ್ಲಿ ಅಷ್ಟೇನೂ ಮಹತ್ವವಲ್ಲದ ಪ್ರವಾಸೋದ್ಯಮ ಖಾತೆ ನೀಡಿರುವುದಕ್ಕೆ ಅಸಮಾಧಾನಗೊಂಡಿದ್ದ ಸಿ.ಟಿ ರವಿ, ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಮಂತ್ರಿ ಸ್ಥಾನಕ್ಕೆ ಸಿ.ಟಿ ರವಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿತ್ತು.
Vijaya Karnataka Web CT Ravi


ಅಧಿಕಾರ ಮತ್ತು ಹುದ್ದೆ ನನ್ನು ಪಕ್ಷದ ತತ್ವ ಮತ್ತು ನಿಷ್ಠೆಯ ನಡುವೆ ಬರುವುದಿಲ್ಲ. ನಾನು ಬದುಕಿದ್ದರು ಅಥವಾ ಸತ್ತಿದ್ದರು ನಾನು ಎಂದಿಗೂ ಬಿಜೆಪಿಯಲ್ಲಿ ಇರುತ್ತೇನೆ. ಬಿಜೆಪಿ ಪಕ್ಷದ ಮೇಲಿರುವ ನಿಷ್ಠೆಗೆ ಅನುಸಾರವಾಗಿ ಅಧಿಕಾರ ಮತ್ತು ಹುದ್ದೆ ನಡುವೆ ರಾಜಿ ಮಾಡಿಕೊಳ್ಳುತ್ತೇನೆ. ನನ್ನ ಕೊನೆ ಉಸಿರು ಇರುವವರೆಗೆ ಪಕ್ಷಕ್ಕಾಗಿ ಎಂತಹ ರಾಜಿ ಬೇಕಾದರು ಮಾಡಿಕೊಳ್ಳುತ್ತೇನೆ ಎಂದು ಸಿ.ಟಿ ರವಿ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.

ಸಿಎಂ ಯಡಿಯೂರಪ್ಪ ಕಾವಲಿಗೆ 3ಡಿ ಬಲೆ ಹೆಣೆದ ಹೈಕಮಾಂಡ್‌ ಉದ್ದೇಶವೇನು?

ಪ್ರವಾಸೋದ್ಯಮದ ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಹೆಚ್ಚುವರಿಯಾಗಿ ಸಿ.ಟಿ ರವಿ ಅವರಿಗೆ ನೀಡಲಾಗಿದೆ. ರಾಜ್ಯಾಧ್ಯಕ್ಷ ಹುದ್ದೆ ನಿರೀಕ್ಷೆಯಲ್ಲಿದ್ದ ತಮ್ಮನ್ನು ಕಡೆಗಣಿಸಲಾಗಿದೆ. ತಮಗಿಂತ ಕಡಿಮೆ ಬಾರಿ ಆಯ್ಕೆಯಾಗಿರುವ ಅಶ್ವತ್ಥನಾರಾಯಣ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿರುವುದು ಸಹ ಅವರ ಅಸಮಾಧನಕ್ಕೆ ಕಾರಣ ಎನ್ನಲಾಗಿದೆ.

ಸಿ.ಟಿ ರವಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಮೊಬೈಲ್‌ ಫೋನ್‌ ಸ್ವಚ್ಡ್‌ ಆಫ್‌ ಆಗಿತ್ತು. ಖಾತೆಗಿಂತಲೂ ಹೆಚ್ಚಾಗಿ, ಲಕ್ಷಣ್‌ ಸವದಿ ಹಾಗೂ ಅಶ್ವತ್ಥನಾರಾಯಣ ಅವರಿಗೆ ಡಿಸಿಎಂ ಪಟ್ಟ ಕೊಟ್ಟಿರುವುದು ಹಲವು ಹಿರಿಯ ನಾಯಕರ ಕಣ್ಣು ಕೆಂಪಾಗಿಸಿದೆ.

'3D'CM ಸರಕಾರ: ಸವದಿಗೆ ಜಾಕ್‌ಪಾಟ್‌, ಕಾರಜೋಳ, ಅಶ್ವತ್ಥನಾರಾಯಣಗೆ ಡಿಸಿಎಂ ಪಟ್ಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ