ಆ್ಯಪ್ನಗರ

ಕೇಂದ್ರದ ವಿರುದ್ಧ ಕೃಷ್ಣ ಬೈರೇಗೌಡ ವಾಗ್ದಾಳಿ

ಕುಡಿಯುವ ನೀರಿನ ಅನುದಾನವನ್ನು ಕೇಂದ್ರ ಕಡಿತಗೊಳಿಸಿದೆ...

Vijaya Karnataka 13 Jun 2018, 5:00 am
ಬೆಂಗಳೂರು : ಕುಡಿಯುವ ನೀರಿನ ಅನುದಾನವನ್ನು ಕೇಂದ್ರ ಕಡಿತಗೊಳಿಸಿದೆ. ನರೇಗಾ ಅನುದಾನ ಬಿಡುಗಡೆಯನ್ನೂ ಬಾಕಿಯಿರಿಸಿಕೊಂಡಿದೆ ಎಂದು ಕೃಷ್ಣ ಬೈರೇಗೌಡ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web krishna


ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿ,''ಕೇಂದ್ರ ಸರಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಲೆಕ್ಕ ಕೇಳುತ್ತಿದ್ದಾರೆ. 2013 ರಲ್ಲಿ ಕುಡಿಯುವ ನೀರಿನ ಸಂಬಂಧ ಕೇಂದ್ರ ಮತ್ತು ರಾಜ್ಯಗಳು 50:50 ಸೂತ್ರದಡಿ ಅನುದಾನ ಭರಿಸುತ್ತಿದ್ದವು. ಈಗ ಇದು 12:88 ಕ್ಕೆ ಬಂದು ನಿಂತಿದೆ. 2017-18 ರಲ್ಲಿ ರಾಜ್ಯ ಸರಕಾರ ಈ ಉದ್ದೇಶಕ್ಕೆ 2,594 ಕೋಟಿ ರೂ. ಖರ್ಚು ಮಾಡಿದೆ. ನರೇಗಾದಡಿಯೂ 1,054 ಕೋಟಿ ರೂ. ಬರುವುದು ಬಾಕಿಯಿದೆ. ನಾವು ಅಮಿತ್‌ ಶಾ ಅವರಂತೆ ಗಿಮಿಕ್‌ ಮಾಡುವುದಿಲ್ಲ. ಸರಿಯಾದ ಅಂಕಿ, ಅಂಶವಿಟ್ಟುಕೊಂಡೇ ಮಾತನಾಡುತ್ತೇವೆ,'' ಎಂದು ಹೇಳಿದರು.

''ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ತಿಳಿಯಲು ಲೈವ್‌ ವ್ಯವಸ್ಥೆ ಮಾಡಲಾಗುವುದು. ಮಳೆಯಿಂದ ಹಾಳಾಗಿರುವ ಗ್ರಾಮೀಣ ರಸ್ತೆಗಳ ದುರಸ್ತಿಗೂ ಸೂಚಿಸಲಾಗಿದೆ,'' ಎಂದರು.

ಅಪರಂಜಿಯಾಗಲು ಸಾಧ್ಯವಿಲ್ಲ

ಭ್ರಷ್ಟಾಚಾರದ ವಿಚಾರದಲ್ಲಿ ಅಪರಂಜಿ, 24 ಕ್ಯಾರೇಟ್‌ ಚಿನ್ನವೆಂದು ಹೇಳಿಕೊಂಡರೆ ಆತ್ಮವಂಚನೆಯಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ''ಎಲ್ಲವೂ ಸರಿಯಿದೆಯೆಂದರೆ ನಾನು ಮೂರ್ಖನಾಗುತ್ತೇನೆ. ಸುಧಾರಣೆಗೆ ಒತ್ತು ಕೊಡಬೇಕು. ಹಿಂದಿನ ಸರಕಾರದಲ್ಲಿ ಸಿದ್ದರಾಮಯ್ಯ ಅವರಂತಹ ನುರಿತ ಆಡಳಿತಗಾರರ ನೇತೃತ್ವದಲ್ಲಿ ಸಾಕಷ್ಟು ಉತ್ತಮ ಕೆಲಸವಾಗಿದೆ. ಕೃಷಿ ಇಲಾಖೆಯಲ್ಲೂ ಹಲವು ಸುಧಾರಣಾ ಕ್ರಮ ಕೈಗೊಳ್ಳಲಾಗಿದೆ,'' ಎಂದು ಅಭಿಪ್ರಾಯ ಪಟ್ಟಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ