ಆ್ಯಪ್ನಗರ

ಕೆಶಿಪ್‌ ಕಾಮಗಾರಿಗಳ ಪೂರ್ಣಕ್ಕೆ ಡಿಸಿಎಂ ಸೂಚನೆ

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್‌)ಯಡಿ ಪ್ರಗತಿಯ ಹಂತದಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಲೋಕೋಪಯೋಗಿ ಖಾತೆ ಹೊಂದಿರುವ ಡಿಸಿಎಂ ಗೋವಿಂದ ಎಂ...

Vijaya Karnataka 24 Sep 2019, 5:00 am
ಬೆಂಗಳೂರು: ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್‌)ಯಡಿ ಪ್ರಗತಿಯ ಹಂತದಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಲೋಕೋಪಯೋಗಿ ಖಾತೆ ಹೊಂದಿರುವ ಡಿಸಿಎಂ ಗೋವಿಂದ ಎಂ. ಕಾರಜೋಳ ಸೂಚನೆ ನೀಡಿದ್ದಾರೆ.
Vijaya Karnataka Web GOVIND KARJOL (BJP)


ವಿಕಾಸಸೌಧದಲ್ಲಿಸೋಮವಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ''ಕೆಶಿಪ್‌ ಮೊದಲನೇ ಹಂತದಲ್ಲಿ 4615 ಕಿ.ಮೀ. ಉದ್ದದ ರಸ್ತೆ ನಿರ್ಮಾಣದ ಗುರಿಯಲ್ಲಿ 4162 ಕಿ.ಮೀ ಪೂರ್ಣಗೊಳಿಸಲಾಗಿದೆ. ಎರಡನೇ ಹಂತದಲ್ಲಿ4522 ಕೋಟಿ ರೂ. ವೆಚ್ಚದ 1195 ಕಿ.ಮೀ. ಉದ್ದದ ರಸ್ತೆ ನಿರ್ಮಾಣದ ಗುರಿಯಲ್ಲಿ1163 ಕಿ.ಮೀ. ನಿರ್ಮಿಸಲಾಗಿದೆ,'' ಎಂದು ತಿಳಿಸಿದರು.

ಸೇಫ್‌ ಕಾರಿಡಾರ್‌ ಪ್ರೊಜೆಕ್ಟ್ ಯೋಜನೆಯಡಿ ಬೆಳಗಾವಿಯಿಂದ ಎರಗಟ್ಟಿ ಯವರೆಗೆ ರಸ್ತೆ ನಿರ್ಮಿಸಲಾಗಿದ್ದು, ಇಲ್ಲಿಅಪಘಾತಗಳ ಪ್ರಮಾಣ ಶೇ. 65ಕ್ಕಿಂತ ಕಡಿಮೆಯಾಗಿದೆ. ಇದಕ್ಕೆ ಕೇಂದ್ರ ಸರಕಾರ ಹಾಗೂ ವಿಶ್ವಬ್ಯಾಂಕ್‌ ನಿಂದ ಪ್ರಶಸ್ತಿಯೂ ದೊರೆತಿದೆ. ಅಲ್ಲದೆ ಇದೇ ಮಾದರಿಯಲ್ಲಿಇತರ ರಾಜ್ಯಗಳಲ್ಲಿರಸ್ತೆಗಳನ್ನು ನಿರ್ಮಿಸಲು ವರದಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ,''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ