ಆ್ಯಪ್ನಗರ

ಕೆಪಿಎಲ್‌ ಬೆಟ್ಟಿಂಗ್‌ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕರ ವಿಚಾರಣೆ

ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ನ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಷ್ಫಕ್‌ ಅವರನ್ನು ಸಿಸಿಬಿ ಪೊಲೀಸರು ಮ್ಯಾಚ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ್ದಾರೆ.

Vijaya Karnataka 21 Sep 2019, 5:00 am
ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ನ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಲಿ ಅಷ್ಫಕ್‌ ಅವರನ್ನು ಸಿಸಿಬಿ ಪೊಲೀಸರು ಮ್ಯಾಚ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ್ದಾರೆ.
Vijaya Karnataka Web kpl betting police enquiry
ಕೆಪಿಎಲ್‌ ಬೆಟ್ಟಿಂಗ್‌ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕರ ವಿಚಾರಣೆ


ಕೆಪಿಎಲ್‌ ಪಂದ್ಯಾವಳಿ ನಡೆಯುತ್ತಿದ್ದ ವೇಳೆಯಲ್ಲಿಇತರೆ ತಂಡಗಳ ಆಟಗಾರರ ಜತೆಗೆ ಸಂಪರ್ಕದಲ್ಲಿಇದ್ದುದಲ್ಲದೆ ಮ್ಯಾಚ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ಗೆ ಯತ್ನಿಸುತ್ತಿದ್ದರು ಎನ್ನುವ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು. ಸಿಸಿಬಿಯ ನೋಟಿಸ್‌ ಪಡೆದು ವಿಚಾರಣೆಗೆ ಹಾಜರಾಗಿದ್ದ ಅಲಿ ಅವರನ್ನು ಹಲವು ಗಂಟೆಗಳ ಕಾಲ ಪ್ರಶ್ನಿಸಿ ಬಿಟ್ಟು ಕಳುಹಿಸಲಾಗಿದ್ದು ಮತ್ತೆ ಶನಿವಾರ ಹಾಜರಾಗಲೂ ಸೂಚಿಸಲಾಗಿದೆ.

ವಿಚಾರಣೆ ನಡೆಸಿದ ಸಂದೀಪ್‌ ಪಾಟೀಲ್‌

ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರೇ ಖುದ್ದು ಅಲಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕರಾಗಿ ಪಂದ್ಯಾವಳಿ ನಡೆಯುತ್ತಿದ್ದ ವೇಳೆ ಇತರೆ ತಂಡಗಳ ಆಟಗಾರರ ಜತೆ ಸಂಪರ್ಕದಲ್ಲಿರುವುದು ನಿಯಮದ ಪ್ರಕಾರ ನಿಷಿದ್ಧ. ಆದರೂ ಕೂಡ ಪ್ರತಿಸ್ಪರ್ಧಿ ತಂಡಗಳ ಆಟಗಾರರ ಜತೆಗೆ ಸಂಪರ್ಕದಲ್ಲಿಇದ್ದರು ಎನ್ನುವ ಅಂಶ ತನಿಖೆಯ ವೇಳೆ ಲಭ್ಯವಾದ ದಾಖಲೆಗಳಿಂದ ಲಭ್ಯವಾಗಿವೆ ಎಂದು ಹೇಳಲಾಗಿದೆ.

ಬಿಸಿಸಿಐ ನೆರವು

ಪ್ರಕರಣಕ್ಕೆ ಸಂಬಂಧಿಸಿ ಬಿಸಿಸಿಐ ಹಾಗೂ ಕೆಎಸ್‌ಸಿಎ ನೆರವನ್ನು ಸಿಸಿಬಿ ಅಧಿಕಾರಿಗಳು ಕೇಳಿದ್ದಾರೆ. ದಿಲ್ಲಿಯಲ್ಲಿರುವ ಬಿಸಿಸಿಐ ಅಧಿಕಾರಿಗಳ ತಂಡ ಕೂಡ ತನಿಖೆ ವಿಚಾರದಲ್ಲಿಆಸಕ್ತಿ ಹೊಂದಿದ್ದು ಐಪಿಎಲ್‌ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳ ವೇಳೆಯಲ್ಲಿಅಲಿಯ ಪಾತ್ರ ಏನೇನಿತ್ತು ಎನ್ನುವ ಬಗ್ಗೆಯೂ ಸಿಸಿಬಿ ಅಧಿಕಾರಿಗಳಿಂದಲೇ ಮಾಹಿತಿ ಹೊರಗೆ ತೆಗೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


ಗುಜರಾತ್‌ನಿಂದ ದುಬೈವರೆಗೂ

ಗುಜರಾತ್‌ ಮೂಲದ ಅಲಿ ಓದಿದ್ದು ಬೆಂಗಳೂರಿನಲ್ಲೇ. ಪದವಿ ಮುಗಿಸಿದ ಬಳಿಕ ದುಬೈನಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಡೇಟ್ಸ್‌ ಮತ್ತು ಡ್ರೈಫ್ರೂಟ್ಸ್‌ಗಳನ್ನು ತರಿಸಿ ಭಾರತದಲ್ಲಿವ್ಯಾಪಾರ ಮಾಡಲು ಆರಂಭಿಸಿದ್ದರು. ಸದ್ಯ ಬೆಂಗಳೂರಿನಲ್ಲಿರುವ ಅತೀ ದೊಡ್ಡ ಡ್ರೈಫ್ರೂಟ್ಸ್‌ ವ್ಯಾಪಾರಿಗಳಲ್ಲಿಅಲಿ ಕೂಡ ಒಬ್ಬರು. ಇದರ ಜತೆಗೆ ಅಲಿ ಟೂರ್ಸ್ ಆ್ಯಂಡ್‌ ಟ್ರಾವೆಲ್ಸ್‌ ಸಂಸ್ಥೆಯನ್ನೂ ನಡೆಸುತ್ತಿದ್ದು ಇತ್ತೀಚಿಗಷ್ಟೇ 'ಬೆಳಗಾವಿ ಪ್ಯಾಂಥರ್ಸ್' ತಂಡವನ್ನು ಖರೀದಿಸಿ ಕೆಪಿಎಲ್‌ಗೆ ಎಂಟ್ರಿ ಪಡೆದಿದ್ದರು.

ಕೆಲವೊಂದು ಮಾಹಿತಿಗಳ ಆಧಾರದಲ್ಲಿ ಕೆಪಿಎಲ್‌ ಕ್ರಿಕೆಟ್‌ ತಂಡವೊಂದರ ಮಾಲೀಕರನ್ನು ನಾವು ಪ್ರಶ್ನಿಸಿದ್ದೇವೆ. ಕೆಲವೊಂದು ಮಾಹಿತಿಗಳು ಸಿಕ್ಕಿವೆ. ಶನಿವಾರವೂ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.

-ಸಂದೀಪ್‌ ಪಾಟೀಲ್‌, ಜಂಟಿ ಆಯುಕ್ತರು, ಅಪರಾಧ ವಿಭಾಗ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ