ಆ್ಯಪ್ನಗರ

ಜಲಮೂಲಗಳ ಜಾಗದ ಒಡೆತನ ಖಾಸಗಿಗೆ ಇಲ್ಲ: ದೇಶಪಾಂಡೆ

ಜಲಮೂಲ ರಕ್ಷಣೆಗಾಗಿ ಕಂದಾಯ ಇಲಾಖೆಯಲ್ಲಿ ಜಾರಿಯಲ್ಲಿದ್ದ 18 ವರ್ಷಗಳ ಹಿಂದಿನ ಸುತ್ತೋಲೆಯನ್ನು ಸರಕಾರ ವಾಪಸ್‌ ಪಡೆದಿದ್ದು, ಸರಕಾರಿ ...

Vijaya Karnataka 16 Jun 2018, 5:00 am
ಬೆಂಗಳೂರು:ಜಲಮೂಲ ರಕ್ಷಣೆಗಾಗಿ ಕಂದಾಯ ಇಲಾಖೆಯಲ್ಲಿ ಜಾರಿಯಲ್ಲಿದ್ದ 18 ವರ್ಷಗಳ ಹಿಂದಿನ ಸುತ್ತೋಲೆಯನ್ನು ಸರಕಾರ ವಾಪಸ್‌ ಪಡೆದಿದ್ದು, ಸರಕಾರಿ ಸ್ವಾಮ್ಯದಲ್ಲಿನ ಜಲಮೂಲಗಳ ಒಡೆತನವನ್ನು ಖಾಸಗಿಯವರಿಗೆ ವರ್ಗಾಯಿಸುವ ಪ್ರಸ್ತಾಪಗಳಿಗೆ ಒಪ್ಪಿಗೆ ನೀಡದೇ ಇರಲು ನಿರ್ಧರಿಸಲಾಗಿದೆ.
Vijaya Karnataka Web Haliyal-deshpande-cong


''ಸುಪ್ರೀಂ ಕೋರ್ಟ್‌ ಆದೇಶ ಹಾಗೂ ರಾಷ್ಟ್ರೀಯ ಹಸಿರು ಪ್ರಾಧಿಕಾರದ ನಿರ್ದೇಶನ ಹಾಗೂ ಕೆರೆ ಪ್ರಾಧಿಕಾರದ ನಿಯಮಗಳ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಇನ್ನು ಮುಂದೆ ಕೆರೆ, ಕುಂಟೆ, ಕಟ್ಟೆಯಂಥ ಜಲಮೂಲಗಳನ್ನು ಖಾಸಗಿಯವರಿಗೆ ವರ್ಗಾಯಿಸುವ ಯಾವುದೇ ಪ್ರಸ್ತಾಪವನ್ನು ರಾಜ್ಯ ಸರಕಾರಕ್ಕೆ ಕಳುಹಿಸಿಕೊಡಬಾರದು,'' ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

''ಖಾಸಗಿ ಸಂಸ್ಥೆಗಳು, ಕಂಪನಿ, ಉದ್ದಿಮೆಗಳು, ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳು ಕ್ರಯಕ್ಕೆ ಪಡೆದಿರುವ ಹಿಡುವಳಿಯಲ್ಲಿರುವ ಜಲಮೂಲಗಳನ್ನು ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಲು ಕಾನೂನು ಪ್ರಕಾರ ಅವಕಾಶವಿಲ್ಲ. ಜತೆಗೆ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಸುತ್ತಲಿನ 75 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ನಿರ್ಮಾಣ ಕಾರ್ಯ ಮಾಡದಂತೆ ಹಾಗೂ ಈಗಾಗಲೇ ಇರುವ ನಿರ್ಮಿತಿಗಳನ್ನು ತೆರವುಗೊಳಿಸುವಂತೆ ಹಸಿರು ಪೀಠ ಸೂಚಿಸಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. 2014ರ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮ ಪ್ರಕಾರ, ನೀರು ಇರುವ ಅಥವಾ ಇಲ್ಲದಿರುವ ಸರಕಾರಿ ಕೆರೆ, ಕುಂಟೆ, ಕಟ್ಟೆ, ರಾಜಕಾಲುವೆ ಇವೆಲ್ಲದರ ಒಡೆತನ ರಾಜ್ಯ ಸರಕಾರದ್ದೇ ಆಗಿದ್ದು, ಇವುಗಳ ಮೇಲಿನ ಒಡೆತನವನ್ನು ತಕ್ಷಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವರ್ಗಾಯಿಸುವಂತೆ ಆದೇಶ ನೀಡಲಾಗಿದೆ,'' ಎಂದು ಪ್ರಕಟಣೆಯಲ್ಲಿ ದೇಶಪಾಂಡೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ