ಆ್ಯಪ್ನಗರ

ಸಿದ್ದು ವಿರುದ್ಧ ಬಿದ್ದರಾ ಎಚ್‌ಡಿಕೆ?

ಸಿದ್ದರಾಮಯ್ಯ ಮನವಿ ಮೇರೆಗೆ ಫೋನ್‌ ಕದ್ದಾಲಿಕೆ ತನಿಖೆಯನ್ನು ಸಿಎಂ ಸಿಬಿಐಗೆ ವಹಿಸಿದ್ದಾರೆ. ಇದಕ್ಕಾಗಿ ಸಿದ್ದರಾಮಯ್ಯ ಪರವಾಗಿ ಅಭಿನಂದನೆ ಎಂದಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಹಳೆಯ ಒಡನಾಡಿ ವಿರುದ್ಧ ಮತ್ತೊಮ್ಮೆ ರಾಜಕೀಯ ಸಂಘರ್ಷಕ್ಕೆ ಇಳಿಯುವ ಸುಳಿವು ನೀಡಿದ್ದಾರೆ.

Vijaya Karnataka 19 Aug 2019, 5:00 am
ಬೆಂಗಳೂರು : ಸಿದ್ದರಾಮಯ್ಯ ಮನವಿ ಮೇರೆಗೆ ಫೋನ್‌ ಕದ್ದಾಲಿಕೆ ತನಿಖೆಯನ್ನು ಸಿಎಂ ಸಿಬಿಐಗೆ ವಹಿಸಿದ್ದಾರೆ. ಇದಕ್ಕಾಗಿ ಸಿದ್ದರಾಮಯ್ಯ ಪರವಾಗಿ ಅಭಿನಂದನೆ ಎಂದಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಹಳೆಯ ಒಡನಾಡಿ ವಿರುದ್ಧ ಮತ್ತೊಮ್ಮೆ ರಾಜಕೀಯ ಸಂಘರ್ಷಕ್ಕೆ ಇಳಿಯುವ ಸುಳಿವು ನೀಡಿದ್ದಾರೆ.
Vijaya Karnataka Web kumarswamy fight against siddu
ಸಿದ್ದು ವಿರುದ್ಧ ಬಿದ್ದರಾ ಎಚ್‌ಡಿಕೆ?


ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತನಾಡಿರುವ ಅವರು, ''ಯಾವುದೇ ತನಿಖೆಗೆ ಸಿದ್ಧ ಎಂದಿರುವ ಬೆನ್ನಿಗೇ ಸಿದ್ದು ಬಗ್ಗೆ ವ್ಯಂಗ್ಯವಾಡಿದ್ದಾರೆ. ಎಚ್‌ಡಿಕೆ ಅವರ ಈ ಹೇಳಿಕೆ ಸಿದ್ದು ಮತ್ತು ಬಿಎಸ್‌ವೈ ನಡುವೆಯೂ ಸಂಬಂಧ ಕಲ್ಪಿಸಿದಂತೆ ಮೇಲ್ನೋಟಕ್ಕೆ ತೋರುತ್ತಿದೆ. ಜತೆಗೆ ಸಿದ್ದು ವಿರುದ್ಧ ತಿರುಗಿ ಬೀಳಲು ಸಜ್ಜಾಗುತ್ತಿದ್ದಾರೆಯೇ ಎಂಬ ಮಾತುಗಳೂ ಕೇಳಿಬರುವಂತಾಗಿದೆ.

ಕಳೆದ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಸಿದ್ದು ಮತ್ತು ಎಚ್‌ಡಿಕೆ ಸಾಕಷ್ಟು ಟೀಕೆ ಮಾಡಿಕೊಂಡಿದ್ದರು. ನಂತರ ಎಚ್‌ಡಿಕೆ ನೇತೃತ್ವದ ದೋಸ್ತಿ ಸರಕಾರಕ್ಕೆ ಸಿದ್ದು ಒಲ್ಲದ ಮನಸ್ಸಿನಿಂದ ಬೆಂಬಲಿಸಿದ್ದರು. ಈ ಬಳಿಕವೂ ಇಬ್ಬರ ನಡುವಿನ ಬಾಂಧವ್ಯ ಸುಧಾರಿಸಿರಲಿಲ್ಲ. ಮೈತ್ರಿ ಸರಕಾರ ಪತನವಾಗಲು ಸಿದ್ದು ಆಪ್ತ ಶಾಸಕರ ರಾಜೀನಾಮೆ ಕಾರಣವೆಂದು ಖಾಸಗಿಯಾಗಿ ಹೇಳಿಕೊಂಡಿದ್ದರು ಎನ್ನಲಾಗಿತ್ತು. ಇದೀಗ '' 2008ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಹಾಗೂ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದಿದ್ದ ಫೋನ್‌ ಕದ್ದಾಲಿಕೆ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಯಲಿ. ಆಗ ಎಲ್ಲರ ಬಂಡವಾಳ ಹೊರಗೆ ಬರುತ್ತದೆ. ಅಪ್ಪ ಮಕ್ಕಳನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಶಪಥ ಮಾಡಿ 2008ರಲ್ಲಿ ಅಧಿಧಿಕಾರಕ್ಕೆ ಬಂದ ಯಡಿಯೂರಪ್ಪನ ಕಥೆ ಏನಾಗಿತ್ತು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ,'' ಎಂದು ಎಚ್‌ಡಿಕೆ ಹೇಳಿದ್ದಾರೆ. ಇದರಿಂದಾಗಿ ಬಿಎಸ್‌ವೈ ಮತ್ತು ಸಿದ್ದು ಅವರಿಂದ ಸಮಾನ ಅಂತರ ಕಾಯ್ದುಕೊಂಡು ರಾಜಕೀಯ ಹೋಟಾಟಕ್ಕೆ ಇಳಿಯಲು ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ