ಆ್ಯಪ್ನಗರ

ದಾಳಿಗೆ ಸಮರ್ಥನೆ, ಬೆಂಗಳೂರಲ್ಲಿ ಕಾಶ್ಮೀರಿ ವಿದ್ಯಾರ್ಥಿ ಬಂಧನ

​​ಉಗ್ರರ ಕೃತ್ಯಕ್ಕೆ ಬೆಂಬಲಿಸಿ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಕುರಿತು ಸೈಬರ್‌ ಕ್ರೈಂ ಠಾಣೆಗೆ ಎರಡು ದೂರುಗಳು ಸಲ್ಲಿಕೆಯಾಗಿವೆ.

Vijaya Karnataka 17 Feb 2019, 7:59 am
ಬೆಂಗಳೂರು/ಯಲಹಂಕ : ಕಾಶ್ಮೀರದಲ್ಲಿ ಯೋಧರ ಮೇಲೆ ಉಗ್ರರ ಪೈಶಾಚಿಕ ಕೃತ್ಯವನ್ನು ಸಮರ್ಥಿಸಿಕೊಂಡು ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿದ ಕಾಶ್ಮೀರದ ವಿದ್ಯಾರ್ಥಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ಪುಲ್ವಾಮಾ ದಾಳಿ
ಪುಲ್ವಾಮಾ ದಾಳಿ


ಕಟ್ಟಿಗೇನಹಳ್ಳಿಯಲ್ಲಿರುವ ರೇವಾ ವಿವಿಯ ಹಾಸ್ಟೇಲ್‌ನಲ್ಲಿ ವಾಸವಿರುವ, ರೇವಾ ಕಾಲೇಜಿನ 3ನೇ ವರ್ಷದ ಸಿವಿಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ ತಾಹೀರ್‌ ಲತೀಫ್‌ (23) ಬಂಧಿತ ಆರೋಪಿ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಬರ್‌ ಠಾಣೆಗೆ ದೂರುಗಳು

ಉಗ್ರರ ಕೃತ್ಯಕ್ಕೆ ಬೆಂಬಲಿಸಿ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಕುರಿತು ಸೈಬರ್‌ ಕ್ರೈಂ ಠಾಣೆಗೆ ಎರಡು ದೂರುಗಳು ಸಲ್ಲಿಕೆಯಾಗಿವೆ. ವಕೀಲರಾದ ಉಮೇಶ್‌ ಕುಮಾರ್‌ ಮತ್ತು ಕರ್ನಾಟಕ ಸಂಘಟನೆಗಳ ಒಕ್ಕೂಟದ ನಾಗೇಶ್‌ ಎಂಬುವರು ಎರಡು ಪ್ರತ್ಯೇಕ ದೂರುಗಳನ್ನು ನೀಡಿದ್ದಾರೆ.

ಅಬೀದ್‌ ಮಲೀಕ್‌, ಅಬ್ದುಲ್‌ ಹನೀಫ್‌, ಸುಲ್ತಾನ್‌ ಅಹ್ಮದ್‌, ಸಲ್ಮಾನ್‌ ನಿಸಾರ್‌, ಅಮೀರ್‌ ಷರೀಫ್‌ ಹಾಗೂ ಉಮೇರ್‌ ಎಂಬ ವ್ಯಕ್ತಿಗಳು ಫೇಸ್‌ಬುಕ್‌ನಲ್ಲಿ ದೇಶ ವಿರೋಧಿ ಪೋಸ್ಟ್‌ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ