ಆ್ಯಪ್ನಗರ

ಬಡವರಿಗೆ ಸೂರು ಯೋಜನೆ ವಿವಾದ: ಸಚಿವ ಸೋಮಣ್ಣ ರಾಜೀನಾಮೆಗೆ ಖಂಡ್ರೆ ಆಗ್ರಹ

ವಸತಿ ಸಚಿವ ವಿ. ಸೋಮಣ್ಣ ರಾಜೀನಾಮೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಕುರಿತಾಗಿ ಹೇಳಿದ್ದಿಷ್ಟು.

Vijaya Karnataka Web 14 Sep 2020, 1:37 pm
ಬೆಂಗಳೂರು: ಬಡವರಿಗೆ ಸೂರು ಯೋಜನೆ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ವಸತಿ ಸಚಿವ ವಿ. ಸೋಮಣ್ಣ ರಾಜೀನಾಮೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.
Vijaya Karnataka Web eshwar khandre


ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ತನ್ನ ಮೊದಲ ಅವಧಿಯಲ್ಲೇ ಎಲ್ಲರಿಗೂ ಸೂರು ನೀಡುವುದಾಗಿ ಘೋಷಿಸಿತ್ತು. ಆದರೆ 2020ರ ಕೊನೆಗೆ ಬಂದರೂ ಅದು ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.


ಬಡವರಿಗೆ ಸ್ವಂತ ಮನೆ ಎನ್ನುತ್ತಿದ್ದ ಸರ್ಕಾರ, ಈಗ ರಾಗ ಬದಲಾಯಿಸಿ ನಗರ ಪ್ರದೇಶಗಳ ವಲಸೆ ಕಾರ್ಮಿಕರಿಗೆ ಬಾಡಿಗೆ ಮನೆ ನೀಡುವ ಯೋಜನೆ ರೂಪಿಸಲಾಗುವುದು ಎನ್ನುತ್ತಿದೆ.

ಕಾಂಗ್ರೆಸ್ ಸರ್ಕಾರ, ಗುಡಿಸಲು ಮುಕ್ತ ಕರ್ನಾಟಕದ ಗುರಿಯೊಂದಿಗೆ ಅನೇಕ ವಸತಿ‌ ಯೋಜನೆಗಳನ್ನು ರೂಪಿಸಿತ್ತು. ಆದರೆ ಬಿಜೆಪಿ ಸರ್ಕಾರ ಈ ಎಲ್ಲಾ ಯೋಜನೆಗಳನ್ನು ಹಳ್ಳ ಹಿಡಿಸಿದೆ ಎಂದು ಕಿಡಿಕಾರಿದ್ದಾರೆ.


ವಸತಿ ಯೋಜನೆಗೆ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ. 2021ರ ಜೂನ್ ಒಳಗೆ ಮನೆ ಹಂಚಿಕೆ ಮಾಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸೋಮಣ್ಣ ಅವರು ಹೇಳಿಕೆ ನೀಡಿದ್ದಾರೆ. ಆದರೆ ಕೇವಲ 30,000 ಮನೆ ಪಡೆಯಲು ಬಡ ಜನರು ಮುಂದಿನ ವರ್ಷ ಜೂನ್ ವರೆಗೆ ಏಕೆ ಕಾಯಬೇಕು? ಎಂದು ಪ್ರಶ್ನಿಸಿದ ಖಂಡ್ರೆ
ಈ ಯೋಜನೆಗಳನ್ನು ದಾರಿ ತಪ್ಪಿಸಿದ ವಸತಿ ಸಚಿವ ವಿ. ಸೋಮಣ್ಣ ಭಾವನಾತ್ಮಕ ಹೇಳಿಕೆ ನೀಡುವ ಬದಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ