ಆ್ಯಪ್ನಗರ

ಖಾತೆ ಹಂಚಿಕೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ..! ಸಂಪುಟ ಸಭೆಗೆ ಗೈರಾದ ಅತೃಪ್ತ ಸಚಿವರು

ಸಂಪುಟ ವಿಸ್ತರಣೆಯ ತಲೆನೋವು ಮುಗಿದ ಬಳಿಕ ಬಿಜೆಪಿಯಲ್ಲಿ ಖಾತೆ ಬಿಕ್ಕಟ್ಟು ಶುರುವಾಗಿದೆ. ಖಾತೆ ಬದಲಾವಣೆಯಿಂದ ಪ್ರಮುಖ ಸಚಿವರು ಸಂಪುಟ ವಿಸ್ತರಣೆ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಗೆ ಗೈರಾಗುವ ಮೂಲಕ ಅಸಮಾಧಾನವನ್ನು ಬಹಿರಂಗವಾಗಿ ತೋರ್ಪಡಿಸಿದ್ದಾರೆ.

Vijaya Karnataka Web 21 Jan 2021, 5:36 pm
ಬೆಂಗಳೂರು: ಖಾತೆ ಬದಲಾವಣೆ ಬೆನ್ನಲ್ಲಿಯೇ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಪ್ರಮುಖ ಸಚಿವರು ಗೈರಾಗಿದ್ದಾರೆ. ಈ ಮೂಲಕ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ತೋರ್ಪಡಿಸಿದ್ದಾರೆ.
Vijaya Karnataka Web BS Yediyurappa11
ಬಿಎಸ್‌ ಯಡಿಯೂರಪ್ಪ, ಮುಖ್ಯಮಂತ್ರಿ (ಸಂಗ್ರಹ ಚಿತ್ರ)


ಸಂಪುಟ ವಿಸ್ತರಣೆ ಬಳಿಕ ಗುರುವಾರ ಸಂಜೆ ನಡೆದ ಮೊದಲ ಸಚಿವ ಸಂಪುಟ ಸಭೆಗೆ ಸಚಿವರಾದ ಮಾಧುಸ್ವಾಮಿ, ಎಂಟಿಬಿ ನಾಗರಾಜ್‌, ಡಾ.ಕೆ.ಸುಧಾಕರ್‌ ಹಾಗೂ ಕೆ.ಗೋಪಾಲಯ್ಯ ಗೈರಾಗಿದ್ದಾರೆ. ಖಾತೆ ಬದಲಾವಣೆ ಹಿನ್ನೆಲೆಯಲ್ಲಿ ಸಚಿವರು ಅಸಮಾಧಾನಗೊಂಡಿದ್ದರು. ಈ ಕಾರಣಕ್ಕಾಗಿ ಕ್ಯಾಬಿನೆಟ್‌ ಮೀಟಿಂಗ್‌ಗೆ ಗೈರಾಗಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಸಂಪುಟ ಸಭೆಯಲ್ಲೂ ಚರ್ಚೆ ನಡೆದಿದೆ ಎನ್ನಲಾಗಿದ್ದು, ಸದ್ಯಕ್ಕೆ ನೀಡಿದ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವಂತೆ ಸಿಎಂ ಬಿಎಸ್‌ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ತಿಳಿದುಬಂದುದೆ. ಅಸಮಾಧಾನಿತರನ್ನು ಕೂಡ ಸಮಾಧಾನಪಡಿಸುವ ಪ್ರಯತ್ನಗಳು ಬಿಜೆಪಿ ಪಾಳಯದಲ್ಲಿ ನಡೆಯುತ್ತಿವೆ.
ಸಂಪುಟ ಸರ್ಕಸ್‌ ಬಳಿಕ ಖಾತೆ ಬದಲಾವಣೆ ತಲೆನೋವು..! ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಅತೃಪ್ತಿ ಸ್ಫೋಟ ಸಾಧ್ಯತೆಜೆ.ಸಿ.ಮಾಧುಸ್ವಾಮಿ ಬಳಿಯಿದ್ದ ಪ್ರಮುಖವಾದ ಕಾನೂನು ಮತ್ತು ಸಂಸದೀಯ ಇಲಾಖೆಯನ್ನು ಬಸವರಾಜ್‌ ಬೊಮ್ಮಾಯಿಗೆ ನೀಡಲಾಗಿದ್ದು, ಅವರಿಗೆ ವೈದ್ಯಕೀಯ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಲಾಗಿದೆ. ಇನ್ನು, ಡಾ.ಕೆ.ಸುಧಾಕರ್‌ ಬಳಿಯಿದ್ದ ವೈದ್ಯಕೀಯ ಶಿಕ್ಷಣವನ್ನು ಮಾಧುಸ್ವಾಮಿ ಅವರಿಗೆ ನೀಡಲಾಗಿದೆ.
ಖಾತೆ ಹಂಚಿಕೆ ಮಾಡಿ ಎಲ್ಲರನ್ನೂ ತೃಪ್ತಿಪಡಿಸುವುದು ಸುಲಭದ ಕೆಲಸ ಅಲ್ಲ: ಬಿಎಸ್‌ವೈ!ಇನ್ನು, ಕೆ.ಗೋಪಾಲಯ್ಯ ಅವರ ಬಳಿಯಿದ್ದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯನ್ನು ಉಮೇಶ್‌ ಕತ್ತಿಗೆ ನೀಡಲಾಗಿದ್ದು, ಅವರಿಗೆ ತೋಟಗಾರಿಕೆ ಮತ್ತು ಸಕ್ಕರೆ ಖಾತೆ ನೀಡಲಾಗಿದೆ. ಇತ್ತ, ವಸತಿ ಖಾತೆಗೆ ಪಟ್ಟು ಹಿಡಿದಿದ್ದ ಎಂಟಿಬಿ ನಾಗರಾಜ್‌ ಅವರಿಗೆ ಅಬಕಾರಿ ಖಾತೆ ನೀಡಿರುವುದು ಅಸಮಾಧಾನ ಸೃಷ್ಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ