ಆ್ಯಪ್ನಗರ

‘ಸಮನ್ವಯ ಸಮಿತಿ’ ರಚನೆಗೆ ಮೂಡುತ್ತಿಲ್ಲ ಸಮನ್ವಯ ;ಗೊಂದಲದ ಗೂಡಾದ ಕೈ ಪಾಳಯ

ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆ ಶಿವಕುಮಾರ್‌ಗೆ ನೀಡುವುದಾದರೆ ನಾಲ್ವರು ಕಾರ್ಯಾಧ್ಯಕ್ಷರು ಹಾಗೂ ಸಮನ್ವಯ ಸಮಿತಿ ರಚನೆ ಮಾಡಬೇಕು ಎಂಬ ಸಿದ್ದರಾಮಯ್ಯ ಬಣದ ಬೇಡಿಕೆ ಸದ್ಯ ಕಾಂಗ್ರೆಸ್‌ ಆಂತರಿಕ ಭಿನ್ನಮತವನ್ನು ಮತ್ತಷ್ಟು ತೀವ್ರಗೊಳಿಸಿದೆ.

Vijaya Karnataka Web 21 Jan 2020, 10:10 am
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಸ್ಥಾನಗಳ ಕುರಿತಾಗಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಒಮ್ಮತದ ಅಭಿಪ್ರಾಯ ಮೂಡುತ್ತಿಲ್ಲ. ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ವಿರೋಧ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಬಣ ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಹಾಗೂ ಸಮನ್ವಯ ಸಮಿತಿ ರಚನೆಯ ಬೇಡಿಕೆಯನ್ನು ಹೈ ಕಮಾಂಡ್‌ ಮುಂದಿಟ್ಟಿದೆ. ಆದರೆ ಇದಕ್ಕೆ ಹಿರಿಯ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು ಕಾಂಗ್ರೆಸ್ ಬಣ ರಾಜಕೀಯ ತೀವ್ರ ಸ್ವರೂಪ ಪಡೆದುಕೊಂಡಿದೆ.
Vijaya Karnataka Web kpcc president post confusion between congress leaders
‘ಸಮನ್ವಯ ಸಮಿತಿ’ ರಚನೆಗೆ ಮೂಡುತ್ತಿಲ್ಲ ಸಮನ್ವಯ ;ಗೊಂದಲದ ಗೂಡಾದ ಕೈ ಪಾಳಯ


ಸಮನ್ವಯ ಸಮಿತಿ ಹಾಗೂ ನಾಲ್ವರು ಕಾರ್ಯಾಧ್ಯಕ್ಷರ ಮೂಲಕ ಕೆಪಿಸಿಸಿ ನಿಯಂತ್ರಿಸಲು ಸಿದ್ದರಾಮಯ್ಯ ತಂತ್ರಗಾರಿಕೆ ನಡೆಸಿದರೆ ಇದಕ್ಕೆ ಪ್ರತ್ಯಸ್ತ್ರವಾಗಿ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಬೇರ್ಪಡಿಸಬೇಕು ಎಂದು ಮೂಲ ಕಾಂಗ್ರೆಸ್‌ ಮುಖಂಡರು ಬೇಡಿಕೆ ಇಟ್ಟಿದ್ದಾರೆ.

ಕೈ ನಾಯಕರ ನಡುವೆ ಆಂತರಿಕವಾಗಿ ಬುಸುಗುಡುತ್ತಿದ್ದ ಭಿನ್ನಮತ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿಕೆಯೊಂದರ ಮೂಲಕ ಇದೀಗ ಬಯಲಿಗೆ ಬಂದಿದೆ. ಸಿಎಲ್‌ಪಿ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನ ಬೇರ್ಪಡಿಸಬಾರದು ಎಂದು ಸಿದ್ದರಾಮಯ್ಯ ಬೇಡಿಕೆ ಇಟ್ಟರೆ ಎರಡೂ ಸ್ಥಾನವನ್ನು ಪ್ರತ್ಯೇಕಿಸಬೇಕು ಎಂದು ಪರಮೇಶ್ವರ್‌ ಒತ್ತಾಯವಾಗಿದೆ. ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

ಕೆಪಿಸಿಸಿ ಪಟ್ಟ ಮತ್ತಷ್ಟು ವಿಳಂಬ: ನನಗೆ ಅಧ್ಯಕ್ಷಗಿರಿ ಓಕೆ, ಜೊತೆ ಕಾರ್ಯಾಧ್ಯಕ್ಷರೇಕೆ? ಎನ್ನುತ್ತಿರುವ ಡಿಕೆಶಿ

ಇನ್ನು ಕೆಪಿಸಿಸಿಗೆ ಸಿದ್ದರಾಮಯ್ಯ ಆಪ್ತರಾದ ನಾಲ್ವರು ಕಾರ್ಯಾಧ್ಯಕ್ಷರ ನೇಮಕವಾದರೆ ಪಕ್ಷದಲ್ಲಿ ಗೊಂದಲ ಹಾಗೂ ಗುಂಪುಗಾರಿಕೆಗೆ ಅವಕಾಶ ಕಲ್ಪಿಸಿಕೊಟ್ಟಂತ್ತಾಗುತ್ತದೆ ಎಂಬುವುದು ಡಿ.ಕೆ ಶಿವಕುಮಾರ್ ವಾದವಾಗಿದೆ. ಅಲ್ಲದೆ ಪಕ್ಷದಲ್ಲಿ ಆಂತರಿಕ ಸಮನ್ವಯ ಸಮಿತಿಯ ಅವಶ್ಯಕತೆ ಯಾಕಾಗಿ ಎಂದೂ ಡಿಕೆಶಿ ಪ್ರಶ್ನೆ ಮಾಡಿದ್ದಾರೆ.

ಕಾರ್ಯಧ್ಯಕ್ಷರು ಹಾಗೂ ಸಮನ್ವಯ ಸಮಿತಿ ನೇಮಿಸಿದರೆ ಅಧಿಕಾರ ಹಂಚಿಕೆಯಾಗುತ್ತದೆ. ಹೀಗಾದರೆ ಪಕ್ಷವನ್ನು ಸೂಕ್ತ ಸ್ವರೂಪದಲ್ಲಿ ಸಂಘಟಿಸಲು ಸಾಧ್ಯವಾಗುವುದಿಲ್ಲ ಇದು ಮತ್ತಷ್ಟು ಭಿನ್ನಮತೀಯ ಚಟುವಟಿಕೆಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಡಿಕೆಶಿ ಹಾಗೂ ಮೂಲಕ ಕಾಂಗ್ರೆಸ್ ಮುಖಂಡರು ವರಷ್ಠರ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಒಬ್ಬರೇ ಏಕೆ..? ಸಿದ್ದುಗೆ ಪರಂ ಗುದ್ದು..!

ಸದ್ಯ ಕಾಂಗ್ರೆಸ್ ಅಧ್ಯಕ್ಷ ಸೋನಿಯಾಗಾಂಧಿ ವಿದೇಶ ಪ್ರವಾಸಲ್ಲಿದ್ದು ಗೊಂದಲ ಬಗೆಹರಿಸುವ ಜಾವಾಬ್ದಾರಿಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ ಅವರಿಗೆ ನೀಡಿದ್ದಾರೆ. ಆದ್ರೆ ಮುಖಂಡರ ನಡುವೆ ಸಮನ್ವಯ ಮೂಡದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ