ಆ್ಯಪ್ನಗರ

ಒಂದೇ ದಿನ ಎರಡು ಪರೀಕ್ಷೆ, ಅಭ್ಯರ್ಥಿಗಳಿಗೆ ಇಕ್ಕಟ್ಟು

ಕೇಂದ್ರ ಮಾನ ಸಂಪನ್ಮೂಲ ಇಲಾಖೆ ಸಹಯೋಗದಲ್ಲಿ ಆಯೋಜಿಸುವ ಸಿಎಸ್‌ಐಆರ್‌-ಯುಜಿಸಿ ಪರೀಕ್ಷೆ ಹಾಗೂ ಕೆಪಿಎಸ್‌ಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ...

Vijaya Karnataka 9 Dec 2018, 5:00 am
ಬೆಂಗಳೂರು: ಕೇಂದ್ರ ಮಾನ ಸಂಪನ್ಮೂಲ ಇಲಾಖೆ ಸಹಯೋಗದಲ್ಲಿ ಆಯೋಜಿಸುವ ಸಿಎಸ್‌ಐಆರ್‌-ಯುಜಿಸಿ ಪರೀಕ್ಷೆ ಹಾಗೂ ಕೆಪಿಎಸ್‌ಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಬೋಧಕ/ಪ್ರಾಂಶುಪಾಲರ ಹುದ್ದೆಗಳ ನೇಮಕ ಸಂಬಂಧ ಪರೀಕ್ಷೆಗಳು ಡಿ.16ರಂದೇ ನಿಗದಿಯಾಗಿದ್ದು, ಯಾವ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂಬ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
Vijaya Karnataka Web pen


ಪ್ರತಿ ವರ್ಷ ಸಿಎಸ್‌ಐಆರ್‌ ಪರೀಕ್ಷೆ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತದೆ. ಇದು ಉಪನ್ಯಾಸಕರಿಗೆ ಪ್ರತಿಷ್ಠಿತ ಪರೀಕ್ಷೆಯಾಗಿದ್ದು, ಸಾವಿರಾರು ಮಂದಿ ಪೂರ್ವ ತಯಾರಿಯೊಂದಿಗೆ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಪರೀಕ್ಷಾ ಕೇಂದ್ರವಿದ್ದು, ನಾನಾ ಜಿಲ್ಲೆಗಳಿಂದ ಅಭ್ಯರ್ಥಿಗಳು ರಾಜಧಾನಿಗೆ ಆಗಮಿಸಬೇಕಾಗುತ್ತದೆ.

ಇದರ ಅರಿವಿದ್ದರೂ ಕೆಪಿಎಸ್‌ಸಿ ಮೊರಾರ್ಜಿ ವಸತಿ ಶಾಲೆಗಳ ಬೋಧಕ ಹಾಗೂ ಪ್ರಾಂಶುಪಾಲರ ಹುದ್ದೆಗಳ ನೇಮಕ ಪರೀಕ್ಷೆಗೆ ದಿನ ನಿಗದಿ ಮಾಡಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ. ಆಯೋಗದಿಂದ ಡಿ.12-16ರ ವರೆಗೆ ಪರೀಕ್ಷೆ ನಡೆಯಲಿದ್ದರೂ, ಕೊನೆಯ ದಿನ ಎರಡೂ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಹಲವು ಅಭ್ಯರ್ಥಿಗಳಿಗೆ ಸಾಧ್ಯವಾಗದು.

ಅದರಲ್ಲೂ ಭೌರಶಾಸ್ತ್ರ, ರಾಸಾಯನಶಾಸ್ತ್ರ, ಜೀವ ವಿಜ್ಞಾನ ಹಾಗೂ ಇನ್ನಿತರ ವಿಷಯಗಳನ್ನು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಒಂದು ಪರೀಕ್ಷೆಯನ್ನು ಬರೆಯಲು ಹೋದಲ್ಲಿ ಮತ್ತೊಂದಕ್ಕೆ ಗೈರು ಹಾಜರಾಗಬೇಕಾಗುತ್ತದೆ. ಇದರಿಂದ ಸರಕಾರಿ ಉದ್ಯೋಗಕ್ಕೆ ಆಯ್ಕೆ ಆಗದೆ ಪರಿತಪಿಸಬೇಕಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಡಿ.16ರ ಸಾಮಾನ್ಯ ವಿಷಯದ ಪರೀಕ್ಷೆಯನ್ನು ಮುಂದೂಡುವಂತೆ ಅಭ್ಯರ್ಥಿಗಳು ಆಯೋಗಕ್ಕೆ ಮನವಿ ಮಾಡಿದರೂ ಕ್ಯಾರೇ ಎಂದಿಲ್ಲ ಎಂಬುದಾಗಿ ಅಳಲು ತೋಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ