ಆ್ಯಪ್ನಗರ

ಕಾಂಗ್ರೆಸ್‌ನಲ್ಲಿ ಕೆಪಿಜೆಪಿ ವಿಲೀನವಾಗಿಲ್ಲ: ಶಂಕರ್‌ ವಿಶ್ವಾಸ

ವಿಧಾನಸಭೆ ಸದಸ್ಯತ್ವದಿಂದ ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್‌ ತೀರ್ಮಾನವನ್ನು ಸುಪ್ರೀಂಕೋರ್ಟ್‌ ಒಪ್ಪುವುದಿಲ್ಲ...

Vijaya Karnataka 6 Aug 2019, 5:00 am
ಬೆಂಗಳೂರು: ವಿಧಾನಸಭೆ ಸದಸ್ಯತ್ವದಿಂದ ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್‌ ತೀರ್ಮಾನವನ್ನು ಸುಪ್ರೀಂಕೋರ್ಟ್‌ ಒಪ್ಪುವುದಿಲ್ಲ. ಕೋರ್ಟ್‌ನಲ್ಲಿ ತಮಗೆ ನ್ಯಾಯ ಸಿಗುವುದು ನಿಶ್ಚಿತ ಎಂದು ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್‌.ಶಂಕರ್‌ ಭರವಸೆ ವ್ಯಕ್ತಪಡಿಸಿದ್ದಾರೆ.
Vijaya Karnataka Web R SHANKAR (Indepedent)


ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ''ನನ್ನ ಅನರ್ಹತೆಗೆ ಕೋರ್ಟ್‌ನಲ್ಲಿ ಖಂಡಿತ ಮಾನ್ಯತೆ ಸಿಗುವುದಿಲ್ಲ ಮತ್ತು ನನ್ನ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದಿಲ್ಲ'' ಎಂದು ವಿಶ್ವಾಸ ವ್ಯಕ್ತಮಾಡಿದರು.

''ನಾನು ಪ್ರತಿನಿಧಿಸಿದ್ದ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಸಂಬಂಧ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರಿಗೆ ಪತ್ರ ಸಲ್ಲಿಸಿದ್ದೆ. ಆದರೆ, ಕ್ರಮಬದ್ಧ ದಾಖಲೆ ನೀಡುವಂತೆ ಸಭಾಧ್ಯಕ್ಷರು ಸೂಚಿಸಿದ್ದರು. ಆದರೆ, ನಾನು ಅವರು ಬಯಸಿದ್ದ ದಾಖಲೆ ನೀಡಿಲ್ಲ. ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲದ ಸ್ಥಿತಿಯಲ್ಲೇ ಸ್ಪೀಕರ್‌ ಅನರ್ಹ ಮಾಡಿದ್ದಾರೆ. ಇದನ್ನು ಕೋರ್ಟ್‌ ಒಪ್ಪುವುದಿಲ್ಲ. ನಾನು ಈಗಲೂ ಪಕ್ಷೇತರ ಶಾಸಕ'' ಎಂದು ಶಂಕರ್‌ ಹೇಳಿದರು.

''ಪಕ್ಷೇತರ ಶಾಸಕನಾಗಿ ಮೈತ್ರಿ ಸರಕಾರದೊಂದಿಗೆ ಇರಲು ಬಯಸಿದ್ದೆ. ಆದರೆ, ಸಮ್ಮಿಶ್ರ ಸರಕಾರದಲ್ಲಿನ ಕೆಲವು ಬೆಳವಣಿಗೆಗಳಿಂದ ಬೇಸರಗೊಂಡು ಬೆಂಬಲ ವಾಪಸ್‌ ಪಡೆದು ಹೊರಬರುವುದು ಅನಿವಾರ್ಯಯವಾಯಿತು'' ಎಂದು ತಮ್ಮ ನಿರ್ಧಾರವನ್ನು ಶಂಕರ್‌ ಸಮರ್ಥಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ