ಆ್ಯಪ್ನಗರ

ಅಮಿತ್‌ ಶಾ ನಿರ್ಧಾರ ಪ್ರಶ್ನೆ ಮಾಡುವ ಸ್ಥಿತಿಯಲ್ಲಿ ನಾವಿಲ್ಲ: ಮಾಧುಸ್ವಾಮಿ

ಸಿಎಂ ಯಡಿಯೂರಪ್ಪ ಆಪ್ತ ಸಚಿವ ಜೆಸಿ ಮಾಧುಸ್ವಾಮಿ ಮೂವರು ಡಿಸಿಎಂ ನೇಮಕ ವಿಚಾರವಾಗಿ ಅಸಹಾಯಕತೆ ವ್ಯಕ್ತ ಪಡಿಸಿದ್ದು, ಅಮಿತ್‌ ಶಾ ನಿರ್ಧಾರ ಪ್ರಶ್ನಿಸುವ ಸ್ಥಿತಿಯಲ್ಲಿ ನಾವಿಲ್ಲ ಎಂದಿದ್ದಾರೆ.

Vijaya Karnataka Web 31 Aug 2019, 3:47 pm
ಮಂಡ್ಯ: ರಾಜ್ಯದಲ್ಲಿ ಮೂವರು ಡಿಸಿಎಂ ಮಾಡಿದ ವಿಚಾರವಾಗಿ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಹೈಕಮಾಂಡ್‌ ತೀರ್ಮಾನ ತೆಗೆದುಕೊಂಡಿದೆ. ಮೇಲಿನವರಿಗೆ ನಮಗಿಂತ ಜಾಸ್ತಿ ತಿಳುವಳಿಕೆ ಇದೆ. ಅಮಿತ್ ಷಾ ನಿರ್ಧಾರವನ್ನ ಪ್ರಶ್ನೆ ಮಾಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.
Vijaya Karnataka Web Madhuswamy


ಸಂಸದ ಶ್ರೀನಿವಾಸ್‌ ಪ್ರಸಾದ್‌ ರಾಜ್ಯದಲ್ಲಿ ಮೂವರು ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದ್ದರ ವಿಚಾರವಾಗಿ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಒಬ್ಬೊಬ್ಬರದ್ದು ಒಂದೊಂದು ರೀತಿಯ ಅಭಿಪ್ರಾಯವಿರುತ್ತದೆ. ಎಲ್ಲವನ್ನೂ ಹೈಕಮಾಂಡ್‌ ನಿರ್ಧರಿಸುತ್ತದೆ ಎಂದರು. ಇನ್ನು ಮತ್ತಷ್ಟು ಶಾಸಕರು ಮಂತ್ರಿ ಸ್ಥಾನದ ಆಕಾಂಕ್ಷೆ ಹೊಂದಿರುವ ವಿಚಾರವಾಗಿ, ಇದು ಸ್ವಾಭಾವಿಕ. ಪಂಚಾಯ್ತಿ ಸದಸ್ಯ ಚೇರ್ಮನ್ ಆಗಬೇಕು ಎಂದಾಗ ಶಾಸಕರಾದವರು ಮಂತ್ರಿ ಆಗಬೇಕು ಅಂತ ಕೇಳುತ್ತಾರೆ ಎಂದರು.

ಪ್ರವಾಹ ಸಂತ್ರಸ್ತರಿಗೆ ನೆರವು ಕೊಡಲು ಸರಕಾರದ ವತಿಯಿಂದ ನಾವು ಕಮಿಟಿ ಮಾಡಿ ಚರ್ಚಿಸಿ ಎರಡು ದಿನ ಕಳೆದಿದೆ. ಸಂತ್ರಸ್ತರಿಗೆ ತುರ್ತು ನೆರವು ಕೊಟ್ಟಿದ್ದೀವಿ. 32 ಸಾವಿರ ಕೋಟಿ ನಷ್ಟ ಆಗಿದೆ ಎಂದು ವರದಿ ತಯಾರಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ ಪರಿಹಾರದ ಬಗ್ಗೆ ಮನವಿ ಮಾಡುತ್ತೇವೆ ಎಂದು ಮಾಧುಸ್ವಾಮಿ ತಿಳಿಸಿದರು.

ಜೆಡಿಎಸ್‌ನ ಮಾಜಿ ಸಚಿವ ಪುಟ್ಟರಾಜು ಮತ್ತು ಮಾಧುಸ್ವಾಮಿ ಭೇಟಿ ವಿಚಾರವಾಗಿ ಅವರು ನನ್ನ ಸ್ನೇಹಿತರು ಭೇಟಿ ಮಾಡಿದ್ದೀವಿ ಅಷ್ಟೇ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ