ಆ್ಯಪ್ನಗರ

ಕೋಲಾರದಲ್ಲಿ ಪಿಜಿ ಕಟ್ಟಡ ನಿರ್ಮಾಣ ವಿಳಂಬ: ಪುಟ್ಟಸ್ವಾಮಿ ವಿರುದ್ಧದ ತನಿಖೆಗೆ ಹೈಕೋರ್ಟ್‌ ತಡೆ

ಕೋಲಾರದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳ ಕಟ್ಟಡ ನಿರ್ಮಾಣ ಕಾರ‍್ಯವಿಳಂಬದಿಂದ 1.5 ಕೋಟಿ ಹಣ ನಷ್ಟವಾಗಿರುವ ಆರೋಪ ಪ್ರಕರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಎಂಜಿನಿಯರ್‌ ಎನ್‌.ಪುಟ್ಟಸ್ವಾಮಿ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

Vijaya Karnataka 2 Jun 2019, 5:00 am
ಬೆಂಗಳೂರು: ಕೋಲಾರದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳ ಕಟ್ಟಡ ನಿರ್ಮಾಣ ಕಾರ‍್ಯವಿಳಂಬದಿಂದ 1.5 ಕೋಟಿ ಹಣ ನಷ್ಟವಾಗಿರುವ ಆರೋಪ ಪ್ರಕರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಎಂಜಿನಿಯರ್‌ ಎನ್‌.ಪುಟ್ಟಸ್ವಾಮಿ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.
Vijaya Karnataka Web highcourt


ಎನ್‌.ಪುಟ್ಟಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ.ಪವನ್‌ ಭಜಂತ್ರಿ ಅವರಿದ್ದ ಏಕಸದಸ್ಯಪೀಠ , 2019ರ ಮೇ 25ರಂದು ಹೊರಡಿಸಿರುವ ತನಿಖಾ ಆದೇಶ ತಡೆ ನೀಡಿ ವಿಚಾರಣೆ ಮುಂದೂಡಿದೆ.

ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಮೇಲ್ನೋಟಕ್ಕೆ ತನಿಖೆ ಆರಂಭಿಸುವಲ್ಲಿ ಸಾಕಷ್ಟು ವಿಳಂಬವಾಗಿದೆ. ಆದ್ದರಿಂದ ಮಧಂತರ ತಡೆ ಆದೇಶ ನೀಡಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.

''ಅರ್ಜಿದಾರರ ವಿರುದ್ಧ 2019ರ ಮೇ 25ರಂದು ತನಿಖೆಗೆ ಆದೇಶಿಸಲಾಗಿದೆ. ಆದರೆ ಅವರು ಮೇ 31ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಆರೋಪಿಸಲಾಗಿರುವ ಕಟ್ಟಡ ನಿರ್ಮಾಣವಾಗಿರುವುದು 2008ರಲ್ಲಿ, ಆ ಬಗ್ಗೆ ತನಿಖೆ ನಡೆಸಿ ವರದಿ ನೀಡಿರುವುದು 2014ರಲ್ಲಿ, ಪ್ರತಿವಾದಿ ತನಿಖೆ ಆರಂಭಿಸಲು ಐದು ವರ್ಷಗಳ ಅವಧಿಯನ್ನು ತೆಗೆದುಕೊಂಡಿದೆ. ಒಟ್ಟಾರೆ 11 ವರ್ಷ ವಿಳಂಬವಾಗಿದೆ'' ಎಂಬುದನ್ನು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಹಲವು ಅಕ್ರಮಗಳ ಬಗ್ಗೆ ತನಿಖೆ ನಡೆಸಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾ.ಕೆ.ಶಿವಶಂಕರ್‌ ಭಟ್‌ ಅವರಿದ್ದ ಏಕಸದಸ್ಯ ಆಯೋಗ 2014ರ ಮಾ.3ರಂದು ವರದಿಯನ್ನು ಸಲ್ಲಿಸಿತ್ತು.ಅದರಲ್ಲಿ ಆಗಿರುವ ನಷ್ಟಕ್ಕೆ ಒಬ್ಬರನ್ನು ದೂಷಿಸುವುದು ಕಷ್ಟ. ಇದಕ್ಕೆ ಇಡೀ ವ್ಯವಸ್ಥೆಯ ವೈಫಲ್ಯವೇ ಸಾಕ್ಷಿ ಎಂದು ಹೇಳಿತ್ತು.ಆದರೂ ಬೆಂಗಳೂರು ವಿ.ವಿ. ಎಂಜಿನಿಯರ್‌ ಎನ್‌.ಪುಟ್ಟಸ್ವಾಮಿಗೆ ಶೋಕಾಸ್‌ ನೋಟಿಸ್‌ ನೀಡಿತ್ತು. ಆಗ ಅವರು ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯ ಪುಟ್ಟಸ್ವಾಮಿ ಅಮಾನತು ಆದೇಶ ಹೊರಡಿಸುವ ಮುನ್ನ ಅವರ ಅಹವಾಲು ಆಲಿಸುವಂತೆ ಸೂಚನೆ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ