ಬೆಂಗಳೂರು: ರಾಜ್ಯದ 10 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 6ನ್ನು ಗೆದ್ದುಕೊಂಡು, ಒಂದರಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಆಡಳಿತರೂಢ ಬಿಜೆಪಿಗೆ ಭಾರಿ ಆಘಾತ ನೀಡಿದೆ. ಜೆಡಿಎಸ್ ಎರಡು ಕಡೆ ಜಯಭೇರಿ ಬಾರಿಸಿದ್ದು, ಬಿಜೆಪಿ ಕೇವಲ 1 ರಲ್ಲಿ ಗೆದ್ದು ತೀವ್ರ ಮುಖಭಂಗ ಅನುಭವಿಸಿದೆ. 1 ಮಹಾನಗರ ಪಾಲಿಕೆ, 5 ನಗರಸಭೆ, 2 ಪುರಸಭೆ, 2 ಪಟ್ಟಣ ಪಂಚಾಯಿತಿ ಸೇರಿ ಒಟ್ಟು 10 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ.
ಇದರಲ್ಲಿ ಏಕೈಕ ಮಹಾನಗರ ಪಾಲಿಕೆ ಬಳ್ಳಾರಿಯನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ನಗರಸಭೆಗಳ ಪೈಕಿ ರಾಮನಗರ ಮತ್ತು ಭದ್ರಾವತಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ, ಬೀದರ್ನಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಚನ್ನಪಟ್ಟಣ ನಗರಸಭೆಯನ್ನು ಜೆಡಿಎಸ್ ತನ್ನ ವಶಕ್ಕೆ ಪಡೆದುಕೊಂಡಿದ್ದರೆ, ಮಡಿಕೇರಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಗೆದ್ದುಕೊಂಡು ಏಕೈಕ ಸ್ಥಳೀಯ ಸಂಸ್ಥೆ ಇದಾಗಿದ್ದು, 10ರಲ್ಲಿ ಕೇವಲ 1ನ್ನು ಗೆದ್ದುಕೊಂಡು ಮುಜುಗರಕ್ಕೀಡಾಗಿದೆ.
ಪುರಸಭೆಗಳ ಪೈಕಿ ಬೇಲೂರಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಬೆಂಗಳೂರು ಗ್ರಾಮಾಂತರದ ವಿಜಯಪುರ ಪುರಸಭೆಯಲ್ಲಿ ಜಾತ್ಯಾತೀತ ಜನತಾ ದಳ ಗೆಲುವಿನ ನಗೆ ಬೀರಿದೆ. ತೀರ್ಥಹಳ್ಳಿ ಮತ್ತು ಗುಡಿಬಂಡೆ ಎರಡೂ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಪಾರಮ್ಯ ಮೆರೆದಿದೆ.
ಇನ್ನು ಬೀದರ್ನ ಹಳ್ಳಿಕೇಡ ಬಿ ಪುರಸಭೆ ಹಾಗೂ ಹಾವೇರಿಯ ಹಿರೇಕೆರೂರು ಪಟ್ಟಣ ಪಂಚಾಯಿತಿಯ ತಲಾ ಒಂದು ವಾರ್ಡ್ಗೆ ನಡೆದ ಉಪಚುನಾವಣೆಯಲ್ಲಿ ಕ್ರಮವಾಗಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೀಗಿದೆ,
* ಬೀದರ್ನಲ್ಲಿ ಒಟ್ಟು 35 ಸೀಟುಗಳಿಗೆ. ಆದರೆ ಚುನಾವಣೆ ನಡೆದಿದ್ದು 33 ಕ್ಷೇತ್ರಗಳಿಗೆ ಮಾತ್ರ. ಇನ್ನೆರಡು ಕ್ಷೇತ್ರಗಳ ಚುನಾವಣೆ ಬಾಕಿ ಇದೆ.
** ಭದ್ರಾವತಿಯಲ್ಲಿಯೂ 35 ಸ್ಥಾನಗಳಿದ್ದು 34 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದೆ. ಒಂದು ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ.
ಒಟ್ಟಾರೆ 263 ಸ್ಥಾನಗಳಲ್ಲಿ ಕಾಂಗ್ರೆಸ್ 120 ಸೀಟುಗಳನ್ನು ಗೆದ್ದುಕೊಂಡಿದೆ. ಜೆಡಿಎಸ್ 66 ರಲ್ಲಿ ಜಯಭೇರಿ ಭಾರಿಸಿದ್ದು, ಆಡಳಿತರೂಢ ಬಿಜೆಪಿ 57 ಸ್ಥಾನಗಳನ್ನಷ್ಟೆ ಗೆದ್ದುಕೊಂಡಿದೆ. ಎಸ್ಡಿಪಿಐ 5, ಎಎಪಿ 1, ಎಐಎಂಐಎಂ 1 ಮತ್ತು ಪಕ್ಷೇತರರು 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಇದರಲ್ಲಿ ಏಕೈಕ ಮಹಾನಗರ ಪಾಲಿಕೆ ಬಳ್ಳಾರಿಯನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ನಗರಸಭೆಗಳ ಪೈಕಿ ರಾಮನಗರ ಮತ್ತು ಭದ್ರಾವತಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ, ಬೀದರ್ನಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಚನ್ನಪಟ್ಟಣ ನಗರಸಭೆಯನ್ನು ಜೆಡಿಎಸ್ ತನ್ನ ವಶಕ್ಕೆ ಪಡೆದುಕೊಂಡಿದ್ದರೆ, ಮಡಿಕೇರಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಗೆದ್ದುಕೊಂಡು ಏಕೈಕ ಸ್ಥಳೀಯ ಸಂಸ್ಥೆ ಇದಾಗಿದ್ದು, 10ರಲ್ಲಿ ಕೇವಲ 1ನ್ನು ಗೆದ್ದುಕೊಂಡು ಮುಜುಗರಕ್ಕೀಡಾಗಿದೆ.
ಪುರಸಭೆಗಳ ಪೈಕಿ ಬೇಲೂರಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಬೆಂಗಳೂರು ಗ್ರಾಮಾಂತರದ ವಿಜಯಪುರ ಪುರಸಭೆಯಲ್ಲಿ ಜಾತ್ಯಾತೀತ ಜನತಾ ದಳ ಗೆಲುವಿನ ನಗೆ ಬೀರಿದೆ. ತೀರ್ಥಹಳ್ಳಿ ಮತ್ತು ಗುಡಿಬಂಡೆ ಎರಡೂ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಪಾರಮ್ಯ ಮೆರೆದಿದೆ.
ಇನ್ನು ಬೀದರ್ನ ಹಳ್ಳಿಕೇಡ ಬಿ ಪುರಸಭೆ ಹಾಗೂ ಹಾವೇರಿಯ ಹಿರೇಕೆರೂರು ಪಟ್ಟಣ ಪಂಚಾಯಿತಿಯ ತಲಾ ಒಂದು ವಾರ್ಡ್ಗೆ ನಡೆದ ಉಪಚುನಾವಣೆಯಲ್ಲಿ ಕ್ರಮವಾಗಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೀಗಿದೆ,
ಜಿಲ್ಲೆ | ನ. ಸ್ಥಳೀಯ ಸಂಸ್ಥೆ | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ | ಇತರ | ಜೆಡಿಎಸ್ | |
ಬಳ್ಳಾರಿ | ಬಳ್ಳಾರಿ | ಮಹಾನಗರ ಪಾಲಿಕೆ | 21 | 13 | 0 | 5 | 39 |
ಬೀದರ್ | ಬೀದರ್ | ನಗರಸಭೆ | 15 | 9 | 7 | ಎಎಪಿ 1ಎಐಎಂಐಎಂ 1 | 33* |
ರಾಮನಗರ | ರಾಮನಗರ | ನಗರಸಭೆ | 19 | 0 | 11 | 1 | 31 |
ರಾಮನಗರ | ಚನ್ನಪಟ್ಟಣ | ನಗರಸಭೆ | 7 | 7 | 16 | 1 | 31 |
ಶಿವಮೊಗ್ಗ | ಭದ್ರಾವತಿ | ನಗರಸಭೆ | 18 | 4 | 11 | 1 | 34** |
ಕೊಡಗು | ಮಡಿಕೇರಿ | ನಗರಸಭೆ | 1 | 16 | 1 | ಎಸ್ಡಿಪಿಐ 5 | 23 |
ಹಾಸನ | ಬೇಲೂರು | ಪುರಸಭೆ | 17 | 1 | 5 | 0 | 23 |
ಬೆಂಗಳೂರು ಗ್ರಾ. | ವಿಜಯಪುರ | ಪುರಸಭೆ | 7 | 1 | 13 | 2 | 23 |
ಶಿವಮೊಗ್ಗ | ತೀರ್ಥಹಳ್ಳಿ | ಪಟ್ಟಣ ಪಂಚಾಯಿತಿ | 9 | 6 | 0 | 0 | 15 |
ಚಿಕ್ಕಬಳ್ಳಾಪುರ | ಗುಡಿಬಂಡೆ | ಪಟ್ಟಣ ಪಂಚಾಯಿತಿ | 6 | 0 | 2 | 3 | 11 |