ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆಗಳಲ್ಲಿನ ನಿಲಯ ಪಾಲಕರ ಹುದ್ದೆಗಳ ಸಂಬಂಧ ಮೂಲ ದಾಖಲೆಗಳ ಪರಿಶೀಲನೆ ನಡೆಸಲಿದೆ. ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗದ ವೆಬ್ಸೈಟ್(hಠಿಠಿp://kps್ಚ.ka್ಟ.್ಞಜ್ಚಿ.ಜ್ಞಿ)ನಲ್ಲಿ ಪ್ರಕಟಿಸಲಾಗಿದೆ. ಜ.12ರಿಂದ 29ರ ವರೆಗೆ ದಾಖಲಾತಿ ಪರಿಶೀಲನೆಗೆ ದಿನ ನಿಗದಿಯಾಗಿದ್ದು, ಅಭ್ಯರ್ಥಿಗಳಿಗೆ ಈಗಾಗಲೇ ಅಂಚೆ ಮೂಲಕ ಸೂಚನಾ ಪತ್ರ ರವಾನಿಸಲಾಗಿದೆ. ಈವರೆಗೆ ಸೂಚನಾ ಪತ್ರ ಸಿಗದವರು ಅರ್ಹತಾ ಪಟ್ಟಿಯ ಪ್ರತಿಯನ್ನು ಪಡೆದು ನಿಗದಿತ ದಿನಾಂಕದಂದು ಆಯೋಗದ ಕೇಂದ್ರ ಕಚೇರಿಗೆ ಹಾಜರಾಗಬೇಕು ಎಂದು ಕೆಪಿಎಸ್ಸಿ ಪ್ರಕಟಣೆ ತಿಳಿಸಿದೆ.
ಕೆಪಿಎಸ್ಸಿ: ಮೂಲ ದಾಖಲಾತಿ ಪರಿಶೀಲನೆ
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ವಸತಿ ಶಾಲೆಗಳಲ್ಲಿನ ನಿಲಯ ಪಾಲಕರ ಹುದ್ದೆಗಳ ಸಂಬಂಧ ಮೂಲ ದಾಖಲೆಗಳ ಪರಿಶೀಲನೆ ನಡೆಸಲಿದೆ.
Vijaya Karnataka 2 Jan 2019, 5:00 am