ಆ್ಯಪ್ನಗರ

6ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮವಿರಲಿ: ಡಾ.ಎಲ್‌.ಹನುಮಂತಯ್ಯ

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 6ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಬೋಧನೆಗೆ ಅವಕಾಶವಿರಲಿ,'' ಎಂದು ರಾಜ್ಯಸಭಾ ಸದಸ್ಯ ಡಾ.ಎಲ್‌.ಹನುಮಂತಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Vijaya Karnataka Web 31 Jul 2020, 10:25 pm
ಬೆಂಗಳೂರು: ''5ನೇ ತರಗತಿ ವರೆಗೆ ಬೋಧನಾ ಮಾಧ್ಯಮ ಆಯಾ ರಾಜ್ಯಭಾಷೆಯೇ ಆಗಿರಲಿ. ಆದರೆ, ವಿಜ್ಞಾನ, ತಾಂತ್ರಿಕ ಶಿಕ್ಷಣ ಹಾಗೂ ಉನ್ನತ ಶಿಕ್ಷಣದ ಉದ್ದೇಶದಿಂದ 6ನೇ ತರಗತಿಯಿಂದ ಕಲಿಕಾ ಮಾಧ್ಯಮವನ್ನು ವಿದ್ಯಾರ್ಥಿಗಳು ಅಥವಾ ಪೋಷಕರ ಆಯ್ಕೆಗೆ ಬಿಡಬೇಕು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 6ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಬೋಧನೆಗೆ ಅವಕಾಶವಿರಲಿ,'' ಎಂದು ರಾಜ್ಯಸಭಾ ಸದಸ್ಯ ಡಾ.ಎಲ್‌.ಹನುಮಂತಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web Dr L hanumanthaiah


''ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ(ಎನ್‌ಇಪಿ) ಸಾಕಷ್ಟು ಗೊಂದಲಗಳಿವೆ. ಶಿಕ್ಷಣ ಬೋಧನಾ ಮಾಧ್ಯಮದ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಅಸ್ಪಷ್ಟತೆಯಿಂದ ಕೂಡಿದೆ. ಮಕ್ಕಳಿಗೆ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡುವ ಬಗ್ಗೆ ಪ್ರಸ್ತಾಪಿಸಿರುವುದು ಸಾಕಷ್ಟು ಅಪಾರ್ಥಗಳಿಗೆ ಎಡೆ ಮಾಡಿಕೊಡಲಿದೆ.

ಒಂದು ರಾಜ್ಯದಲ್ಲಿ ಹಲವು ಮಾತೃಭಾಷೆಗಳನ್ನಾಡುವ ಜನಗಳಿದ್ದಾರೆ. ಆದ್ದರಿಂದ, ಶಿಕ್ಷಣ ಮಾಧ್ಯಮ ಎಂಬುದು ರಾಜ್ಯ ಭಾಷೆಯಲ್ಲಿರಬೇಕು. ಎಲ್ಲಾಮಾತೃಭಾಷೆಯ ಜನರು ರಾಜ್ಯಭಾಷೆಯನ್ನು ಸಾಮಾನ್ಯವಾಗಿ ಕಲಿತಿರುತ್ತಾರೆ. ಈ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕು,'' ಎಂದು ಒತ್ತಾಯಿಸಿದರು.

ಪಠ್ಯಕ್ರಮ ಕಡಿತ ಸರಿಯಲ್ಲ: ಹೈಬ್ರಿಡ್‌ ಶಿಕ್ಷಣ ಅವಶ್ಯ- ಡಾ. ಉಷಾಪ್ರಭಾ ಎನ್‌. ನಾಯಕ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ