ಆ್ಯಪ್ನಗರ

ಚುನಾವಣಾ ತರಬೇತಿ ಮುಂದೂಡಲು ಉಪನ್ಯಾಸಕರ ಮನವಿ

ಮೌಲ್ಯಮಾಪನ ಕಾರ್ಯಕ್ಕೆ ಒಟ್ಟು 18,005 ಸಹ ಮೌಲ್ಯಮಾಪಕರು ಮತ್ತು 3,114 ಉಪ ಮುಖ್ಯ ಮೌಲ್ಯಮಾಪಕರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನಿಯೋಜನೆ ಮಾಡಿದೆ.

Vijaya Karnataka Web 25 Mar 2019, 3:12 pm
ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿಯೋಜನೆಗೊಂಡಿರುವ ಉಪನ್ಯಾಸಕರನ್ನು ಲೋಕಸಭೆ ಚುನಾವಣಾ ಕಾರ್ಯಕ್ಕೂ ನಿಯೋಜಿಸಿ, ಚುನಾವಣಾ ತರಬೇತಿಯನ್ನು ಸಹ ಆಯೋಜಿಸಿರುವುದು ಉಪನ್ಯಾಸಕರಿಗೆ ತಲೆ ನೋವಾಗಿ ಪರಿಣಮಿಸಿದೆ.
Vijaya Karnataka Web Poll


ಮೌಲ್ಯಮಾಪನ ಕಾರ್ಯಕ್ಕೆ ಒಟ್ಟು 18,005 ಸಹ ಮೌಲ್ಯಮಾಪಕರು ಮತ್ತು 3,114 ಉಪ ಮುಖ್ಯ ಮೌಲ್ಯಮಾಪಕರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನಿಯೋಜನೆ ಮಾಡಿದೆ. ಇವರಲ್ಲಿ ಬಹುತೇಕ ಉಪನ್ಯಾಸಕರನ್ನು ಪಿಆರ್‌ಒ (ಪ್ರಿಸೈಡಿಂಗ್‌ ಆಫೀಸರ್ಸ್‌) ಮತ್ತು ಎಪಿಆರ್‌ಒಗಳನ್ನಾಗಿ ಚುನಾವಣಾ ಕೆಲಸಕ್ಕೂ ನಿಯೋಜಿಸಲಾಗಿದೆ. ಮಾ.31ರಂದು ಅಥವಾ ಏಪ್ರಿಲ್‌ ಮೊದಲ ವಾರದಲ್ಲಿ ಚುನಾವಣಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಮೌಲ್ಯಮಾಪನ ಕೇಂದ್ರದಿಂದ ಒಂದು ದಿನದ ಮಟ್ಟಿಗೆ ಚುನಾವಣಾ ತರಬೇತಿಗೆ ಬಂದು ಹೋಗಲು ತೀವ್ರ ತೊಂದರೆಯಾಗುತ್ತಿದ್ದು, ತರಬೇತಿ ಮುಂದೂಡುವಂತೆ ಉಪನ್ಯಾಸಕರು ಮನವಿ ಮಾಡಿದ್ದಾರೆ.

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಜತೆಗೆ, ಚುನಾವಣಾ ಕಾರ್ಯಗಳಿಗೆ ಎಷ್ಟು ಮಂದಿ ಉಪನ್ಯಾಸಕರು ನಿಯೋಜನೆಗೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿಯಲ್ಲ. ಮೌಲ್ಯಮಾಪನ ಪೂರ್ಣಗೊಂಡ ನಂತರ ಚುನಾವಣಾ ತರಬೇತಿಯನ್ನು ಹಮ್ಮಿಕೊಳ್ಳುವಂತೆ ಆಯೋಗಕ್ಕೆ ಮನವಿ ಮಾಡಲಾಗುವುದು.

ಡಾ.ಪಿ.ಸಿ.ಜಾಫರ್‌, ನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ